ಬೆಂಗಳೂರು: ಮುಡಾ ಕೇಸ್ ಡೈವರ್ಟ್ ಮಾಡಲು ದರ್ಶನ್ (Darshan) ಫೋಟೋ ಲೀಕ್ ಮಾಡಿಸಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿಕೆ ವಿಚಾರವಾಗಿ ಸಚಿವ ಎಂ.ಬಿ.ಪಾಟೀಲ್ (M.B Patil) ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಹ್ಲಾದ್ ಜೋಶಿ ತಿಳಿದವರು, ಅವರು ಈ ರೀತಿ ಮಾತಾನಾಡಿದ್ದು ಸರಿಯಲ್ಲ. ದರ್ಶನ್ ರಾಜಾತಿಥ್ಯ ವಿಚಾರ ಗಂಭೀರವಾದ ಪ್ರಕರಣ. ನಾನು ಹೋಮ್ ಮಿನಿಸ್ಟರ್ ಆಗಿದ್ದಾಗಲೂ ಜೈಲಿನಲ್ಲಿ ಈ ರೀತಿಯ ವ್ಯವಸ್ಥೆ ಗಳನ್ನು ನೋಡಿದ್ದೇನೆ. ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಅದಕ್ಕಾಗಿ ದರ್ಶನ್ ಟೀಮ್‌ನ್ನು ಚದುರಿಸಿ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಫೋಟೋ ಲೀಕ್ ಆಗಿದ್ದು ಮತ್ತೆ ಎಲ್ಲರದರ ಬಗ್ಗೆ ತನಿಖೆ ಆಗುತ್ತಿದೆ ಎಂದು ತಿಳಿಸಿದ್ದಾರೆ.
ಮುಡಾ (MUDA case) ಡೈವರ್ಟ್ ಮಾಡೋಕೆ ಅದರಲ್ಲಿ ಏನಾಗಿದೆ? ಮೂಲ ಮುಡಾ ತಪ್ಪೇ, ಸೈಟ್ ಹಂಚಿಕೆ ಆಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಇದರಲ್ಲಿ ಸಿದ್ದರಾಮಯ್ಯ ಅವರ ಪಾಲು ಏನಿದೆ? ಮುಡಾದಿಂದ ಯಾರು ಭಯಗೊಂಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡ್ತಿದ್ದೇವೆ. ಇದರಲ್ಲಿ ನಮಗೆ ಜಯ ಸಿಕ್ಕೆ ಸಿಗುತ್ತದೆ. ಹಗಲು ಕನಸು ಬೇಡ, ಗವರ್ನರ್ ನಡವಳಿಕೆ ಮಾತ್ರ ಕಾನೂನು ಬಾಹಿರ ಎಂದು ಅವರು ಟಾಂಗ್ ಕೊಟ್ಟಿದ್ದಾರೆ.