Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಹೊಸ ರೂಪ – ಇಂದಿನಿಂದ 2 ವರ್ಷ ತಮನ್ನಾ ಪ್ರಚಾರ ರಾಯಭಾರಿ: ಎಂಬಿಪಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮೈಸೂರು ಸ್ಯಾಂಡಲ್‌ ಸೋಪ್‌ಗೆ ಹೊಸ ರೂಪ – ಇಂದಿನಿಂದ 2 ವರ್ಷ ತಮನ್ನಾ ಪ್ರಚಾರ ರಾಯಭಾರಿ: ಎಂಬಿಪಿ

Bengaluru City

ಮೈಸೂರು ಸ್ಯಾಂಡಲ್‌ ಸೋಪ್‌ಗೆ ಹೊಸ ರೂಪ – ಇಂದಿನಿಂದ 2 ವರ್ಷ ತಮನ್ನಾ ಪ್ರಚಾರ ರಾಯಭಾರಿ: ಎಂಬಿಪಿ

Public TV
Last updated: February 9, 2026 8:50 pm
Public TV
Share
3 Min Read
Tamanna Bhatia
SHARE

– ವಾರ್ಷಿಕ ವಹಿವಾಟು 5,000 ಕೋಟಿಗೆ ಹೆಚ್ಚಿಸುವ ಗುರಿ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ತಯಾರಿಸುವ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಯ ಅಂಗವಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ (Tamanna Bhatia) ಅವರನ್ನು 2 ವರ್ಷಗಳ ಅವಧಿಗೆ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಅವರ ಈ ಕೆಲಸವು ಮಂಗಳವಾರದಿಂದ (ಫೆ.10) ವಿಧ್ಯುಕ್ತವಾಗಿ ಆರಂಭವಾಗಲಿದೆ. ಇದೇ ಸಂದರ್ಭದಲ್ಲಿ ಪಾರಂಪರಿಕ ಹೆಮ್ಮೆಯ ಉತ್ಪನ್ನವಾಗಿರುವ ಮೈಸೂರು ಸ್ಯಾಂಡಲ್ ಸೋಪನ್ನು (Mysore Sandal Soap) ನವನವೀನ ರೂಪದಿಂದಿಗೆ ಬಿಡುಗಡೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್‌ ತಿಳಿಸಿದ್ದಾರೆ.

mysore sandal soap tamannaah bhatia

ಈ ಬಗ್ಗೆ ಮಾತನಾಡಿರುವ ಸಚಿವರು, `ಕೆಎಸ್‌ಡಿಎಲ್‌ ಸಂಸ್ಥೆಯ ವಾರ್ಷಿಕ ವಹಿವಾಟನ್ನು 2030 ರ ಹೊತ್ತಿಗೆ 5,000 ಕೋಟಿ ರೂ. ಗಳಿಗೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಯುವಜನಾಂಗವನ್ನ ತಲುಪಲು ವ್ಯಾಪಕ ಪ್ರಚಾರ ಆಂದೋಲವನ್ನು ನಡೆಸಲಾಗುತ್ತಿದೆ. ಇದಕ್ಕಾಗಿ, ಸೋಷಿಯಲ್ ಮೀಡಿಯಾದಲ್ಲಿ 30 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ತಾರಾ ವರ್ಚಸ್ಸಿನ ನಟಿ ತಮನ್ನಾ ಅವರನ್ನ ನೇಮಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಉತ್ತರ ಭಾರತದಲ್ಲಿ ಕೂಡ ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪ್ ಸಹಿತ ನಮ್ಮ ಸಂಸ್ಥೆಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೃಷ್ಟಿಸಿಕೊಳ್ಳಲಾಗುವುದು’ ಎಂದಿದ್ದಾರೆ. ಇದನ್ನೂ ಓದಿ: ಗೀತರಚನೆಯನ್ನು ಕಲಿಸುವುದಕ್ಕೆ ಸಾಧ್ಯವಿಲ್ಲ, ಅದು ಸುಪ್ತಮನಸ್ಸಿನಿಂದ ಬರಬೇಕು: ಜಯಂತ್‌ ಕಾಯ್ಕಿಣಿ

ಕೆಎಸ್‌ಡಿಎಲ್‌ ಸಂಸ್ಥೆಗೆ ಶತಮಾನಕ್ಕೂ ಮೀರಿದ ಭವ್ಯ ಪರಂಪರೆ ಇದೆ. ಇದು ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಕೈಗಾರಿಕಾ ರಸಾಯನಶಾಸ್ತ್ರಜ್ಞ ಎಸ್.ಜಿ ಶಾಸ್ತಿ (ಸೋಪ್ ಶಾಸ್ತ್ರಿ) ಅವರ ದೂರದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದ ಉದ್ಯಮವಾಗಿದೆ. ಒಳ್ಳೆಯ ವಹಿವಾಟು ಮತ್ತು ಲಾಭವನ್ನ ಕಾಣುತ್ತಿರುವ ಸಂಸ್ಥೆಯು ಹೋದ ತಿಂಗಳು ಸಾಬೂನು, ಮಾರ್ಜಕ ಮತ್ತು ಸೌಂದರ್ಯವರ್ಧಕ ಈ ಮೂರು ವಿಭಾಗಗಳಲ್ಲೂ ಸಾರ್ವಕಾಲಿಕ ಉತ್ಪಾದನೆ ಮಾಡಿದೆ ಎಂದು ಅವರು ಹೇಳಿದ್ದಾರೆ.

