ಹುಬ್ಬಳ್ಳಿ: ಅತೃಪ್ತ ಶಾಸಕರನ್ನು ಬಿಜೆಪಿಯವರು ಹೋಟೆಲ್‍ನಲ್ಲಿ ಕೂಡಿ ಹಾಕಿದ್ದಾರೆ. ಅವರ ಮೊಬೈಲ್ ಸಹ ಕಿತ್ತುಕೊಂಡಿದ್ದಾರೆ. ಆದ್ರೆ ಅವರು ಎಲ್ಲಿಯೂ ಹೋಗಲ್ಲ. ನಮ್ಮ ಪಕ್ಷದಲ್ಲಿಯೇ ಇರುತ್ತಾರೆ ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಆಡಿಯೋ ವಿಚಾರವನ್ನು ಸ್ಪೀಕರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಸ್ಪೀಕರ್ ಹೆಸರು ಸಹ ಆಡಿಯೋದಲ್ಲಿ ಪ್ರಸ್ತಾಪ ಆಗಿದೆ. ಹೀಗಾಗಿ ಸ್ಪೀಕರ್ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರವನ್ನು ಕೆಡಿಸುವ ಪ್ರಯತ್ನಗಳು ನಡೆದಿವೆ ಎಂದರು.
Advertisement
Advertisement
ಕಾಂಗ್ರೆಸ್ ಸರ್ಕಾರ ಮತ್ತು ಗೃಹ ಇಲಾಖೆ, ಬಿಎಸ್‍ವೈ ಆಡಿಯೋ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಿದೆ. ಬಿಎಸ್‍ವೈ ಆಡಿಯೋವನ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗುವುದು. ಎಫ್‍ಎಸ್‍ಎಲ್ ವರದಿ ಬಂದಾಗ ಯಾವುದು ಸತ್ಯ ಎನ್ನುವುದು ತಿಳಿಯಲಿದೆ ಎಂದು ಅವರು ಹೇಳಿದ್ರು.
Advertisement
ಬಜೆಟ್ ಮಂಡನೆ ಆಗಿದೆ. ಅನುಮೋದನೆಯೂ ಸಿಗಲಿದೆ. ನಾಲ್ಕು ಜನ ಕಾಂಗ್ರಸ್ ಶಾಸಕರು ಗೈರಾದರೆ ಬಜೆಟ್ ಅನುಮೋದನೆಗೆ ತೊಂದರೆ ಆಗುವುದಿಲ್ಲ. ಅತೃಪ್ತ ಶಾಸಕರನ್ನು ಹೋಟೆಲ್‍ನಲ್ಲಿ ಕೂಡಿ ಹಾಕಿದ್ದಾರೆ. ಅವರ ಮೊಬೈಲ್ ಸಹ ಕಿತ್ತುಕೊಂಡಿದ್ದಾರೆ ಎಂದು ಸಚಿವರು ಗಂಭೀರ ಆರೋಪ ಮಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv