ಬೆಂಗಳೂರು: ನಿನ್ನೆ ಭಿತ್ತಿ ಪತ್ರ ತೆರವು ಮತ್ತು ಗೋಡೆ ಬರಹ ಅಳಿಸುವ ಅಭಿಯಾನಕ್ಕೆ ಚಾಲನೆ ನೀಡಿದ್ದ ಮೇಯರ್, ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಫ್ಲೆಕ್ಸ್, ಭಿತ್ತಿಪತ್ರಗಳನ್ನು ತೆರವುಗೊಳಿಸಲು ಹಲಸೂರು ಮೆಟ್ರೋ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
60% ಕನ್ನಡದಲ್ಲೇ ಮಾಹಿತಿಗಳನ್ನು ನಮೂದಿಸಬೇಕು ಎಂಬ ನಿಯಮವಿದ್ದರೂ ಪಾಲನೆ ಮಾಡಿಲ್ಲ. ಫ್ಲೆಕ್ಸ್, ಭಿತ್ತಿಪತ್ರಗಳನ್ನ ತೆಗೆಯುವಂತೆ ಈಗಾಗಲೇ ಸೂಚನೆ ನೀಡಿದ್ದರೂ ಪಾಲಿಸಿಲ್ಲ. ಸರಿಯಾಗಿ ಕೆಲಸ ಮಾಡದಿದ್ದರೆ ಕೆಲಸದಿಂದ ಹೊರಹಾಕಬೇಕಾಗುತ್ತದೆ ಎಂದು ಜೀವನ್ ಭಿಮ್ ನಗರ ವಾರ್ಡ್ ಎಇಇ ಪ್ರಸನ್ನ ಮತ್ತು ಹೊಯ್ಸಳನಗರ ವಾರ್ಡ್ ಅಧಿಕಾರಿಗಳಿಗೆ ಮೇಯರ್ ಸಂಪತ್ ರಾಜ್ ತರಾಟೆ ತೆಗೆದುಕೊಂಡಿದ್ದಾರೆ. ಇದನ್ನು ಓದಿ: ಗಮನಿಸಿ, ಬೆಂಗ್ಳೂರಲ್ಲಿ ಫ್ಲೆಕ್ಸ್ ಹಾಕಿದ್ರೆ ಜೈಲು ಶಿಕ್ಷೆ! – ಬಿಬಿಎಂಪಿ ಪ್ರಕಟಣೆಯಲ್ಲಿ ಏನಿದೆ?
ರಸ್ತೆಯಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುತ್ತಿದ್ದವನಿಗೆ ಮೇಯರ್ ಬುದ್ಧಿಮಾತು ಹೇಳಿ ಪ್ಲಾಸ್ಟಿಕ್ ಧ್ವಜ ಮಾರಬೇಡ. ಕೇವಲ ಬಟ್ಟೆಯಲ್ಲಿ ತಯಾರಿಸಿದ ಧ್ವಜಗಳನ್ನ ಮಾತ್ರ ಮಾರಾಟ ಮಾಡು. ಇನ್ಮುಂದೆ ಪ್ಲಾಸ್ಟಿಕ್ ಬಳಸಬೇಡ ಎಂದು ರಸ್ತೆಯಲ್ಲಿ ಧ್ವಜ ಮಾರುತ್ತಿದ್ದವನಿಗೆ ಮೇಯರ್ ಸೂಚನೆ ನೀಡಿದರು. ಈ ವೇಳೆ ಮೇಯರ್ ಧ್ವಜಗಳನ್ನ ಕಿತ್ತುಕೊಳ್ಳಲು ಮುಂದಾದ ಅಧಿಕಾರಿಗಳನ್ನು ತಡೆದು ಹೇ ಬಿಡಿ, ಈ ಸಲ ಬಿಟ್ಟುಬಿಡಿ. ಇನ್ಮುಂದೆ ಮಾರಾಟ ಮಾಡಬೇಡ ಎಂದರು. ಇದನ್ನು ಓದಿ: ಸಿಲಿಕಾನ್ ಸಿಟಿಯಲ್ಲಿ ಫ್ಲೆಕ್ಸ್ ಬ್ಯಾನರ್ ಗೆ ನಿರ್ಬಂಧ- ಮದುವೆ, ಸಭೆ ಸಮಾರಂಭಕ್ಕೂ ತಟ್ಟಿದ ಬಿಸಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews