ವಾಷಿಂಗ್ಟನ್: ಹೊಸ ಮತ್ತು ವಿಭಿನ್ನವಾದ ಟೇಸ್ಟ್ ಇರುವ ಆಹಾರವನ್ನು ಸೇವಿಸುವುದು ಎಂದರೆ ಆಹಾರ ಪ್ರಿಯರಿಗೆ ಸಖತ್ ಇಷ್ಟ. ಊಟ, ತಿಂಡಿಯಷ್ಟೇ ಪ್ರಾಮುಖ್ಯತೆಯನ್ನು ಕೂಲ್ ಆಗಿರುವ ಐಸ್‍ಕ್ರೀಮ್‍ಗೆ ನೀಡುತ್ತೇವೆ. ಐಸ್‍ಕ್ರೀಮ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ, ನಾಲಿಗೆ ಚಪ್ಪರಿಸಿ ತಿನ್ನುವ ಐಸ್‍ಕ್ರೀಮ್ ಪ್ರಿಯರಿಗೆಂದೆ ಮೆಕ್‌ಡೋನಾಲ್ಡ್ ಇದೀಗ ಕೊತ್ತಂಬರಿ ಸೊಪ್ಪಿನ ಐಸ್‍ಕ್ರೀಮ್‍ನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಜಗತ್ತಿನ ವಿವಿಧ ದೇಶಗಳಲ್ಲಿ ಹಲವು ಬ್ಯಾಂಚ್ ಹೊಂದಿರುವ ಮೆಕ್‌ಡೋನಾಲ್ಡ್ ಇದೀಗ ಹೊಸ ಆಹಾರವನ್ನು ಪರಿಚಿಯಿಸಿದೆ. ಕೊತ್ತಂಬರಿ ಸೊಪ್ಪಿನ ಐಸ್‍ಕ್ರೀಮ್‍ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿದೆ. ಬಹುತೇಕ ಆಹಾರ ಪ್ರಿಯರು ಕೊತ್ತಂಬರಿ ಐಸ್‍ಕ್ರೀಮ್‍ನ್ನು ನೋಡಿ ಮೂಗು ಮುರಿದಿದ್ದಾರೆ. ಕೆಲವರು ಒಮ್ಮೆಯಾದರೂ ಟೇಸ್ಟ್ ನೋಡಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
Mcdonald’s China launched a Cilantro Sundae special menu item today, which is interesting… pic.twitter.com/uHgA3vyn2Y
— Daniel Ahmad (@ZhugeEX) February 21, 2022
ಚೀನಾದ ಮೆಕ್‌ಡೋನಾಲ್ಡ್ ಕಂಪನಿ ಈ ಕೊತ್ತಂಬರಿ ಐಸ್ ಕ್ರೀಮ್ ಫೆ. 21ರಂದು ಪರಿಚಯಿಸಿದೆ. ಈ ಹೊಸ ಆಹಾರ ಜಗತ್ತಿನೆಲ್ಲೆಡೆ ವೈರಲ್ ಆಗಿದೆ. ಮೆಕ್‌ಡೋನಾಲ್ಡ್ ಅಮೆರಿಕದ ಆಹಾರ ತಯಾರಿಕಾ ಕಂಪನಿಯಾಗಿದೆ. ಪಿಜ್ಜಾ, ಬರ್ಗರ್‌ನಂತಹ ಹಲವು ಬಗೆಯ ಆಹಾರಗಳನ್ನು ತಯಾರಿಸುವ ಕಂಪನಿಯಾಗಿದೆ. ಜಗತ್ತಿನ ಹಲವು ದೇಶಗಳಲ್ಲಿ ತನ್ನ ಬ್ರಾಂಚ್‍ನ್ನು ಸ್ಥಾಪಿಸಿ ಆಹಾರ ಪ್ರಿಯರ ಗಮನ ಸೆಳೆದಿದೆ. ಇದನ್ನೂ ಓದಿ: ಹರ್ಷ ಮನೆಗೆ ಬಿಜೆಪಿ ನಾಯಕರ ಭೇಟಿ, ಸಾಂತ್ವನ