ಧಾರವಾಡ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ-ಧಾರವಾಡ ಬಿಜೆಪಿ ತೆಕ್ಕೆಗೆ ಜಾರಿದೆ. ಮೂರೂವರೆ ವರ್ಷಗಳ ಬಳಿಕ ಮೇಯರ್ ಉಪಮೇಯರ್ ಸ್ಥಾನ ಭರ್ತಿಯಾಗಿವೆ.
ಮೇಯರ್ ಆಗಿ ಈರೇಶ ಅಂಚಟಗೇರಿ ಆಯ್ಕೆಯಾದರೆ, ಉಪಮೇಯರ್ ಆಗಿ ಉಮಾ ಮುಕುಂದ ಆಯ್ಕೆ ಆಗಿದ್ದಾರೆ. ಕೈ ಎತ್ತುವ ಮೂಲಕ 50 ಮತಗಳನ್ನು ಪಡೆದ ಮೇಯರ್, ಉಪಮೇಯರ್ ಆಯ್ಕೆ ಮಾಡಲಾಯಿತು. ವೋಟಿಂಗ್‍ನಲ್ಲಿ ಪಾಲಿಕೆಯ ಸದಸ್ಯರು, ಜೋಶಿ, ಶೆಟ್ಟರ್ ಸೇರಿದಂತೆ ಪಾಲಿಕೆಯ ವ್ಯಾಪ್ತಿಯ ಜನಪ್ರತಿನಿಧಿಗಳು ಭಾಗಿಯಾಗಿದ್ದರು. ಮಹಾನಗರ ಪಾಲಿಕೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಬಣ್ಣ ಎರಚಿ ಸಂಭ್ರಮಿಸಿದರು.
Advertisement
Advertisement
82 ಸಂಖ್ಯಾಬಲವುಳ್ಳ ಪಾಲಿಕೆಯಲ್ಲಿ ಬಹುಮತಕ್ಕೆ 42 ಬೇಕಿತ್ತು. ಚುನಾವಣೆಯಲ್ಲಿ ಕ್ರಮವಾಗಿ ಬಿಜೆಪಿ 39, ಕಾಂಗ್ರೆಸ್ 33 ಜೆಡಿಎಸ್ 01 ಎಐಎಂಐಎಂ 3 ಪಕ್ಷೇತರರು 6 ಸ್ಥಾನ ಗಳಿಸಿದ್ದರು. ಇದನ್ನೂ ಓದಿ: ಸಂಜೆ 7 ರಿಂದ ಬೆಳಗ್ಗೆ 6 ರವರೆಗೆ ಮಹಿಳೆ ಉದ್ಯೋಗಿಗಳನ್ನು ದುಡಿಸುವಂತಿಲ್ಲ: ಯೋಗಿ ಆದೇಶ
Advertisement
ಅವಳಿ ನಗರದ ಏಳಿಗೆಗಾಗಿ ಭಾರತೀಯ ಜನತಾ ಪಕ್ಷಕ್ಕೆ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟ ಜನತೆಗೆ ಅನಂತಾನಂತ ಧನ್ಯವಾದಗಳು. ಸರ್ವ ಕ್ಷೇತ್ರದಲ್ಲೂ ಅಭಿವೃದ್ಧಿಯೊಂದೇ ಮೂಲಮಂತ್ರ ಎಂಬ ಧ್ಯೇಯ ವಾಕ್ಯದೊಂದಿಗೆ ಒಗ್ಗಟ್ಟಾಗಿ ಕೆಲಸ ಮಾಡೋಣ.
— Pralhad Joshi (@JoshiPralhad) May 28, 2022
Advertisement
5 ಶಾಸಕರು, 1 ಎಂಪಿ, 1 ವಿಧಾನ ಪರಿಷತ್ ಸದಸ್ಯರಿಗೆ ಮತದಾನದ ಅವಕಾಶ ಹಿನ್ನೆಲೆಯಲ್ಲಿ ಬಿಜೆಪಿ ಸಂಖ್ಯಾ ಬಲ 45ರ ಜೊತೆಗೆ ಇಬ್ಬರು ಪಕ್ಷೇತರರು ಸೇರ್ಪಡೆಯಾಗಿದ್ದು, ಸಂಖ್ಯಾ ಬಲ 47 ಇತ್ತು. ಮೇಯರ್ ಆಯ್ಕೆಗೆ ಶುಕ್ರವಾರ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಸಭೆ ಕೂಡ ನಡೆದಿತ್ತು.