ಹರಿಕೃಷ್ಣ ನಾರಾಯಣಿ ಮಯೂರಿ!

Public TV
1 Min Read
Mayuri Kyatari 1

ಬೆಂಗಳೂರು: ಕೃಷ್ಣಲೀಲಾ ಚಿತ್ರದ ನಟನೆಯ ಮೂಲಕವೇ ಪ್ರೇಕ್ಷಕರ ಮನಗೆದ್ದಿರುವ ಮಯೂರಿಯ ಮುಂದೀಗ ಅವಕಾಶಗಳ ಒಡ್ಡೋಲಗ. ಮೂರ್ನಾಲ್ಕು ಚಿತ್ರಗಳ ಕೈಲಿರುವಾಗಲೇ ಮಯೂರಿಯೀಗ ಮತ್ತೊಂದು ಚಿತ್ರಕ್ಕೂ ಸಹಿ ಹಾಕಿದ್ದಾರೆ!

ಇದೀಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರೋ ಮಯೂರಿ ನಟಿಸಲಿರೋ ಹೊಸಾ ಚಿತ್ರ `ಹರಿಕೃಷ್ಣ ನಾರಾಯಣಿ’. ಈ ಚಿತ್ರವನ್ನು ಡಾ. ಗಿರಿಧರ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದಲ್ಲಿ ಮಯೂರಿ ಬಹುಮುಖ್ಯವಾದ, ಎಲ್ಲರನ್ನೂ ಅಚ್ಚರಿಗೀಡು ಮಾಡುವಂಥಾ ಪಾತ್ರದಲ್ಲಿ ನಟಿಸಲಿದ್ದಾರಂತೆ.

MAYURI

ಈಗಾಗಲೇ ಮಯೂರಿ ರುಸ್ತುಂ, 8 ಎಂಎಂ, ಸಿಗ್ನೇಚರ್ ಮುಂತಾದ ಚಿತ್ರಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರ ಇನ್ನೇನು ಚಿತ್ರೀಕರಣ ಮುಗಿಸಿಕೊಂಡು ತೆರೆ ಕಾಣಲಿದೆ. ಆ ನಂತರ ಮಯೂರಿ ಒಪ್ಪಿಕೊಂಡ ಒಂದೊಂದೇ ಚಿತ್ರವನ್ನು ಮುಗಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ.

ಹೊಸದಾಗಿ ಒಪ್ಪಿಕೊಂಡಿರುವ ಹರಿಕೃಷ್ಣ ನಾರಾಯಣಿ ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು ಶುರುವಾಗಲಿದೆ. ಇಷ್ಟಕಾಮ್ಯ, ನಟರಾಜ ಸರ್ವಿಸ್, ಕರಿಯ 2 ಮುಂತಾದ ಚಿತ್ರಗಳ ಮೂಲಕ ಮುಖ್ಯ ನಾಯಕಿಯಾಗಿ ನೆಲೆ ಕಂಡುಕೊಂಡಿರೋ ಮಯೂರಿ ಸದ್ಯದ ಬಹು ಬೇಡಿಕೆಯ ನಟಿಯಾಗಿಯೂ ಹೊರ ಹೊಮ್ಮಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *