ಮಂಗಳೂರು: ಕರ್ನಾಟಕ ರತ್ನ (Karnataka Ratna) ಕ್ಕೆ ಪುನೀತ್ ಅರ್ಹನಾದ ವ್ಯಕ್ತಿಯಾಗಿರುವವರು. ಮುಂದೆ ಎಲ್ಲಾ ಕಲಾವಿದರಿಗೂ ಇವರು ಸ್ಫೂರ್ತಿಯಾಗಿರಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ (Dr. Veerendra Heggade) ಹೇಳಿದರು.
Advertisement
ದಿವಂಗತ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಗೌರವಕ್ಕೆ ಧರ್ಮಸ್ಥಳ (Dharmasthala) ದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಹರ್ಷ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಅವರು, ಪುನೀತ್ ರಾಜ್ ಕುಮಾರ್ ಗೆ ಇಂದು ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗ್ತಿದೆ. ಇಂದು ಆ ಯುವಕನನ್ನು ನಾನು ಸ್ಮರಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯೋತ್ಸವದಂದು ಗಡಿನಾಡಿನಲ್ಲಿ ಕನ್ನಡದ ಕಂಪು ಹರಡಿದ ‘ಬನಾರಸ್’ ಹೀರೋ
Advertisement
Advertisement
ಪುನೀತ್ ಅವರ ತಂದೆ ಡಾ.ರಾಜ್ ಕುಮಾರ್ ನನಗೆ ಅತ್ಯಂತ ಪ್ರೀತಿಯವರು ಮತ್ತು ಕ್ಷೇತ್ರದ ಬಗ್ಗೆ ಅಪಾರ ಗೌರವವಿತ್ತು. ಅವರ ಪುತ್ರ ಪುನೀತ್ ತನ್ನ ವೈಯಕ್ತಿಕ ವ್ಯಕ್ತಿತ್ವ, ನಟನೆ ಮತ್ತು ಸ್ವಭಾವದಿಂದ ಪ್ರೀತಿ ಪಾತ್ರರಾಗಿದ್ದರು. ಅವರ ಸಾವು ಇನ್ನೂ ನಮಗೆ ಅರಗಿಸಿಕೊಳ್ಳಲಾಗ್ತಿಲ್ಲ. ಇಂತಹ ಸಾವು ಅಂತ ದೊಡ್ಡ ಮತ್ತು ಭವಿಷ್ಯವಿದ್ದ ಕಲಾವಿದನಿಗೆ ಬರಬಾರದಿತ್ತು. ಭಗವಂತದ ಪಾದ ಸೇರಿದ ಪುನೀತ್ ನನ್ನ ಇವತ್ತು ಸ್ಮರಿಸುತ್ತೇವೆ ಎಂದರು.
Advertisement
ಕನ್ನಡದ ಸೇವೆ, ಸ್ವಭಾವತ ಸ್ನೇಹಪರರಾಗಿದ್ದರೆ ಜನ ಮತ್ತು ಸರ್ಕಾರ ಹೇಗೆ ನಮ್ಮನ್ನ ಸ್ಮರಿಸಿಕೊಳ್ಳುತ್ತೆ ಅನ್ನೋದು ಎಲ್ಲಾ ಕಲಾವಿದರಿಗೂ ಗೊತ್ತಾಗಲಿ. ಪುನೀತ್ ರ ಪುಣ್ಯದಿಂದ ಮತ್ತಷ್ಟು ಉತ್ತಮ ಕಲಾವಿದರು ಮೂಡಿ ಬರಲಿ ಅಂತ ಹಾರೈಸುತ್ತೇನೆ ಎಂದು ಅವರು ಹೇಳಿದರು.
2009ರಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಕೊನೆಯ ಬಾರಿ ಕರ್ನಾಟಕ ರತ್ನ ಪ್ರಶಸ್ತಿ ಪಡೆದಿದ್ದರು. ಇದನ್ನೂ ಓದಿ: ಅಪ್ಪುಗೆ ಕರ್ನಾಟಕ ರತ್ನ : ಅಧಿಕೃತ ಆಹ್ವಾನವಿಲ್ಲ, ಹೋಗಲ್ಲ ಎಂದ ಸಿದ್ಧರಾಮಯ್ಯ