– ಸಚಿವ ಪ್ರಿಯಾಂಕ್ ಖರ್ಗೆ ಸಾಥ್
ಸ್ಯಾನ್ ಫ್ರಾನ್ಸಿಸ್ಕೊ: ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆ ಸೆಳೆಯಬೇಕೆಂಬ ಗುರಿಯೊಂದಿಗೆ ಅಮೆರಿಕ ಪ್ರವಾಸ ಕೈಗೊಂಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಅವರು ಗುರುವಾರ ಇಲ್ಲಿ LAM ರೀಸರ್ಚ್ (Lam Research), ಲಿಯೋ ಲ್ಯಾಬ್ಸ್ ಮತ್ತು ಟೆಕಾಂಡ್ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜೊತೆ ವಿಸ್ತೃತ ಮಾತುಕತೆ ನಡೆಸಿದ್ದಾರೆ.
ಇವತ್ತಿನ ಸಭೆಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕೂಡ ಸಾಥ್ ನೀಡಿದರು. ಈ ಮೂರೂ ಸಂಸ್ಥೆಗಳ ಉನ್ನತಾಧಿಕಾರಿಗಳ ಜೊತೆ ವಿಸ್ತೃತ ಚರ್ಚೆ ನಡೆಸಿದ್ದಲ್ಲದೇ ರಾಜ್ಯದಲ್ಲಿ ಬಂಡವಾಳ ಹೂಡಲು ಇರುವ ಪೂರಕ ವಾತಾವರಣದ ಬಗ್ಗೆ ವಿವರಿಸಿದರು. ಇದನ್ನೂ ಓದಿ: ಹೊಸ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡಲ್ಲ ಅಂತಿದ್ದಾರೆ ಸಿಎಂ-ಉದ್ಯೋಗ ಸೃಷ್ಟಿಯ ಚಿಂತನೆಯಿದೆ ಅಂತಿದ್ದಾರೆ ಡಿಸಿಎಂ
Advertisement
Advertisement
ಸೆಮಿಕಂಡಕ್ಟರ್ ಉತ್ಪನ್ನಗಳು ಮತ್ತು ಸೇವೆಗಳಿಗೆ ಹೆಸರಾಗಿರುವ ಎಲ್ಎಎಂ ರೀಸರ್ಚ್ ಕಂಪನಿಯು ಈ ಕ್ಷೇತ್ರದಲ್ಲಿ 23 ವರ್ಷಗಳ ಅನುಭವ ಹೊಂದಿದ್ದು, ಬೆಂಗಳೂರಿನಲ್ಲೇ ನೆಲೆ ಹೊಂದಿದೆ. ಮುಂದಿನ ತಲೆಮಾರುಗಳಿಗೆ ಅಗತ್ಯವಾದ ಪರಿಣಿತ ಇಂಜಿನಿಯರುಗಳನ್ನು ಸಜ್ಜುಗೊಳಿಸಲು ಉತ್ಸುಕವಾಗಿರುವ ಕಂಪನಿಯು ಕರ್ನಾಟಕ ಸರ್ಕಾರದೊಂದಿಗೆ ಸಹಭಾಗಿತ್ವ ಬಯಸಿದೆ ಎಂದು ಎಂಬಿಪಿ ಹೇಳಿದ್ದಾರೆ.
Advertisement
ಇದಲ್ಲದೇ ಬೆಂಗಳೂರಿನಲ್ಲಿರುವ ಸೆಮಿಕಂಡಕ್ಟರ್ ಆರ್ & ಡಿ ಪಾರ್ಕ್ ನಲ್ಲಿ ನೂತನ ಪ್ರಯೋಗಾಲಯಗಳಲ್ಲಿ ರಚನಾತ್ಮಕ ಹೂಡಿಕೆ ಮಾಡುವ ಸಾಧ್ಯತೆಗಳನ್ನು ಪರಿಶೀಲಿಸಲು ಎಲ್ಎಎಂ ರೀಸರ್ಚ್ ಕಂಪನಿಯು ಮುಕ್ತವಾಗಿದೆ. ಇದನ್ನು ಸರ್ಕಾರದ ಪರವಾಗಿ ಸ್ವಾಗತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡ ಮಾತು ಕೇಳಿ ಇಂಗ್ಲಿಷ್‌ನಲ್ಲಿ ಉತ್ತರ ಕೊಟ್ಟ ರಚಿನ್ – ಬೆಂಗ್ಳೂರು ವಿಲ್ಸನ್ ಗಾರ್ಡನ್ ನೆನಪು ಹಂಚಿಕೊಂಡ ರವೀಂದ್ರ
Advertisement
ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಹೆಸರಾಗಿರುವ ಲಿಯೋ (ಲೋ ಅರ್ತ್ ಆರ್ಬಿಟ್) ಲ್ಯಾಬ್, ಭಾರತದಲ್ಲಿ ರೆಡಾರ್‌ಗಳನ್ನ ಸ್ಥಾಪಿಸಲು ಮುಂದಾಗುವ ಖಾಸಗಿ ಕ್ಷೇತ್ರದವರಿಗೆ ಸರ್ಕಾರವು ನೀಡುವ ಅನುಮೋದನೆಗಳ ಕುರಿತು ಅಧ್ಯಯನ ನಡೆಸುವ ಬಗ್ಗೆ ಚರ್ಚಿಸಿದೆ. ಜೊತೆಗೆ ರಾಜ್ಯದ ಬಾಹ್ಯಾಕಾಶ ಕಾರ್ಯಪರಿಸರದಲ್ಲಿ ಅದು ನೆಲೆಯೂರಲು ಆಸಕ್ತಿ ತಾಳಿದೆ. ಇದಕ್ಕಾಗಿ ನಮ್ಮಲ್ಲಿ `ಸ್ಪೇಸ್ ಟೆಕ್ ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪನೆಗೆ ಕೈ ಜೋಡಿಸಲು ಅದು ಒಲವು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
ಬಿಗ್ ಡೇಟಾ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಟೆಕಾಂಡ್ ಕಂಪನಿಯ ಪ್ರತಿನಿಧಿಗಳು, ಬೆಂಗಳೂರಿನಲ್ಲಿ ತಮ್ಮ ಆರ್ & ಡಿ ಕೇಂದ್ರ ತೆರೆಯುವ ಬಗ್ಗೆ ಚರ್ಚಿಸಿದ್ದಾರೆ. ಇದು ಸಾಧ್ಯವಾದರೆ ರಾಜ್ಯದಲ್ಲಿ ಅಸೆಂಬ್ಲಿಂಗ್ ಮತ್ತು ಹಾರ್ಡ್‌ವೇರ್ ಉತ್ಪಾದನೆ ಆರಂಭಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಬಿಗ್ ಡೇಟಾದಿಂದ ನಮ್ಮ 2 ಮತ್ತು 3ನೇ ಹಂತದ ನಗರಗಳಿಗೂ ಪ್ರಯೋಜನ ಸಿಗಲಿದೆ. ಇ-ಆಡಳಿತದಲ್ಲಿ ಕೂಡ ಅದು ಸರ್ಕಾರದೊಂದಿಗೆ ಸಹಭಾಗಿತ್ವ ಹೊಂದಲು ಬಯಸಿದೆ ಎಂದು ಪಾಟೀಲ ಮಾಹಿತಿ ನೀಡಿದ್ದಾರೆ.
ಮಾತುಕತೆಗಳಲ್ಲಿ ಎಲ್ಎಎಂ ರೀಸರ್ಚ್ ಕಂಪನಿಯ ಉಪಾಧ್ಯಕ್ಷ ರಂಗೇಶ್ ರಾಘವನ್, ಕಾರ್ತಿಕ್ ರಾಮಮೋಹನ್, ಪ್ಯಾಟ್ ಲಾರ್ಡ್, ಲಿಯೋ ಲ್ಯಾಬ್ಸ್ ಕಂಪನಿಯ ಸಂಸ್ಥಾಪಕ ಡ್ಯಾನ್ ಸೀಪರ್ಲಿ, ರಚಿತ್ ಭಾಟಿಯಾ ಮತ್ತು ಟೇಕಾಂಡ್ ಕಂಪನಿಯ ಸಿಇಒ ಸಾಹಿಲ್ ಚಾವ್ಲಾ ಮತ್ತು ಸಹ ಸಂಸ್ಥಾಪಕ ರಮೇಶ್ ಸಿಂಗ್ ಭಾಗವಹಿಸಿದ್ದರು. ಸರ್ಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಏಕ್‌ರೂಪ್ ಕೌರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
Web Stories