ವಿಶಾಖಪಟ್ಟಣಂ: ತವರು ನೆಲದಲ್ಲಿ ಮೊದಲ ಟೆಸ್ಟ್ ಪಂದ್ಯವಾಡಿದ ಮಯಾಂಕ್ ಅಹರ್ವಾಲ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲೇ ದ್ವಿಶತಕ ಸಿಡಿಸಿದ್ದು, ಆ ಮೂಲಕ ಸಚಿನ್, ಕೊಹ್ಲಿ, ಸೆಹ್ವಾಗ್‍ರಂತಹ ದಿಗ್ಗಜ ಕ್ರಿಕೆಟಿಗರ ಸಾಲಿಗೆ ಸೇರಿದ್ದಾರೆ.
ಪಂದ್ಯದ 2ನೇ ದಿನದಾಟದ ಆರಂಭದಲ್ಲೇ ಶತಕ ಸಿಡಿಸಿದ 28 ವರ್ಷದ ಮಯಾಂಕ್, ಆ ಬಳಿಕ ಶತಕವನ್ನು ದ್ವಿಶತಕವಾಗಿ ಪರಿವರ್ತಿಸಲು ಯಶಸ್ವಿಯಾದರು. ಭಾರತದ ಪರ ಕೊಹ್ಲಿ, ಸೆಹ್ವಾಗ್, ಸಚಿನ್ ತಲಾ 6 ದ್ವಿಶತಕಗಳನ್ನು ಸಿಡಿಸಿದ್ದು, ರಾಹುಲ್ ದ್ರಾವಿಡ್ 5, ಗವಾಸ್ಕರ್ 4, ಪೂಜಾರಾ 3 ದ್ವಿಶತಕಗಳನ್ನು ಸಿಡಿಸಿದ್ದಾರೆ.
Advertisement
Advertisement
ಮಯಾಂಕ್ ದ್ವಿಶತಕ ಸಿಡಿಸುವುದರೊಂದಿಗೆ ಭಾರತದ ಪರ ಇದುವರೆಗೂ 52 ದ್ವಿಶತಕಗಳು ದಾಖಲಾಗಿದ್ದು, 23 ಆಟಗಾರರು ಈ ಸಾಧನೆ ಮಾಡಿದ್ದಾರೆ. ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದ ರೋಹಿತ್ ಹಾಗೂ ಮಯಾಂಕ್ ಇಬ್ಬರೂ ಕೂಡ 317 ರನ್ ಗಳ ಜೊತೆಯಾಟವಾಡಿದರು. ಪಂದ್ಯದಲ್ಲಿ ರೋಹಿತ್ ಶರ್ಮಾ 244 ಎಸೆತಗಳಲ್ಲಿ 176 ರನ್ ಸಿಡಿಸಿ ಔಟಾದರೆ, ಮಯಾಂಕ್ 371 ಎಸೆತಗಳನ್ನು ಎದುರಿಸಿ 23 ಬೌಂಡರಿ, 6 ಸಿಕ್ಸರ್ ಗಳೊಂದಿಗೆ 215 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 502 ರನ್ ಸಿಡಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
Advertisement
ಅಂದಹಾಗೇ ಭಾರತ ಪರ ಟೆಸ್ಟ್ ಪಂದ್ಯದ ಮೊದಲ ಶತಕವನ್ನು ದ್ವಿಶತಕವಾಗಿ ಪರಿವರ್ತನೆ ಮಾಡಿದ ಸಾಧನೆಯನ್ನು ಮಯಾಂಕ್ ಮಾಡಿದ್ದು, ದಿಲೀಪ್ ಸರ್ದೇಸಾಯಿ, ವಿನೋದ್ ಕಾಂಬ್ಳಿ, ಕರುಣ್ ನಾಯರ್ ಅವರ ಸಾಲಿಗೆ ಸೇರಿದ್ದಾರೆ. ಅಲ್ಲದೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ 303 ರನ್ ಗಳಿಸಿದ್ದ ಕರುಣ್ ನಾಯರ್ ಮೊದಲ ಸ್ಥಾನ ಪಡೆದಿದ್ದಾರೆ.
Advertisement
Take a bow, Mayank Agarwal ????????@Paytm #INDvSA pic.twitter.com/ESHjPbXP1A
— BCCI (@BCCI) October 3, 2019
ಎರಡನೇ ಆಟಗಾರ: ದಕ್ಷಿಣ ಆಫ್ರಿಕಾ ವಿರುದ್ಧ ಸೆಹ್ವಾಗ್ 2008ರ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. ಆಫ್ರಿಕಾ ವಿರುದ್ಧ ದಾಖಲಾದ ಮೊದಲ ದ್ವಿಶತಕ ಇದಾಗಿತ್ತು. ಈಗ ಈ ಸಾಧನೆಯನ್ನು ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಮಯಾಂಕ್ ಪಡೆದಿದ್ದಾರೆ. ತವರು ನೆಲದಲ್ಲಿ ಮೊದಲ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯವಾಡಿದ ಮಯಾಂಕ್ 358 ಎಸೆತಗಳಲ್ಲಿ ದ್ವಿಶತಕದ ಸಾಧನೆ ಮಾಡಿದ್ದರು. ಆಸೀಸ್ ವಿರುದ್ಧದ ಟೂರ್ನಿಯಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಮಯಾಂಕ್ ಮೊದಲ ಇನ್ನಿಂಗ್ಸ್‍ನಲ್ಲಿ 75 ರನ್ ಗಳಿಸಿದ್ದರು. ಆದರೆ ಆ ಬಳಿಕ ಅವರಿಗೆ ಟೆಸ್ಟ್ ಕ್ರಿಕೆಟ್‍ನಲ್ಲಿ ಹೆಚ್ಚಿನ ಅವಕಾಶ ಲಭಿಸಲಿಲ್ಲ. ಆದರೂ ದೇಶಿಯ ಕ್ರಿಕೆಟ್‍ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು. ಆ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು.