DistrictsKarnatakaLatestLeading NewsMain PostRamanagara

MBP ನನ್ನ ಸ್ನೇಹಿತರು, ಬೇಕೆಂದಾಗ ಭೇಟಿ ಮಾಡ್ತೀನಿ: ಡಿಕೆಶಿಗೆ ಅಶ್ವಥ್ ನಾರಾಯಣ ತಿರುಗೇಟು

ರಾಮನಗರ: ಎಂ.ಬಿ.ಪಾಟೀಲ್ ನನ್ನ ಸ್ನೇಹಿತರು, ಭೇಟಿ ಮಾಡಬೇಕು ಅನ್ನಿಸಿದಾಗ ಮಾಡ್ತೀನಿ, ಅದಕ್ಕೆ ಡಿ.ಕೆ.ಶಿವಕುಮಾರ್‌ನ ಕೇಳಬೇಕಾ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.

ತಮ್ಮ ಇಲಾಖೆ ಹಗರಣಗಳ ವಿಚಾರಗಳ ಬಗ್ಗೆ ಯಾರು ಧ್ವನಿ ಎತ್ತರಬಾರದೆಂದು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದು ಆಪ್ತರ ಮೇಲೆ ಅನುಮಾನ ಪಟ್ಟಿದ್ದಾರಾ ಡಿಕೆಶಿ?

ASHWATH NARAYAN

ನಾನು ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿಲ್ಲ. ಬೇಕು ಅನ್ನಿಸಿದಾಗ ಮಾಡುತ್ತೇನೆ. ಅವರು ನನ್ನ ಸ್ನೇಹಿತರೇ ಅದಕ್ಕೆ ಡಿಕೆಶಿನಾ ಕೇಳ್ಬೇಕಾ? ಮಾನ ಮರ್ಯಾದೆ ಇಲ್ಲದೆ, ನಿರಾಧಾರವಾಗಿ ಸದನದಲ್ಲಿ ಮಾತನಾಡುವುದನ್ನು ಇದೇ ಮೊದಲು ನೋಡಿದ್ದು. ಇಂತಹವರೂ ಇದ್ದಾರಾ ಅನ್ನಿಸಿತು ಎಂದು ಬೇಸರ ವ್ಯಕ್ತಪಡಿಸಿದರು

ಜೈಲು ಹಕ್ಕಿಗೆ ತಿಹಾರ್ ಜೈಲು ಕರೆಕ್ಟ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೈಲು ಹಕ್ಕಿ ಈಗೇನೋ ಬೇಲ್ ಮೇಲೆ ಹೊರಬಂದಿದೆ. ಅವರು ಮಾಡಿರುವ ಕರ್ಮಕಾಂಡಗಳಿಗೆ ತಿಹಾರ್ ಜೈಲೇ ಸರಿಯಾದ ಜಾಗ. ಕರ್ನಾಟಕದದಲ್ಲಿ ಮೊದಲ ಬಾರಿಗೆ ನಮ್ಮೆಲ್ಲರ ಗೌರವ ಹೆಚ್ಚಿಸುವ ಹಾಗೇ ತಿಹಾರ್ ಜೈಲಿಗೆ ಹೋಗಿರುವ ಕನ್ನಡಿಗ ಅಂದ್ರೆ ಅದು ಡಿಕೆಶಿ ಎಂದು ಅಶ್ವಥ್ ನಾರಾಯಣ ಕುಟುಕಿದ್ದಾರೆ. ಇದನ್ನೂ ಓದಿ: ಲಕ್ಷ್ಮಣ ಸವದಿಯ ಮುಂದಿನ ರಾಜಕೀಯ ಹಾದಿ ಏನು?

ASHWATH NARAYAN

ಭ್ರಷ್ಟಾಚಾರ ಅಂದ್ರೆ ಶಿವಕುಮಾರ್, ಶಿವಕುಮಾರ್ ಅಂದ್ರೆ ಭ್ರಷ್ಟಾಚಾರ. ಅವರೇ ಕೆಪಿಸಿಸಿ ಅಧ್ಯಕ್ಷನಾಗಿ ಸಿಕ್ಕಲೆಲ್ಲಾ ಲೂಟಿ ಮಾಡ್ತಿದ್ದಾರೆ. ಇದು ವರೆಗೆ ಕಾಸಿಲ್ಲದೇ ಕೆಲಸ ಮಾಡಿದ್ದಾರಾ? ಜನ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿರುವುದನ್ನು ಕೇಳಿದ್ದೀರಾ? ಏಕೆಂದರೆ ಭ್ರಷ್ಟ್ರಾಚಾರ ಕಾಂಗ್ರೆಸ್ ಸಂಸ್ಕೃತಿ. ಇಂತಹ ಚಟುವಟಿಕೆ ನಡೆಸುವವರನ್ನು ನಿರ್ನಾಮ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಇಷ್ಟಾದರೂ ಅವರಿಗೂ ಕಾಂಗ್ರೆಸ್ ಪಕ್ಷಕ್ಕೂ ಮಾನ ಮರ್ಯಾದೇ ಇಲ್ಲದೇ, ಒಬ್ಬ ವ್ಯಕ್ತಿಯನ್ನು ತೇಜೋವಧೆ ಮಾಡುವುದು ಎಷ್ಟರಮಟ್ಟಿಗೆ ಸರಿ. ನೂರು ಜನ್ಮ ಹೆತ್ತು ಬಂದರೂ ನನಗೆ ಮಸಿ ಬಳಿಯಲಿಕ್ಕೆ ಆಗಲ್ಲ. ಅವರ ಅಧಿಕಾರ ದುರ್ಬಳಕೆ, ಕುಟುಂಬ ರಾಜಕಾರಣ ಯಾವುದೂ ನಡೆಯಲ್ಲ. ನಾವು ಕನ್ನಡಿಗರು. ನಮ್ಮ ಕನ್ನಡ ನಾಡು ಸದೃಢರಾಗಿರಬೇಕು. ರಾಜಕೀಯ ನಾಯಕರೂ ಸಹ ಜನ ಗೌರವಿಸುವಂತೆ ನಡೆದುಕೊಳ್ಳಬೇಕೇ ಹೊರತು ಯಾರ ಜೇಬು ಲೂಟಿ ಮಾಡೋಣ ಎನ್ನುವಂತಿರಬಾರದು ಎಂದರು. ಇದನ್ನೂ ಓದಿ: ಫ್ಲೋಟಿಂಗ್ ಬ್ರಿಡ್ಜ್ ಮುರಿಯಲು ತಾಂತ್ರಿಕ ಕಾರಣ ಇರಬೇಕು: ಆನಂದ್ ಸಿಂಗ್

ASHWATH NARAYAN 1

ಕಾಂಗ್ರೆಸ್ ನಾಯಕರ ಬಿಕೆ ಹರಿಪ್ರಸಾದ್ ಅವರು ಸುಪ್ರಭಾತ ಅಭಿಯಾನ ಮಾಡುವವರನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರೇ ಆದರೂ ಪ್ರಚೋದಿಸುವ ಮಾತುಗಳನ್ನಾಡಬಾರದು. ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಸಂಘಟನೆಕಾರರೂ ಸಹ ಇರುವುದನ್ನು ಅನುಷ್ಠಾನಕ್ಕೆ ತರುವಂತೆ ಕೋರಿದ್ದಾರೆ. ಅದರಂತೆ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗುತ್ತಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published.

Back to top button