ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ನಾನು ಸಿಎಂ ಆಗ್ತೀನಿ, ವಿಜಯಪುರದಿಂದ ಸಿಎಂ ಆದ್ರೆ ನಾನೇ ಆಗೋದು. ಶಿವಾನಂದ ಪಾಟೀಲ್ ಅಂತೂ ಆಗಲ್ಲ ಅಂತ ಸಚಿವ ಎಂ.ಬಿ ಪಾಟೀಲ್ (MB Patil) ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸಿಎಂ ಆಗೋಕೆ ಸೀನಿಯಾರಿಟಿ ಬೇಕಿಲ್ಲ. ಅವರು ಜನತಾ ದಳದಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್ (Shivananda Patil) ವಿರುದ್ಧ ವ್ಯಂಗ್ಯವಾಡಿದರು. ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಅಂತೂ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರೇ ಇರ್ತಾರೆ ಅಂತಾ ಸ್ಪಷಪಡಿಸಿದ್ರು. ಇದನ್ನೂ ಓದಿ: ಸಹಾಯ ಕೇಳಿ ಬಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ – ಕಾನ್ಸ್‌ಟೇಬಲ್ ಅರೆಸ್ಟ್
ಇದೇ ವೇಳೆ ಚುನಾವಣೆಗೆ ರೆಡಿಯಾಗಿ ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ (HD Kumaraswamy) ಆಸೆ ಆಕಾಂಕ್ಷೆ ಇಟ್ಕೊಂಡಿದ್ರು. ನಾನು ಸಿಎಂ ಆಗ್ತೇನೆ ಅನ್ನೋ ಆಸೆ ಇತ್ತು ಅವರಿಗೆ. ಅತಂತ್ರ ವಿಧಾನಸಭೆ ಆಗುತ್ತೆ ಅಂದುಕೊಂಡಿದ್ರು. ಪಾಪ ಅವರ ಆಸೆ ನಿರಾಸೆಯಾಗಿದೆ ಅಂತ ತಿರುಗೇಟು ಕೊಟ್ಟರು.
ಕುಮಾರಸ್ವಾಮಿ ಅವರ ಕನಸನ್ನ ಮುಂದುವರಿಸಿಕೊಂಡು ಹೋಗಲಿ. ಯಾವುದೇ ಕಾರಣಕ್ಕೆ ಅವರು ಸಿಎಂ ಆಗಲ್ಲ. ಅವರು ಕನಸು ಕಾಣೋದು ಬೇಡ ಅಂತಾ ಟಕ್ಕರ್ ಕೊಟ್ಟರು. ಇದನ್ನೂ ಓದಿ: ಮಸೀದಿ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ ಹಬ್ಬ