– ಸಿಎಂ, ಡಿಸಿಎಂ, ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ: ಶಾಸಕ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ: ಡಿಕೆ ಶಿವಕುಮಾರ್ (DK Shivakumar) ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ (MC Sudhakar) ಹೇಳಿದರು.
ರಾಜ್ಯದಲ್ಲಿ ನವೆಂಬರ್‌ನಲ್ಲಿ ಕ್ರಾಂತಿ ಚರ್ಚೆ ವಿಚಾರಕ್ಕೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ಪ್ರತಿಕ್ರಿಯಿಸಿ, ಯಾವ ಕ್ರಾಂತಿಯೂ ಇಲ್ಲ ಬರೀ ಭ್ರಾಂತಿ ಅಷ್ಟೆ. ಕಾಂಗ್ರೆಸ್ ಹೈಕಮಾಂಡ್ ಪ್ರಸ್ತುತ ಬಿಹಾರ ಚುನಾವಣೆ ಕಡೆ ಗಮನ ಇದೆ. ಕ್ರಾಂತಿಯ ಬಗ್ಗೆ ನಮಗ್ಯಾರಿಗೂ ಮಾಹಿತಿ ಇಲ್ಲ. ಕಾಂಗ್ರೆಸ್ ಹೈಕಮಾಂಡ್, ಸಿಎಂ, ಡಿಸಿಎಂ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು. ಇದನ್ನೂ ಓದಿ: ದೆಹಲಿ ಹೆಸರು ‘ಇಂದ್ರಪ್ರಸ್ಥ’ ಎಂದು ಬದಲಾಯಿಸಲು ಅಮಿತ್ ಶಾಗೆ ಪತ್ರ
ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವ ಇಂಗಿತದ ಬಗ್ಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಅವಕಾಶ ಇದೆ ಅಂದ್ರೆ ಯಾರಾದ್ರೂ ಬೇಡ ಅಂತಾರಾ? ಡಿಕೆಶಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಜೋಡೆತ್ತುಗಳಾಗಿ ಕೆಲಸ ಮಾಡಿದ್ದಾರೆ. ಹೈಕಮಾಂಡ್ ತೆಗೆದುಕೊಳ್ಳೊ ತಿರ್ಮಾನಕ್ಕೆ ನಾವು ಬದ್ಧ ಎಂದು ಚಿಕ್ಕಬಳ್ಳಾಪುರದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಹೇಳಿದರು.
ಇದೇ ವೇಳೆ ಈಗ ಹುಟ್ಟಿದ ಮಕ್ಕಳಿಗೆ ಸ್ಮಾರ್ಟ್‌ಫೋನ್ ಬೇಕಿದೆ. ಫೋನ್ ಸಿಕ್ಕ ತಕ್ಷಣ ಪಿಳಿ ಪಿಳಿ ಅಂತ ಕಣ್ಣು ಮಿಟುಕಿಸುತ್ತೆ ಅಂತ ಸಚಿವ ಸಂಪುಟದ ಆಸೆ ವ್ಯಕ್ತಪಡಿಸಿರೋಗೆ ಕುಟಕುವ ಕೆಲಸ ಮಾಡಿದರು. ಇದನ್ನೂ ಓದಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರ ಅಥವಾ ಡಿ.ಕೆ.ಶಿವಕುಮಾರ?: ಹೆಚ್‌ಡಿಕೆ ಟಾಂಗ್
ಸಿಎಂ, ಡಿಸಿಎಂ, ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ:
ಇನ್ನು ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ರಾಜ್ಯದಲ್ಲಿ ಅದೇನು ಕ್ರಾಂತಿ ಆಗುತ್ತೊ ಗೊತ್ತಿಲ್ಲ. ಒಟ್ಟಿನಲ್ಲಿ ಸಿಎಂ, ಡಿಸಿಎಂ, ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದರು. ಇದನ್ನೂ ಓದಿ: ನಮ್ಮ ಸರ್ಕಾರದ ಆಳ್ವಿಕೆಯಲ್ಲಿ ಅಭಿವೃದ್ಧಿಯ ವೇಗ ಬಹಳಷ್ಟು ಹೆಚ್ಚಾಗಿದೆ – ಎನ್‌ಡಿಎಗೆ ಮತ ನೀಡುವಂತೆ ನಿತೀಶ್ ಕುಮಾರ್ ವಿಡಿಯೋ ಸಂದೇಶ
ರಾಜಭವನಕ್ಕೆ ಹೋಗ್ತೇನೆ
ಇದೇ ವೇಳೆ ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೂ ಒಂದು ಅವಕಾಶ ಸಿಗಲಿ. ನಾನು ಯಾವುದೋ ಒಂದು ರೂಪದಲ್ಲಿ ರಾಜಭವನಕ್ಕೆ ಹೋಗ್ತೇನೆ. ಬಲಿಜ ಸಮುದಾಯದಲ್ಲಿ ನಾನೊಬ್ಬನೇ ಶಾಸಕ ಎಂದು ಸಚಿವನಾಗುವ ಆಸೆ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾಲಿ ಸಚಿವ ಡಾ ಎಂ ಸಿ ಸುಧಾಕರ್ ರನ್ನ ಮುಂದುವರೆಸಲು ತಕರಾರು ಇಲ್ಲ, ಬಾಗೇಪಲ್ಲಿ ಹಿರಿಯ ಶಾಸಕ ಎಸ್.ಎನ್ ಸುಬ್ಬಾರೆಡ್ಡಿಗೆ ಕೊಟ್ಟರೂ ತಕರಾರಿಲ್ಲ. ನಾನೇನೂ ಸನ್ಯಾಸಿಯಲ್ಲ. ನನಗೂ ಸಚಿವ ಆಗೋ ಆಸೆ ಇದೆ ಎಂದರು.

