ಲಂಡನ್: ಕ್ರಿಕೆಟ್‍ನಲ್ಲಿ ಮಹಿಳಾ ಮತ್ತು ಪುರುಷರ ಲಿಂಗ ಸಮಾನತೆ ಸಲುವಾಗಿ ಪ್ರಸ್ತುತ ಬಳಕೆಯಲ್ಲಿರುವ ಬ್ಯಾಟ್ಸ್‌ಮ್ಯಾನ್ ಪದದ ಬದಲಾಗಿ ಬ್ಯಾಟರ್ ಪದ ಬಳಸುವಂತೆ ಮಾರ್ಲೆಬೋನ್ ಕ್ರಿಕೆಟ್ ಸಂಸ್ಥೆ(ಎಂಸಿಸಿ) ತೀರ್ಮಾನಿಸಿದೆ.
Advertisement
ಎಂಸಿಸಿ ಜಾರಿಗೊಳಿಸುವ ಕ್ರಿಕೆಟ್ ನಿಯಮಗಳನ್ನು ಪಾಲಿಸುವ ಐಸಿಸಿ ಇದೀಗ ಈ ಮಹತ್ವದ ಬದಲಾವಣೆಯನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಎಂಸಿಸಿ ಕ್ರಿಕೆಟ್‍ನಲ್ಲಿ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಕಾನೂನು ಉಪ ಸಮಿತಿಯ ಜೊತೆ ಚರ್ಚಿಸಿ ಕ್ರಿಕೆಟ್‍ನಲ್ಲಿ ನಿಯಮಗಳನ್ನು ಜಾರಿಗೊಳಿಸುತ್ತದೆ. ಇದೀಗ ಮಹಿಳಾ ಕ್ರಿಕೆಟ್ ಕೂಡ ಪುರುಷ ಕ್ರಿಕೆಟ್ ನಂತೆ ಜನಪ್ರಿಯತೆ ಗಳಿಸುತ್ತಿದೆ. ಆದರೆ ಕ್ರಿಕೆಟ್‍ನಲ್ಲಿ ಬ್ಯಾಟ್ಸ್‌ಮ್ಯಾನ್ ಎಂಬ ಪದ ಮಹಿಳಾ ಕ್ರಿಕೆಟ್‍ನಲ್ಲಿ ಸರಿಹೊಂದುತ್ತಿರಲಿಲ್ಲ. ಹಾಗಾಗಿ ಈ ಬದಲಾವಣೆಗೆ ಮುಂದಾಗಿದೆ. ಇದನ್ನೂ ಓದಿ: ಐಪಿಎಲ್‍ಗೂ ತಟ್ಟಿದ ಕೊರೊನಾ – ನಟರಾಜನ್‍ಗೆ ಸೋಂಕು, 6 ಮಂದಿ ಕ್ವಾರಂಟೈನ್
Advertisement
MCC has today announced amendments to the Laws of Cricket to use the gender-neutral terms “batter” and “batters”, rather than “batsman” or “batsmen”.
— Marylebone Cricket Club (@MCCOfficial) September 22, 2021
Advertisement
ಈಗಾಗಲೇ ಕ್ರಿಕೆಟ್‍ನಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮನಾಗಿ ಬೌಲರ್ ಮತ್ತು ಫೀಲ್ಡರ್ ಎಂಬ ಪದ ಬಳಕೆಯಾಗುತ್ತಿದೆ. ಇದೀಗ ಬ್ಯಾಟ್ಸ್‌ಮ್ಯಾನ್ ಬದಲಾಗಿ ಬ್ಯಾಟರ್ ಅಥವಾ ಬ್ಯಾಟರ್ಸ್ ಪದ ಬಳಕೆಗೆ ಎಂಸಿಸಿ ಮುಂದಾಗಿದ್ದು, ಈ ಮೂಲಕ ಕ್ರಿಕೆಟ್‍ನಲ್ಲಿ ಲಿಂಗ ಸಮಾನತೆಗಾಗಿ ಶ್ರಮಿಸಿದೆ. ಇದನ್ನೂ ಓದಿ: ಸ್ಟೇಡಿಯಂನಲ್ಲಿ ಮಹಿಳಾ ಪ್ರೇಕ್ಷಕರು ಇದ್ದಾರೆ, ಪ್ರಸಾರ ಮಾಡಬೇಡಿ – ಅಫ್ಘಾನಿಸ್ಥಾನದಲ್ಲಿ ಐಪಿಎಲ್ ಬ್ಯಾನ್
Advertisement