LatestMain PostNational

ಮೋದಿ ಓಬಿಸಿಯಲ್ಲಿ ಜನಿಸಿದ್ರೆ, ಆರ್‌ಎಸ್‌ಎಸ್ ಪ್ರಧಾನಿ ಮಾಡ್ತಿರಲಿಲ್ಲ: ಮಾಯಾವತಿ

ಲಕ್ನೊ: ಪ್ರಧಾನಿ ಮೋದಿ ಓಬಿಸಿ ಕುಟುಂಬದಲ್ಲಿ ಜನಿಸಿದ್ದರೆ, ಅವರನ್ನು ಆರ್‌ಎಸ್‌ಎಸ್ ಪ್ರಧಾನಿಯನ್ನಾಗಿ ಮಾಡುತ್ತಿರಲಿಲ್ಲ ಎಂದು ಬಿಎಸ್‍ಪಿ ಮುಖ್ಯಸ್ಥೆ ಮಯಾವತಿ ಟ್ವೀಟ್ ಮಾಡಿದ್ದಾರೆ.

ಪಿಎಂ ಮೋದಿ ಎಸ್‍ಪಿ ಮತ್ತು ಬಿಎಸ್‍ಪಿ ಮಹಾಮೈತ್ರಿಗೆ ಜಾತೀವಾದ ಹೆಸರನ್ನು ನೀಡುತ್ತಿದ್ದಾರೆ. ಇದೊಂದು ಹಾಸ್ಯಸ್ಪದ ಮತ್ತು ಅಪರಿಪಕ್ವತೆಯ ಹೇಳಿಕೆಯಾಗಿದೆ. ಜಾತೀವಾದ ಶಾಪದಿಂದ ಪೀಡಿತ ಜನರು ಇಂದು ಜಾತೀಯತೆ ಬಗ್ಗೆ ಹೇಗೆ ಮಾತನಾಡ್ತಾರೆ. ಮೋದಿ ಓಬಿಸಿಯಲ್ಲಿ ಹುಟ್ಟಿಲ್ಲ. ಮೇಲ್ವರ್ಗದ ಶೋಷಣೆಗಳಿಗೆ ಪ್ರಧಾನಿಗಳು ಒಳಗಾಗಿಲ್ಲ. ಹಾಗಾಗಿ ಈ ರೀತಿಯ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿ ರಾಜಕೀಯ ಲಾಭಕ್ಕಾಗಿ ತಾವು ಹಿಂದುಳಿದ ವರ್ಗದ ವ್ಯಕ್ತಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಒಂದು ವೇಳೆ ಮೋದಿ ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿದ್ದರೆ, ಆರ್ ಎಸ್‍ಎಸ್ ಎಂದೂ ಅವರನ್ನು ಪಿಎಂ ಮಾಡುತ್ತಿರಲಿಲ್ಲ. ಕಲ್ಯಾಣ್ ಸಿಂಗ್ ಅಂತಹ ನಾಯಕರಿಗೆ ಆರ್‍ಎಸ್‍ಎಸ್ ಏನು ಮಾಡಿದೆ ಎಂಬುದನ್ನು ದೇಶದ ಜನರೇ ನೋಡಿದ್ದಾರೆ ಎಂದು ಟ್ವೀಟ್ ಮೂಲಕ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.

 

Leave a Reply

Your email address will not be published.

Back to top button