ವಿಜಯಪುರ: ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಹಿಂದೂ ಅಲ್ವಾ. ಅವರು ಶಿವರಾತ್ರಿಗೆ ಹೋದರೆ ಏನಾಗುತ್ತದೆ. ಶಿವರಾತ್ರಿ ಆಚರಿಸುವುದು ಪಕ್ಷದ ವಿರುದ್ಧ ಆಗುತ್ತಾ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M B Patil) ಪ್ರಶ್ನಿಸಿದರು.
ಡಿಕೆಶಿ ಶಿವರಾತ್ರಿ ಆಚರಣೆಯಲ್ಲಿ ಭಾಗಿ ವಿಚಾರಕ್ಕೆ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಅದು ಅವರ ವೈಯಕ್ತಿಕ ವಿಚಾರ. ನನ್ನ ವೈಯಕ್ತಿಕ ವಿಚಾರ ಪಕ್ಷದಲ್ಲ. ಪಕ್ಷದ ವಿಚಾರ ನನ್ನ ವೈಯಕ್ತಿಕ ಅಲ್ಲ. ನನ್ನ ವೈಯಕ್ತಿಕ ಅಸ್ಮಿತೆ, ನನ್ನ ವೈಯಕ್ತಿಕ ಆಚರಣೆ ಅದು ಬೇರೆ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: 1ನೇ ತರಗತಿಗೆ ದಾಖಲಾತಿ ವಯಸ್ಸು ಸಡಿಲಿಕೆಯಿಲ್ಲ – ಮಧು ಬಂಗಾರಪ್ಪ
ಹೀಗಾಗಿ ಒಂದಕ್ಕೊಂದು ಮಿಕ್ಸ್ ಮಾಡುವ ಅವಶ್ಯಕತೆ ಇಲ್ಲ. ಪಕ್ಷದ ಸಿದ್ದಾಂತ ಇರುತ್ತದೆ. ಡಿಕೆಶಿ ಅವರು ಹಿಂದೂ ಅಲ್ವಾ. ಶಿವರಾತ್ರಿಗೆ ಹೋದ್ರೆ ಏನಾಗುತ್ತೆ, ಪಕ್ಷದ ವಿರುದ್ಧ ಆಗುತ್ತಾ. ನಾನು ಶಿವರಾತ್ರಿಗೆ ಲಿಂಗದ ಗುಡಿಗೆ ಹೋಗಿದ್ದೆ. ಶಿವಗಿರಿಗೆ ಹೋಗಿದ್ದೆ. ಅಮಿತ್ ಶಾ ಅವರ ಜೊತೆಯಲ್ಲಿ ಡಿಕೆಶಿ ಅವರು ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿ ಆದರೆ ಏನು ತಪ್ಪಿದೆ. ಅನೇಕ ಕಾರ್ಯಕ್ರಮಗಳಲ್ಲಿ ನಮ್ಮನ್ನೂ ಕರೆದಿರುತ್ತಾರೆ, ಅವರನ್ನೂ ಕರೆದಿರುತ್ತಾರೆ ಎಂದು ಹೇಳಿದರು.
ರಾಹುಲ್ ಗಾಂಧಿ ವಿರುದ್ಧ ಸದ್ಗುರು ಜಗ್ಗಿ ವಾಸುದೇವ ಅವರ ಹೇಳಿಕೆ ಒಂದು ಭಾಗ. ಇದು ಶಿವರಾತ್ರಿ ಕಾರ್ಯಕ್ರಮಕ್ಕೆ ಅವರೂ ಹೋಗಿದ್ದಾರೆ ಎಂದರು. ಇದನ್ನೂ ಓದಿ: ತಂಗಿ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್ ಕಾಮೆಂಟ್: ಹೀಗ್ಯಾಕಂದ್ರು ಶ್ರೀವಲ್ಲಿ?
ಸಿಎಂ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದುನಿರ್ಧಾರ ಮಾಡಿದ್ದೇನೆ. ಈ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.