ವಿಜಯಪುರ: ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಶಾಸಕ ಹಾಗೂ ಕೆಪಿಸಿಸಿ (KPCC) ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ (MB Patil) ಅವರ ಕಂಚಿನ ಪ್ರತಿಮೆ ಲೋಕಾರ್ಪಣೆಗೆ ಸಿದ್ಧಗೊಂಡಿದೆ.
ಜಲಸಂಪನ್ಮೂಲ ಸಚಿವರಾಗಿ ಬಬಲೇಶ್ವರ ಕ್ಷೇತ್ರಕ್ಕೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಿರುವ ಕೃತಜ್ಞತೆಗಾಗಿ ತಾಲೂಕಿನ ಸಂಗಾಗಪುರ ಎಸ್.ಹೆಚ್ ಗ್ರಾಮದ ಜನರು ಎಂ.ಬಿ ಪಾಟೀಲ್‌ರ ಪ್ರತಿಮೆ ನಿರ್ಮಿಸಿದ್ದು, ಲೋಕಾರ್ಪಣೆಗೊಳಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ನರ್ಸ್ ವೇಷ ಧರಿಸಿ ಮಗು ಕಿಡ್ನಾಪ್ – ಮರಳಿ ತಾಯಿಯ ಮಡಿಲು ಸೇರಿದ ನವಜಾತ ಶಿಶು
ಇದೇ ಮಾರ್ಚ್ 17ರಂದು ನಡೆಯುವ ಅದ್ಧೂರಿ ಸಮಾರಂಭದಲ್ಲಿ ಪ್ರತಿಮೆ ಲೋಕಾರ್ಪಣೆಗೊಳಿಸಲಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಹಾಡಿಗೆ ಕುಣಿಯಲಿರುವ ಈ ಯುವತಿ ಯಾರು?
2023ರ ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election), 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಂತ್ರ ರೂಪಿಸಲು ಮುಂದಾಗಿದ್ದ ಎಐಸಿಸಿ, ಲಿಂಗಾಯತ ಸಮುದಾಯದ ಪ್ರಬಲ ಮತದಾರರನ್ನು ಸೆಳೆಯುವ ಸಲುವಾಗಿ ಎಂ.ಬಿ.ಪಾಟೀಲ್ ಅವರನ್ನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕಳೆದ ವರ್ಷ ನೇಮಿಸಿತ್ತು.