ಕಲಬುರಗಿ: ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ (Congress) ಕೈಗೊಂಡಿರುವ ಪ್ರಜಾಧ್ವನಿ ಬಸ್ ಪಂಚರ್ ಆಗಿದೆ ಎಂದು ಮಾಜಿ ಸಿಎಂ ಬಿಎಸ್‍ವೈ (BS Yediyurappa) ಹೇಳಿಕೆ ನೀಡಿದ ಬೆನ್ನಲ್ಲೇ ಭಾನುವಾರ ಕಲಬುರಗಿಯಲ್ಲಿ ಮಾಜಿ ಸಚಿವ ಎಂಬಿ ಪಾಟೀಲ್ (MB Patil) ತಿರುಗೇಟು ನೀಡಿದ್ದಾರೆ.
ನಮ್ಮ ಬಸ್ ಎಂದಿಗೂ ಪಂಕ್ಚರ್ ಆಗುವುದಿಲ್ಲ. ಬಿಜೆಪಿಯವರು ಯಡಿಯೂರಪ್ಪ ಅವರನ್ನ ಪಂಕ್ಚರ್ ಮಾಡಿದ್ದಾರೆ. ಬಿಜೆಪಿ ಬಸ್‍ಗೆ ಟೈರಲ್ಲಿ ಗಾಳಿನೇ ಇಲ್ಲ, ಅದಕ್ಕಾಗಿ ಪದೇ ಪದೇ ಮೋದಿಯವರನ್ನ ಕರೆಸುತ್ತಿದ್ದಾರೆ. ರಾಜ್ಯದಲ್ಲಿ ಮೋದಿ/ಶಾ ಅವರ ಮೋಡಿ ನಡೆಯುವುದಿಲ್ಲ. ಈ ಬಾರಿ ನಡೆಯಲ್ಲ ಎಂದು ಹೇಳಿದರು.
Advertisement
Advertisement
ಇದಲ್ಲದೇ 7 ರಿಂದ 8 ಬಿಜೆಪಿ ಹಾಲಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ ಎಂ.ಬಿ ಪಾಟೀಲ್, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಶಾಸಕಾಂಗ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಸಿಎಂ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ನಮ್ಮಲ್ಲಿ ಬೇಧ-ಭಾವ ಇಲ್ಲ. ಬಹಳಷ್ಟು ಜನ ಸಮರ್ಥರಿದ್ದಾರೆ ಎಂದು ಅವರು ಹೇಳಿದರು. ಇದನ್ನೂ ಓದಿ: ಜನಾರ್ದನ ಪೂಜಾರಿ ಪ್ರಭಾವ ಬಳಸಿ ಟಿಕೆಟ್‍ಗಾಗಿ ಭಾರೀ ಕಸರತ್ತು
Advertisement
ಪ್ರಜಾಧ್ವನಿ ಯಾತ್ರೆ (Prajadwani Yatre) ಗಾಗಿ ಎರಡು ತಂಡಗಳನ್ನಾಗಿ ರಚನೆ ಮಾಡಲಾಗಿದೆ. ಯಾತ್ರೆಗೆ ರಾಜ್ಯದ ವಿವಿಧೆಡೆ ಜನ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯ ಕುರಿತು ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಆಡಳಿತ ಹೇಗಿದೆ ಅನ್ನೋದು ಜನರಿಗೆ ಗೋತ್ತಾಗಿದೆ. ಪ್ರಜಾಧ್ವನಿ ಬಸ್ ಯಾತ್ರೆ ಯಶಸ್ವಿಯಾಗಿ ಸಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
Advertisement
ಈ ಹಿಂದೆ ದೇಶದಲ್ಲಿ ಝಿರೋ ಟ್ಯಾಕ್ಸ್ ಇತ್ತು. ಇಂದು ಎಲ್ಲದಕ್ಕೂ ಟ್ಯಾಕ್ಸ್ ವಿಧಿಸಲಾಗಿದೆ. ರಾಜ್ಯದಲ್ಲಿ/ಕೇಂದ್ರದಲ್ಲಿ ಬಿಜೆಪಿ ಸರ್ಕಾರ (BJP Government) ಏನೂ ಕೆಲಸ ಮಾಡುತ್ತಿಲ್ಲ. ದೇಶದಲ್ಲಿ 2 ಸಾವಿರ ಅಣೆಕಟ್ಟುಗಳಿವೆ, ಎಲ್ಲವೂ ಕಾಂಗ್ರೆಸ್ ಅವಧಿಯಲ್ಲಿ ಆಗಿವೆ. ಕೇಂದ್ರ ಸರ್ಕಾರ ಪ್ರತಿಷ್ಠಿತ ಎಲ್‍ಐಸಿ ಮಾರಿಕೊಳ್ಳುವಂತಹ ಕೆಲಸ ಮಾಡುತ್ತಿದೆ. ಅದಾನಿ/ಅಂಬಾನಿಗೆ ಸಾಲ ನೀಡುವಂತಹ ಕೆಲಸ ಮಾಡುತ್ತಿದ್ದಾರೆ. ಯಾರ ಹಣ ಯಾರಿಗೆ ಸಾಲ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಸಂಪೂರ್ಣ 40% ನಲ್ಲಿ ಮುಳುಗಿ ಹೋಗಿದೆ ಎಂದು ಕಿಡಿಕಾರಿದರು.