Connect with us

15 ದಿನದಲ್ಲಿ ರಸ್ತೆಗುಂಡಿ ಮುಚ್ಚದವರಿಗೆ ಫಾರಿನ್ ಟ್ರಿಪ್ ಭಾಗ್ಯ – ದುಬೈಗೆ ಸಂಪತ್‍ರಾಜ್ ಪ್ರವಾಸ

15 ದಿನದಲ್ಲಿ ರಸ್ತೆಗುಂಡಿ ಮುಚ್ಚದವರಿಗೆ ಫಾರಿನ್ ಟ್ರಿಪ್ ಭಾಗ್ಯ – ದುಬೈಗೆ ಸಂಪತ್‍ರಾಜ್ ಪ್ರವಾಸ

ಬೆಂಗಳೂರು: ನಗರದಲ್ಲಿ ನೀವು ರಸ್ತೆ ಗುಂಡಿಗೆ ಬಿದ್ದು ಒದ್ದಾಡಿ. ಬಿಬಿಎಂಪಿ ಮೇಯರ್ ಸಾಹೇಬ್ರು ವಿದೇಶದಲ್ಲಿ ಸುತ್ತಾಡ್ತಾರೆ.

ಹೌದು. ಬೆಂಗಳೂರಿನ ರಸ್ತೆಗುಂಡಿಗಳಲ್ಲಿ ಜನ ಸಾಯುತ್ತಿದ್ರು ಮೇಯರ್ ಸಂಪತ್ ರಾಜ್ ಫಾರಿನ್ ಟ್ರಿಪ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಮೇಯರ್ ಆಗಿ ಒಂದುವರೆ ತಿಂಗಳಿಗೆ ದುಬೈ ಸುತ್ತೋಕ್ಕೆ ಹೊರಟಿದ್ದಾರೆ.

15 ದಿನಗಳಲ್ಲಿ ಗುಂಡಿ ಮುಚ್ಚೋಕೆ ಆಗದ ಮೇಯರ್‍ಗೆ ವಿದೇಶ ಪ್ರವಾಸದ ಭಾಗ್ಯ ಸಿಕ್ಕಿದೆ. ಮೊನ್ನೆ ರಾತ್ರಿಯೇ ಸ್ನೇಹಿತರೊಂದಿಗೆ ದುಬೈ ಫ್ಲೈಟ್ ಹತ್ತಿದ್ದಾರೆ.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜಾಕೀರ್ ಅಹ್ಮದ್‍ರಿಂದ ಬಿಬಿಎಂಪಿ ಮೇಯರ್‍ಗೆ ಪ್ರವಾಸದ ಗಿಫ್ಟ್ ಸಿಕ್ಕಿದೆ. ಜಾಕೀರ್ ಅಹ್ಮದ್ ನೂತನವಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Advertisement
Advertisement