– ಪಾಲಿಕೆ ಸದಸ್ಯರ ಬೆವರಿಳಿಸಿದ ಗಂಗಾಂಬಿಕೆ
ಬೆಂಗಳೂರು: ಬಿಬಿಎಂಪಿ ನೂತನ ಮೇಯರ್ ಹಾಗೂ ಉಪಮೇಯರ್ ಆಗಿ ಅಧಿಕಾರವಹಿಸಿಕೊಂಡ ಬೆನ್ನಲ್ಲೇ ಮಂಗಳವಾರ ರಾತ್ರಿ ದಿಢೀರ್ ನಗರ ಪ್ರದಕ್ಷಿಣೆ ಮಾಡಿದ್ದಾರೆ.
ಮೇಯರ್ ಗಂಗಾಬಿಕೆ ಹಾಗೂ ಉಪಮೇಯರ್ ರಮೀಳ ಬೈಕ್‍ಗಳಲ್ಲಿ ಸಿಟಿ ರೌಂಡ್ಸ್ ಮಾಡಿದ್ದಾರೆ. ನಗರ ಪ್ರದಕ್ಷಿಣೆ ವೇಳೆ ಮೇಯರ್ ಗಂಗಾಬಿಕೆ ಅವರು ಪಾಲಿಕೆ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡಿದ್ದು, ಈಸ್ಟ್ ಜೋನ್ ಎಕ್ಸಿಕ್ಸ್ಯೂಟಿವ್ ಎಂಜಿನಿಯರ್ ಶಿವಪ್ರಕಾಶ್ ಬೆವರಿಳಿಸಿದ್ದಾರೆ. ಇದನ್ನೂ ಓದಿ: ಕುರ್ಚಿ ಮೇಲೆ ಬಸವಣ್ಣನ ಫೋಟೋ ಇಟ್ಟು, ಪೂಜೆ ಸಲ್ಲಿಸಿ ಅಧಿಕಾರ ವಹಿಸಿಕೊಂಡ ನೂತನ ಮೇಯರ್
Advertisement
Advertisement
ರಾತ್ರಿ ಈಸ್ಟ್ ಜೋನ್ ನ ಕಸ್ತೂರಿ ಬಾ ರಸ್ತೆ, ಜಯಮಾಹಲ್, ಕನ್ನಿಂಗ್ ಹ್ಯಾಂ ರಸ್ತೆ ಮತ್ತು ಹೆಬ್ಬಾಳ ಸೇರಿ ಹಲವೆಡೆ ತಪಾಸಣೆ ಮಾಡಿದ್ದಾರೆ. ನಗರದ ಜಯಮಹಾಲ್ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರಸ್ತೆಗುಂಡಿಗಳನ್ನ ಮುಚ್ಚಿದ್ದ ಗುತ್ತಿಗೆದಾರನಿಗೆ 1 ಲಕ್ಷ ರೂ. ದಂಡ ಹಾಕಿದ್ದಾರೆ. ಅಷ್ಟೇ ಅಲ್ಲದೇ ಇಂದು ಸಂಜೆಯೊಳಗಡೆ ಜಯಮಹಲ್ ರಸ್ತೆಗುಂಡಿಗಳನ್ನ ವೈಜ್ಞಾನಿಕವಾಗಿ ಮುಚ್ಚಿಸಿ ವರದಿ ನೀಡಬೇಕು ಅಂತ ಖಡಕ್ ಆಗಿ ಆದೇಶಿಸಿದ್ದಾರೆ.
Advertisement
ಒಂದು ವೇಳೆ ಈ ಬಗ್ಗೆ ಅಸಡ್ಡೆ ತೋರಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠೀಣ ಕ್ರಮ ಜರಗಿಸುವುದಾಗಿ ಖಡಕ್ ವಾರ್ನ್ ಕೂಡ ಮಾಡಿದ್ದಾರೆ. ಮೇಯರ್ ಸಿಟಿ ರೌಂಡ್ಸ್ ವೇಳೆ ನಗರದಲ್ಲಿ ಅಕ್ರಮವಾಗಿ ಹೋಲ್ಡಿಂಗ್ಸ್ ಗಳನ್ನ ತೆರವು ಮಾಡಿಸಿದ್ದಾರೆ.
Advertisement
ಸೆಪ್ಟೆಂಬರ್ 28 ರಂದು ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ರಣರಂಗದ ಆಟದಲ್ಲಿ ಕಾಂಗ್ರೆಸ್ಸಿನ ಗಂಗಾಂಬಿಕೆ ಮೇಯರ್ ಆಗಿ ಆಯ್ಕೆಯಾಗಿದ್ದರೆ, ಉಪಮೇಯರ್ ಆಗಿ ಜೆಡಿಎಸ್ ನ ರಮೀಳಾ ಆಯ್ಕೆಯಾಗಿದ್ದರು. ಇವರಿಬ್ಬರೂ ಸೋಮವಾರ ಅಧಿಕಾರ ವಹಿಸಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=K3IuXehQ3sw