ಉಡುಪಿ: ಮಾಯಾ ಡೇ ಡಾನ್ಸ್ ಬಾರ್ ಮಾಲೀಕ ವಶಿಷ್ಟ ಸತ್ಯನಾರಾಯಣ ಉಡುಪಿಯಲ್ಲಿ ಮರ್ಡರಾಗಿ 7 ದಿನಗಳೇ ಕಳೆದಿದೆ. ಕೊಲೆಯ ಸಂಚು ರೂಪಿಸಿದ್ದ ಕಿಂಗ್ ಪಿನ್ ಸೈಫ್ ಅಂದರ್ ಆಗಿದ್ದಾನೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ನವೀ ಮುಂಬೈ ಕೋಟಿ ಕುಳ, ಲೇಡೀಸ್ ಡಾನ್ಸ್ ಬಾರ್ ಓನರ್ ವಶಿಷ್ಟ ಯಾದವ್ ಕೊಲೆಯ ಸತ್ಯ ಕೊನೆಗೂ ಬಯಲಾಗಿದೆ. ನಾಲ್ಕು ಮಂದಿಯ ಬಂಧನವಾದಾಗ, ಈ ಚಿಲ್ಟೂ ಪುಲ್ಟೂಗಳಿಂದ ಇದು ಅಸಾಧ್ಯ ಎಂದು ಫೀಲ್ಡಿನಲ್ಲಿ ಚರ್ಚೆಯಾಗಿತ್ತು. ಕೊಲೆಯ ಸಂಚು ಮಾಡಿದ ಉಡುಪಿಯ ನೊಟೋರಿಯಸ್ ರೌಡಿ ಸೈಫುದ್ಧೀನ್ ಅಲಿಯಾಸ್ AKMS ಕಂಪನಿಯ ಸೈಫ್ ಪೊಲೀಸರ ವಶವಾಗಿದ್ದಾನೆ.
1996ರಲ್ಲಿ ನಡೆದ ಆತ್ರಾಡಿ ಪುಂಡಲೀಕ ಕೊಲೆ ಪ್ರಕರಣ, ಗಲಾಟೆ, ಹಲ್ಲೆ, ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾದಾತ. 2016 ರಲ್ಲಿ ನಡೆದ ತಸ್ಲೀಮ್ ಶೇಖ್ ಹತ್ಯೆಯಲ್ಲೂ ಇವನ ಕೈವಾಡ ಇತ್ತು. ಂಏಒS ಹೆಸರಿನ ಬಸ್ ಮತ್ತು ಕ್ರಿಕೆಟ್ ಟೀಮ್ ಕಟ್ಟಿಕೊಂಡು ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದ ಸೈಫ್ ಗಲಾಟೆಗೆ ತನ್ನದೇ ಒಂದು ಗ್ಯಾಂಗ್ ಕಟ್ಟಿಕೊಂಡಿದ್ದ. ಹಿರಿಯಡ್ಕ ಠಾಣಾ ವ್ಯಾಪ್ತಿಯ ಖಾಯಾಂ ರೌಡಿಯಾಗಿರುವ ಸೈಫ್ ಬಸ್, ಹೊಟೇಲ್ ಉದ್ಯಮ ದ ಜೊತೆಗೆ ಹೊಡೆದಾಟ, ಕೊಲೆ ಸಂಚುಗಳು ಕೂಡ ಇವನ ದಿನಚರಿಯ ಭಾಗವಾಗಿತ್ತು. ಇಂತಹ ಖತರ್ನಾಕ್ ಸೈಫ್ ಯಾದವ್ ಹತ್ಯೆಯ ಸಂಚುಕೋರ ಅನ್ನೋದು ಬಯಲಾಗಿದೆ. ಇದನ್ನೂ ಓದಿ: ಮಾಯಾ ಬಾರ್ ಮಾಲೀಕ ಯಾದವ್ ಕೊಲೆ- ಬಾರ್ ಸಪ್ಲೈಯರ್ ಮಿಶ್ರಾ ಅರೆಸ್ಟ್
ಮಾಧ್ಯಮಗಳ ಜೊತೆ ಮಾತನಾಡಿದ ಎಸ್ ಪಿ ವಿಷ್ಣುವರ್ಧನ್, ಪ್ರಕರಣ ಜಟಿಲ ಇದೆ. ಸುಮಿತ್ ಮಿಶ್ರಾ ಪ್ರಮುಖ ಆರೋಪಿಯಾದ್ರೂ ಆತ ಡೆಲ್ಲಿ ಮೂಲದವ. ಉಡುಪಿಯಲ್ಲಿ ಕೃತ್ಯ ಎಸಗಲು ಸಾಕಷ್ಟು ಸಿದ್ಧತೆ ಇರುವ ಸಾಧ್ಯತೆ ಇದೆ. ಸೈಫುದ್ದೀನ್ ಬಂಧನವಾಗಿದೆ. ಪ್ರಕರಣದಲ್ಲಿ ಇನ್ನೂ ಕೆಲವರು ಶಾಮೀಲಾಗಿರುವ ಸಾಧ್ಯತೆ ಇದೆ. ಎಲ್ಲರ ಬಂಧನ ನಂತರ ಪೂರ್ಣ ಚಿತ್ರಣ ಸಿಗಲಿದೆ ಎಂದರು. ಇದನ್ನೂ ಓದಿ: ಮುಂಬೈ ಲೇಡೀಸ್ ಡಾನ್ಸ್ ಬಾರ್ ಮಾಲೀಕ ಉಡುಪಿಯಲ್ಲಿ ಕೊಲೆ
ವಶಿಷ್ಟ ಯಾದವ್ ಸತ್ತಾಗಲೇ ಆತನ ಪತ್ನಿ ರೀತು, ಸೈಫ್ ನ ಮೇಲೆ ಸಂಶಯ ವ್ಯಕ್ತಪಡಿಸಿದ್ದಳು. ತನ್ನ ಪತಿ ಸೈಫ್ ಮತ್ತು ಅಕ್ರಮ್ ಜೊತೆಗೆ ಇರುವ ವಿಚಾರ ಈಕೆಗೆ ಗೊತ್ತಿತ್ತು. ಸೈಫ್ ವಶಿಷ್ಟನ ಮಾಯಾ ಬಾರ್ ಉದ್ಯಮದಲ್ಲೂ ಹಣ ಹೂಡಿದ್ದ. ವಶಿಷ್ಟ ಯಾದವ್ ನಿಂದ ಏಟು ತಿಂದಿದ್ದ ಸುಮಿತ್ ಮಿಶ್ರಾ ಸೈಫ್ ಜೊತೆ ಶಾಮೀಲಾಗಿ ಕೊಲೆ ಮಾಡಿದ್ದಾನೆ ಎಂಬೂದು ಸದ್ಯ ಹೊರಬಂದಿರುವ ಮಾಹಿತಿ. ಘಟನೆಯಲ್ಲಿ ಮತ್ತಷ್ಟು ವಿಚಾರ ಹುದುಗಿರುವ ಸಾಧ್ಯತೆ ಇದ್ದು, ಪೊಲೀಸ್ ತನಿಖೆಯಲ್ಲಿ ಹೊರಬರಬೇಕಾಗಿದೆ.