ವಿಜಯಪುರ: ನನಗೂ ಸಿಎಂ ಆಗುವ ಟೈಮ್ ಬರುತ್ತೆ. ದುರ್ಗಾದೇವಿ ಶಕ್ತಿ ನನ್ನ ಮೇಲಿದೆ. ನಾನು ಮಂತ್ರಿ ಆಗಿದ್ರೂ ಪವರ್ ಫುಲ್. ಇಲ್ಲದೇ ಇದ್ದರೂ ಪವರ್ ಫುಲ್ ಅಂತ ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಸ್ವ-ಕ್ಷೇತ್ರ ಗ್ರಾಮದ ಸೋಮದೇವರಹಟ್ಟಿ ದುರ್ಗಾದೇವಿ ಜಾತ್ರೆಯಲ್ಲಿ ಭಾಗಿಯಾಗಿದ್ದ ಎಂ.ಬಿ.ಪಾಟೀಲ್, ನಾನು ಸಚಿವನಾದರೂ, ಶಾಸಕನಾದರೂ ಯಾವಾಗಲೂ ಫವರ್ ಫುಲ್. ತಾಯಿ ದುರ್ಗಾದೇವಿಯ ಆಶೀರ್ವಾದ ನನ್ನ ಮೇಲಿದೆ. ತಾಯಿಯ ಕೃಪೆಯಿಂದ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ನನಗೆ ಇನ್ನೂ 54 ವರ್ಷ ಆಗಿದೆ. ಮುಂದಿನ ದಿನಗಳಲ್ಲಿ ನನಗೂ ಮುಖ್ಯಮಂತ್ರಿ ಆಗುವ ಟೈಮ್ ಬರುತ್ತದೆ. ಸಿಎಂ ಆಗುವ ಆಸೆ ಸ್ವಾಭಾವಿಕ. ಆದ್ರೆ ನನಗೆ ದುರಾಸೆ ಇಲ್ಲ ಎಂದು ಮುಖ್ಯಮಂತ್ರಿ ಆಗುವ ಇಂಗಿತವನ್ನ ವ್ಯಕ್ತಪಡಿಸಿದರು. ಸದ್ಯ ದೇವಿ ಪರೀಕ್ಷೆ ನಡೆಸಿದ್ದಾಳೆ. ನನಗೆ ಎದುರಾಗಿರುವ ಪರೀಕ್ಷೆಯನ್ನು ದುರ್ಗಾದೇವಿಯೇ ಪಾರು ಮಾಡುತ್ತಾಳೆ. ಕಳೆದ ವರ್ಷದ ಜಾತ್ರೆಯಲ್ಲಿಯೂ ಎಂ.ಬಿ. ಪಾಟೀಲ್ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದು, ಶುಕ್ರವಾರ ಅದೇ ಮಾತನ್ನು ಪುನರುಚ್ಚರಿಸಿದ್ರು.