ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

Advertisements

ವೀಲ್ ಚೇರ್ ರೋಮಿಯೋ ಹೀಗೊಂದು ಸಿನಿಮಾ ಸ್ಯಾಂಡಲ್ ವುಡ್‍ನ ದಶ ದಿಕ್ಕುಗಳಲ್ಲಿಯೂ ಭಾರೀ ಸದ್ದು ಮಾಡುತ್ತಿದೆ. ವಿಭಿನ್ನ ಶೀರ್ಷಿಕೆ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಇದೇ ತಿಂಗಳ 27ರಂದು ಥಿಯೇಟರ್ ಅಂಗಳಕ್ಕೆ ಲಗ್ಗೆ ಇಡ್ತಿರುವ ವೀಲ್ ಚೇರ್ ರೋಮಿಯೋ ಸಿನಿಮಾ ಟ್ರೇಲರ್ ಹಾಗೂ ಹಾಡುಗಳ ಮೂಲಕ ಚಿತ್ರರಸಿಕರ ಮನದಲ್ಲಿ ಅಚ್ಚೊತ್ತಿದ್ದು, ಕುತೂಹಲದ ಕೋಟೆಯನ್ನು ಕಟ್ಟಿದೆ.

ಗಾಂಧಿನಗರದಲ್ಲಿ ಹೊಸ ನಿರೀಕ್ಷೆ ಅಲೆ ಎಬ್ಬಿಸಿರುವ ವೀಲ್ ಚೇರ್ ರೋಮಿಯೋ ಸಿನಿಮಾದಲ್ಲಿ ಕಿರುತೆರೆ ಮೂಲಕ ಮನೆ ಮಾತಾದ ರಾಮ್ ಚೇತನ್ ನಾಯಕನಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ಮಯೂರಿ ತಮ್ಮ ಅಮೋಘ ಅಭಿನಯದ ಮೂಲಕ ನಾಯಕಿ ಪಾತ್ರ ಪೋಷಣೆ ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ವಿಶೇಷ ಅನಿಸುವ ಪಾತ್ರವನ್ನು ಮಯೂರಿ ಒಪ್ಪಿಕೊಂಡಿದ್ದರ ಹಿಂದೆ ಒಂದು ರೋಚಕ ಕಥಾನಕವಿದೆ. ಇದನ್ನೂ ಓದಿ: ಗೋಮಾಂಸವನ್ನು ಹಿಂದೂಗಳು, ಕ್ರಿಶ್ಚಿಯನ್ ಕೂಡ ತಿನ್ನುತ್ತಾರೆ: ಸಿದ್ದರಾಮಯ್ಯ

Advertisements

ನಿರ್ದೇಶಕ ನಟರಾಜ್ ಸ್ವಾತಂತ್ರ್ಯ ನಿರ್ದೇಶಕರಾಗಿ ಒಂದೊಳ್ಳೆ ಸಿನಿಮಾ ಮಾಡಬೇಕು ಎಂದು ಕಥೆ ತಯಾರಿಸಿ, ಅದಕ್ಕೆ ತಕ್ಕುದಾದ ಪಾತ್ರಗಳನ್ನು ರೆಡಿ ಮಾಡಿಕೊಂಡಿದ್ದರು. ಒಂದು ಸೂಕ್ಷ್ಮ ಎಳೆಯನ್ನು ಇಟ್ಟುಕೊಂಡು ವೀಲ್‍ಚೇರ್ ರೋಮಿಯೋ ಚಿತ್ರವನ್ನು ಹೆಣೆದಿದ್ದರು. ಅದ್ಭುತ ಪಾತ್ರಗಳನ್ನು ಸೃಷ್ಟಿಸಿದ್ದರು. ಕಾಲಿಲ್ಲದ ನಾಯಕನ ಪಾತ್ರಕ್ಕೆ ಸೂಕ್ತ ಪ್ರತಿಭೆ ಹುಡುಗಾಟದಲ್ಲಿದ್ದಾಗ ಸಿಕ್ಕಿದ್ದು ರಾಮ್ ಚೇತನ್. ಆದರೆ ನಟರಾಜ್ ಅವರಿಗೆ ನಾಯಕಿ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡುವುದು ಅನ್ನೋದು ದೊಡ್ಡ ಸವಾಲಾಗಿತ್ತು.

Advertisements

ಕಣ್ಣಿಲ್ಲದ ವೇಶ್ಯೆ ಪಾತ್ರಕ್ಕೆ ಜೀವ ತುಂಬಲು ಯಾವ ನಟಿಯರು ತಾನೇ ಮುಂದೆ ಬರುತ್ತಾರೆ. ಇಂತಹ ಪಾತ್ರ ಅಭಿನಯಿಸಲು ಸಹಜವಾಗಿ ಮುಜುಗರ ಇದ್ದೇ ಇರುತ್ತದೆ. ಆದರೆ ಒಳ್ಳೆ ಪಾತ್ರಕ್ಕಾಗಿ ಕಾತುರದಿಂದ ಕಾಯ್ತಿದ್ದ ಮಯೂರಿ ಕೂಡ ಒಂದು ಕ್ಷಣ ಪಾತ್ರ ಕೇಳಿ ಬೆರಗಾಗಿದ್ದರು. ಸಿನಿಮಾದ ಭಾಗದ ನಂತರ ಮಯೂರಿ ತಮ್ಮ ಪಾತ್ರಕ್ಕೆ ಮನಸೋತರು. ಕೆಲ ಡೈಲಾಗ್ ಹೇಳುವಾಗ ಕೊಂಚ ಹಿಂದೇಟು ಹಾಕಿದ್ದರೂ ಸಹ ಒಂದೊಳ್ಳೆ ಪಾತ್ರದಲ್ಲಿ ಅಭಿನಯಿಸಿರುವ ಸಂತೃಪ್ತಿ ಮಯೂರಿಗಿದೆ. ಆದರೆ ಇಂತಹ ಪಾತ್ರ ಕೈಬಿಟ್ಟುವ ನಾಯಕಿರು ಈಗ ಒಳಗೊಳಗೆ ಬೇಸರಪಟ್ಟುಕೊಳ್ಳುವುದುಂಟು.

Advertisements
Exit mobile version