ಇಂದೋರ್: ಟೀಂ ಇಂಡಿಯಾ ಯುವ ಆಟಗಾರ ಕನ್ನಡಿಗ ಮಯಾಂಕ್ ಅಗರ್ವಾಲ್ ಟೀಂ ಇಂಡಿಯಾ 8ನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದು, ಬಾಂಗ್ಲಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಬಳಿಕ ಸಿಕ್ಸರ್ ಸಿಡಿಸಿ 200 ರನ್ ಪೂರ್ಣಗೊಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದ್ದರು.
ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 37 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಅಗರ್ವಾಲ್ 2ನೇ ದಿನದಾಟ ಆರಂಭವಾಗುತ್ತಿದಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನಡೆಸಿದರು. 100 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿದ ಅಗರ್ವಾಲ್ ಆ ಬಳಿಕ 186 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ್ದರು.
Advertisement
Advertisement
ಇಂದಿನ ದಿನದಾಟದಲ್ಲಿ 54 ರನ್ ಗಳಿಸಿದ ಪೂಜಾರ ಔಟಾದರು, ಆ ಬಳಿಕ ಬಂದ ವಿರಾಟ್ ಕೊಹ್ಲಿ ಬಾಂಗ್ಲಾ ಆಟಗಾರರು ಪಡೆದ ಅತ್ಯುತ್ತಮ ಡಿಆರ್‍ಎಸ್ ಮನವಿಯಿಂದ ಶೂನ್ಯಕ್ಕೆ ಪೆವೆಲಿಯನ್ ಸೇರಿದರು. ಈ ಹಂತದಲ್ಲಿ ರಹಾನೆಯನ್ನು ಕೂಡಿಕೊಂಡ ಮಯಾಂಕ್ ಅಗರ್ವಾಲ್ ಬಾಂಗ್ಲಾ ಬೌಲರ್ ಗಳ ಸುಲಲಿತವಾಗಿ ಎದುರಿಸಿ ರನ್ ಗಳಿಸಿದರು. 2019ರ ವಿಶಾಖಪಟ್ಟಣಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ದ್ವಿಶತಕದ ಸಾಧನೆ ಮಾಡಿದ್ದ ಮಯಾಂಕ್, ಈ ಪಂದ್ಯದಲ್ಲಿ ತಮ್ಮ 2ನೇ ದ್ವಿಶತಕವನ್ನು 304 ಎಸೆತಗಳಲ್ಲಿ ಪೂರ್ಣಗೊಳಿಸಿದರು. ಭಾರತದ ಪರ ಮಯಾಂಕ್ 2ನೇ ದ್ವಿಶತಕವನ್ನು ಕೇವಲ 12 ಇನ್ನಿಂಗ್ಸ್ ಗಳಲ್ಲಿ ವಿಶೇಷವಾಗಿದ್ದು, 5 ಇನ್ನಿಂಗ್ಸ್ ಗಳಲ್ಲಿ ವಿನೋದ್ ಕಾಂಬ್ಳಿ ಈ ಸಾಧನೆ ಮಾಡಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಪಂದ್ಯದಲ್ಲಿ 330 ಎಸೆತಗಳನ್ನು ಎದುರಿಸಿದ ಮಯಾಂಕ್ 28 ಬೌಂಡರಿ 8 ಸಿಕ್ಸರ್ ಗಳೊಂದಿಗೆ 73.63 ಸರಾಸರಿಯಲ್ಲಿ 243 ರನ್ ಗಳಿಸಿ ಔಟಾದರು.
Advertisement
Advertisement
ಇತ್ತ ಮಯಾಂಗ್ ಉತ್ತಮ ಸಾಥ್ ನೀಡಿದ ಅಜಿಂಕ್ಯಾ ರಹಾನೆ 172 ಎಸೆತಗಳಲಿ 9 ಬೌಂಡರಿಗಳೊಂದಿಗೆ 86 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಲ್ಲದೇ ಟೆಸ್ಟ್ ಕ್ರಿಕೆಟ್‍ನಲ್ಲಿ 4 ಸಾವಿರ ರನ್ ಪೂರ್ಣಗೊಳಿಸಿದರು. 104 ನ್ನಿಂಗ್ಸ್ ಗಳಲ್ಲಿ 4 ಸಾವಿರ ರನ್ ಪೂರ್ಣಗೊಳಿಸಿದ ರಹಾನೆ ಈ ಸಾಧನೆ ಮಾಡಿದ 16ನೇ ಟೀಂ ಇಂಡಿಯಾ ಆಟಗಾರ ಎನಿಸಿಕೊಂಡರು. ಅಲ್ಲದೇ ಬಾಂಗ್ಲಾ ವಿರುದ್ಧ ರಹಾನೆ ಸಿಡಿಸಿದ 3ನೇ ಅರ್ಧ ಶತಕ ಇದಾಗಿದೆ. ಟೀಂ ಇಂಡಿಯಾ ಮಾಜಿ ಆಟಗಾರರಾದ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಕೂಡ 104ನೇ ಟೆಸ್ಟ್ ಇನ್ನಿಂಗ್ಸ್ ನಲ್ಲೇ 4 ಸಾವಿರ ರನ್ ಪೂರೈಸಿದ್ದರು.
If you were to describe Mayank's knock of 243 in an emoji, what would it be? pic.twitter.com/QqGLraP2CQ
— BCCI (@BCCI) November 15, 2019