Mysore Sandal Soap 1 1

ಸಂಸ್ಥೆಯಲ್ಲಿ ಈಗ ಒಟ್ಟು 57 ಉತ್ಕೃಷ್ಟ ಉತ್ಪನ್ನಗಳನ್ನ ತಯಾರಿಸಲಾಗುತ್ತಿದೆ. ಇದರಲ್ಲಿ ಮೈಸೂರು ಸ್ಯಾಂಡಲ್ ಸೋಪಿನಿಂದ ಹಿಡಿದು ಕುಡಿಯುವ ನೀರಿನವರೆಗೂ ವ್ಯಾಪ್ತಿ ಇದೆ. ಪ್ರಚಾರ ರಾಯಭಾರಿಯಾಗಿರುವ ತಮನ್ನಾ ಅವರು ಕೆಎಸ್‌ಡಿಎಲ್‌ ಉತ್ಪನ್ನಗಳ ಪ್ರಸಾರ ಜಾಹೀರಾತು, ಕಾರ್ಯಕ್ರಮ ಇತ್ಯಾದಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಅವರು ಉಳಿದ ಖಾಸಗಿ ಕಂಪನಿಗಳ ಇದೇ ತರಹದ ಉತ್ಪನ್ನಗಳ ಪ್ರಚಾರಾರ್ಥ ರೂಪದರ್ಶಿಯಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಅವರು ನುಡಿದಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದಲೇ ಮೆಟ್ರೋ ಟಿಕೆಟ್‌ ದರ ಹೆಚ್ಚಳ, ಸುಳ್ಳು ಹೇಳೋದ್ರಲ್ಲಿ ಬಿಜೆಪಿಗರು ನಿಸ್ಸೀಮರು: ರಾಮಲಿಂಗಾರೆಡ್ಡಿ

ಮೈಸೋಪು ಸೇರಿದಂತೆ ಸಂಸ್ಥೆಯ ಶವರ್ ಜೆಲ್, ಟಾಲ್ಕಂ ಪೌಡರ್, ಹ್ಯಾಂಡ್ ವಾಶ್, ಅಗರಬತ್ತಿ, ಸಾಂಬ್ರಾಣಿ, ಧೂಪ, ಮಿಲೆನಿಯಂ ಸೋಪ್ ಮುಂತಾದವುಗಳಿಗೆ ಅಪಾರ ಬೇಡಿಕೆ ಇದೆ. ಪ್ರಚಾರಾರ್ಥವಾಗಿ ಸಿದ್ಧಪಡಿಸಿರುವ ವಿಡಿಯೋ ಇತ್ಯಾದಿಗಳನ್ನು ಕೂಡ ಮಂಗಳವಾರ ಬಿಡುಗಡೆ ಮಾಡಲಾಗುವುದು. ಜತೆಗೆ ವಿಜಯಪುರ ಮತ್ತು ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಸಂಸ್ಥೆಯ ಉತ್ಪಾದನಾ ಘಟಕಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಜೊತೆಗೆ ಈಗ 25-30 ಕೋಟಿ ರೂ. ಆಸುಪಾಸಿನಲ್ಲಿರುವ ರಫ್ತು ವಹಿವಾಟನ್ನು ಮುಂದಿನ ದಿನಗಳಲ್ಲಿ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ ಎಂದು ಪಾಟೀಲ ಮಾಹಿತಿ ನೀಡಿದ್ದಾರೆ.

MB Patil 2

ಕೆಎಸ್‌ಡಿಎಲ್ ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ಸಿ.ಎಸ್ ಅಪ್ಪಾಜಿ ನಾಡಗೌಡ ಮಾತನಾಡಿ, `ಯಾವುದೇ ಹೊಸ ಸಾಧನ ಸಲಕರಣೆಗಳನ್ನ ಖರೀದಿಸದೇ, ಹಳೆಯ ಯಂತ್ರೋಕರಣಗಳನ್ನ ಬಳಸಿಕೊಂಡೇ ಸಂಸ್ಥೆಯಲ್ಲಿ ಉತ್ಪಾದನಾ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಕಟ್ಟುನಿಟ್ಟಾಗಿ ದಿನಕ್ಕೆ ಮೂರು ಪಾಳಿಯ ಕೆಲಸದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಯೂರೋಪ್ ಮತ್ತು ಮಧ್ಯ ಪ್ರಾಚ್ಯದ ದೇಶಗಳ ಮಾರುಕಟ್ಟೆಯೂ ನಮ್ಮ ಗಮನಲ್ಲಿದೆ. ಜೊತೆಗೆ ಅನಿವಾಸಿ ಕನ್ನಡಿಗರಿಗೂ ಸಂಸ್ಥೆಯ ಉತ್ಪನ್ನಗಳನ್ನ ತಲುಪಿಸುವ ಹಾಗೆ ನೋಡಿಕೊಳ್ಳಲಾಗುವುದು’ ಎಂದಿದ್ದಾರೆ.

ಮುಖ್ಯವಾಗಿ, ಮೈಸೂರು ಸ್ಯಾಂಡಲ್ ಸೋಪಿನ ನಕಲನ್ನು ಮಟ್ಟ ಹಾಕಲಾಗಿದೆ. ನಮ್ಮ ಉತ್ಪನ್ನಗಳು ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಮಾರುಕಟ್ಟೆ ವಿಸ್ತರಣೆಗೆ ದೆಹಲಿ, ಮಧ್ಯ ಭಾರತ ಮುಂತಾದ ಭಾಗಗಳ ಮೇಲೆ ಹೆಚ್ಚಿನ ಒತ್ತು ಕೊಡಲಾಗಿದೆ. 2025-26ರಲ್ಲಿ ಸಂಸ್ಥೆಯ ವಹಿವಾಟು 2 ಸಾವಿರ ಕೋಟಿ ರೂ. ಮುಟ್ಟುವ ನಿರೀಕ್ಷೆ ಇದೆ ಎಂದು ಕೆಎಸ್ ಡಿ ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಅವರು ಹೇಳಿದ್ದಾರೆ.

TAGGED:KSDLMB PatilMysore Sandal SoapTamanna Bhatiaಎಂ.ಬಿ.ಪಾಟೀಲ್ತಮನ್ನಾ ಭಾಟಿಯಾತಮನ್ನಾ ರಾಯಭಾರಿಮೈಸೂರು ಸ್ಯಾಂಡಲ್‌ ಸೋಪ್‌
Share This Article
Facebook Whatsapp Whatsapp Telegram

Cinema news

Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories
Ramya 2
ನಟಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್‌ ಪ್ರಕರಣ – ಉಳಿದ 29 ಆರೋಪಿಗಳ ಬಲೆ ಬೀಸಿದ ಸಿಸಿಬಿ ಪೊಲೀಸ್‌
Bengaluru City Cinema Crime Districts Karnataka Latest Main Post

You Might Also Like

Vande Bharat Train
Belgaum

ಪ್ರಹ್ಲಾದ್ ಜೋಶಿ ಮನವಿಗೆ ಮನ್ನಣೆ; ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಕೇಂದ್ರ ಅಸ್ತು

Public TV
By Public TV
15 minutes ago
Indian Origin Techie Drown in US Waterfall
Crime

ಹುಟ್ಟುಹಬ್ಬದಂದೇ ಅಮೆರಿಕದ ಜಲಪಾತದಲ್ಲಿ ಮುಳುಗಿ ಭಾರತ ಮೂಲದ ಟೆಕ್ಕಿ ಸಾವು

Public TV
By Public TV
19 minutes ago
SSLC Exams
Bengaluru City

SSLC ಪರೀಕ್ಷೆಗೆ 525 ಅಂಕ – ಕರಡು ಅಧಿಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ

Public TV
By Public TV
26 minutes ago
Jasprit Bumrah Mumbai Indians IPL
Cricket

114 ಎಸೆತ ಹಾಕಿಯೂ ವಿಕೆಟ್‌ ಪಡೆಯದ ಬುಮ್ರಾ

Public TV
By Public TV
38 minutes ago
kea
Bengaluru City

ಪಿಯುಸಿ ಎರಡೂ ಪರೀಕ್ಷೆಗಳಲ್ಲಿ ಪಡೆದ ಅತ್ಯಧಿಕ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣನೆ: ಕೆಇಎ

Public TV
By Public TV
44 minutes ago
Krunal Pandya Hardik Pandya
Cricket

ಹಾರ್ದಿಕ್ ವಿಕೆಟ್‌ ಉರುಳಿದಾಗ ಕುಣಿದು ಕುಪ್ಪಳಿಸಿದ ಅಣ್ಣ ಕೃನಾಲ್ ಪಾಂಡ್ಯ – ಬ್ರದರ್‌ vs ಬ್ರದರ್ ವಿಡಿಯೋ ವೈರಲ್‌!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?