ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಅಂಕ ವ್ಯವಸ್ಥೆ, ಗ್ರೇಡ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಅಂತ ಉನ್ನತ ಶಿಕ್ಷಣ ಸಚಿವ ಸುಧಾಕರ್ (MC Sudhakar) ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ (Congress) ಮಂಜುನಾಥ್ ಭಂಡಾರಿ ಪ್ರಶ್ನೆ ಕೇಳಿದರು. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ (Karnataka Universities) ಅಂಕಗಳು ನೀಡುವ ವ್ಯವಸ್ಥೆ ಒಂದೊಂದು ವಿವಿಗೆ ಒಂದೊಂದು ವ್ಯವಸ್ಥೆ ಇದೆ. ವಿವಿಗಳಲ್ಲಿ ಮೌಲ್ಯಮಾಪನ ವ್ಯವಸ್ಥೆ ಭಿನ್ನವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗ್ತಿದೆ. ಹೀಗಾಗಿ ಏಕರೂಪದ ಮೌಲ್ಯಮಾಪನ ವ್ಯವಸ್ಥೆ ಜಾರಿ ಮಾಡಬೇಕು. ಫೇಕ್ ಡಾಕ್ಟರೇಟ್ ಕೊಡುವ ವಿವಿಗಳು ಜಾಸ್ತಿ ಆಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಪದವಿ ಪಡೆದ ಮೇಲೆ ಪದವಿಯನ್ನ ರಿಜಿಸ್ಟರ್ ಮಾಡಿಸುವ ವ್ಯವಸ್ಥೆ ಜಾರಿ ಮಾಡಬೇಕು. ನಮ್ಮ ಸರ್ಕಾರಿ ವಿವಿಗಳಲ್ಲಿ ಅಂಕಗಳು ನೀಡುವ ವ್ಯವಸ್ಥೆ ಬದಲಾಗಿ ಗ್ರೇಡ್ ವ್ಯವಸ್ಥೆ ವಿವಿಗಳಲ್ಲಿ ಜಾರಿ ಮಾಡಬೇಕು ಅಂತ ಒತ್ತಾಯಿಸಿದರು.
Advertisement
Advertisement
ಇದಕ್ಕೆ ಸಚಿವ ಸುಧಾಕರ್ ಉತ್ತರ ನೀಡಿ, ರಾಜ್ಯದಲ್ಲಿ 30 ಖಾಸಗಿ ವಿವಿಗಳು ಇವೆ. ಖಾಸಗಿ ವಿವಿಗಳಲ್ಲಿ ಗ್ರೇಡಿಂಗ್ ಸಿಸ್ಟಮ್, ಅಂಕ ವ್ಯವಸ್ಥೆ ಬೇರೆ ಬೇರೆ ಇದೆ. ನಮ್ಮ ಸರ್ಕಾರ ವಿವಿಗಳ ವ್ಯವಸ್ಥೆ ಬೇರೆ ಇದೆ. ಇದರಿಂದ ಸಮಸ್ಯೆ ಆಗ್ತಿದೆ. ಇತ್ತೀಚೆಗೆ ಒಬ್ಬ ವಿದ್ಯಾರ್ಥಿ ಸಹ ಅಂಕ ಕಡಿಮೆ ಬಂತು ಅಂತ ಆತ್ಮಹತ್ಯೆ ಮಾಡಿಕೊಂಡ. ಇದರಿಂದಾಗಿ ಅಂಕ ಮಾದರಿ ಅಧ್ಯಯನಕ್ಕೆ ಒಂದು ಸಮಿತಿ ಮಾಡಿದ್ವಿ. ಸಮಿತಿ ಎಲ್ಲಾ ವಿವಿಗಳಲ್ಲಿ ಅಂಕ ಮಾದರಿ, ಗ್ರೇಡ್ ಮಾದರಿ ಏಕರೂಪವಾಗಿ ಮಾಡಬೇಕು ಅಂತ ವರದಿ ಕೊಟ್ಟಿದೆ. ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಇದನ್ನು ಇಟ್ಟು ನಿರ್ಧಾರ ಮಾಡ್ತೀವಿ. ಖಾಸಗಿ, ಸರ್ಕಾರ ವಿವಿಗಳಿಗೆ ಏಕರೂಪದ ಅಂಕ, ಗ್ರೇಡ್ ವ್ಯವಸ್ಥೆ ಜಾರಿ ಮಾಡ್ತೀವಿ ಎಂದರು. ಇದನ್ನೂ ಓದಿ: ಧೈರ್ಯವಾಗಿ ಪ್ರಶ್ನಿಸಿ ಅಂದಿದ್ದು ತಪ್ಪಿಲ್ಲ- ಕುವೆಂಪು ಬರಹ ಬದಲಿಕೆಗೆ ಪ್ರಿಯಾಂಕ್ ಖರ್ಗೆ ಸಮರ್ಥನೆ
Advertisement
Advertisement
ಡಾಕ್ಟರೇಟ್ ಪದವಿಗಳ ಬಗ್ಗೆ ಸ್ವಲ್ಪ ಗೊಂದಲ ಇದೆ. ಸುಪ್ರೀಂ ಕೋರ್ಟ್ ಆದೇಶದ ಮೇಲೆ ನಾವು ಇದನ್ನ ಜಾರಿ ಮಾಡ್ತೀವಿ. ಖಾಸಗಿ ವಿವಿಗಳು ಡಾಕ್ಟರೇಟ್ ಕೊಡುವ ವ್ಯವಸ್ಥೆ ಮಾಡುತ್ತಿವೆ. ಹೀಗಾಗಿ ಎಲ್ಲಾ ವಿವಿಗಳಲ್ಲಿ ಏಕರೂಪದ ಡಾಕ್ಟರೇಟ್ ವ್ಯವಸ್ಥೆ ತರುವ ನಿಟ್ಟಿನಲ್ಲಿ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ: ಸರ್ಕಾರದ ಮುಟ್ಟಾಳತನ: ಜೋಶಿ ಆಕ್ರೋಶ
ಪದವಿ ವಿದ್ಯಾರ್ಥಿಗಳು ಪದವಿ ಪಡೆದ ಮೇಲೆ ರಿಜಿಸ್ಟರ್ ಮಾಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಎಂಜಿನಿಯರಿಂಗ್ ಸೇರಿ ಹಲವು ಪದವಿಗಳ ರಿಜಿಸ್ಟರ್ ಮಾಡೋ ವ್ಯವಸ್ಥೆ ಇದೆ. ಈ ವಿಚಾರವಾಗಿ ಏಕರೂಪದ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ತೀವಿ ಅಂತ ಭರವಸೆ ನೀಡಿದರು. ಇದನ್ನೂ ಓದಿ: ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಬಿಸಿಯೂಟ- ಖಾದರ್ ಘೋಷಣೆ