ಬೆಂಗಳೂರು: ನಗರದ ಮೇಯರ್ ಸಂಪತ್ ರಾಜ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಿಂದಲೇ ಕೊಲೆ ಬೆದರಿಕೆ ಬಂದಿದೆ.
ಸುಮಾರು 50 ಲಕ್ಷ ಹಣ ಕೊಡು. ಇಲ್ಲಾ ಅಂದರೆ ಕೊಂದು ಬಿಡುತ್ತೇನೆ ಅಂತಾ ಸೋಮವಾರ ಎರಡು ಎರಡು ಬಾರಿ ಜೈಲಿನಿಂದಲೇ ಕರೆ ಮಾಡಿ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ.
ಮುಂಜಾನೆ ಒಮ್ಮೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾನೆ. ಬಳಿಕ ಸಂಜೆ ಮತ್ತೆ ಕರೆ ಮಾಡಿ ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಕರೆ ಬಂದಿದ್ದ ನಂಬರ್ ನನ್ನು ಟ್ರೇಸ್ ಮಾಡಿದಾಗ ಅದು ಪರಪ್ಪನ ಅಗ್ರಹಾರವನ್ನು ಸೂಚಿದೆ. ಆದ್ದರಿಂದ ಜೈಲಿನಿಂದ ಅಥವಾ ಜೈಲಿನ ಅಕ್ಕಪಕ್ಕದಿಂದ ಕರೆ ಬಂದಿರ ಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಬಗ್ಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು, ಕೊಲೆ ಬೆದರಿಕೆ ಹಾಕಿದ ದುಷ್ಕರ್ಮಿ ಯಾರು? ಅಸಲಿಗೆ ಜೈಲಿಗೆ ಹೇಗೆ ಮೊಬೈಲ್ ಹೋಯ್ತು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.