– ಅಕ್ಟೋಬರ್ ಅಂತ್ಯದೊಳಗೆ ಉದ್ಘಾಟನೆಗೆ ಬಿಎಂಆರ್ಸಿಎಲ್ ಸಿದ್ಧತೆ
ಬೆಂಗಳೂರು: ನಾಗಸಂಧ್ರ ಟು ಮಾದಾವರ (Nagasandra-Madavara) ಮೆಟ್ರೋ (Namma Metro) ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಬಿಬಿಎಂಪಿಗೆ ಬಿಎಂಆರ್ಸಿಎಲ್ ಪತ್ರ ಬರೆದಿದೆ.
Advertisement
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನುಮತಿಗಾಗಿ ಬಿಎಂಆರ್ಸಿಎಲ್ ಪತ್ರ ಬರೆದಿದೆ. ಈ ತಿಂಗಳ ಅಂತ್ಯದ ಒಳಗಡೆ ಉದ್ಘಾಟನೆ ಮಾಡಲು ಮುಂದಾಗಿದ್ದು, ಹಸಿರು ಮಾರ್ಗದ ವಿಸ್ತರಣೆ ಭಾಗ ಉದ್ಘಾಟನೆಗೆ ಬಿಎಂಆರ್ಸಿಎಲ್ ತಯಾರಿ ಮಾಡಿಕೊಂಡಿದೆ. ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೂತನ ಅತಿಥಿಗಳ ಆಗಮನ
Advertisement
Advertisement
ಎಲ್ಲಾ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು, ಎಲ್ಲಾ ಪರೀಕ್ಷೆಗಳನ್ನು ಮಾಡಲಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಆ.3 ರಂದು ಮಾರ್ಗವನ್ನು ಪರಿಶೀಲಿಸಿ ವಾಣಿಜ್ಯ ಕಾರ್ಯಾಚರಣೆಗೆ ಅನುಮೋದನೆ ನೀಡಲಾಗಿದೆ.
Advertisement
ಈ ತಿಂಗಳ ಅಂತ್ಯದಲ್ಲಿ ಉದ್ಘಾಟನೆ ದಿನಾಂಕ ನಿಗದಿಯಾಗಲಿದೆ. ಗ್ರೀನ್ ಲೈನ್ನ 3.7 ಕಿ.ಮೀ. ಉದ್ದದ ವಿಸ್ತೃತ ಮಾರ್ಗ ಇದಾಗಿದೆ. ಮಂಜುನಾಥ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ಮೂರು ನಿಲ್ದಾಣಗಳನ್ನ ಒಳಗೊಂಡಿದೆ. ಇದನ್ನೂ ಓದಿ: ಟರ್ಫ್ ಕ್ಲಬ್ ಮೆಂಬರ್ಶಿಪ್ ಕೊಡಿಸಲು ಸಿದ್ದರಾಮಯ್ಯ 1.30 ಕೋಟಿ ಲಂಚ ತಗೊಂಡಿದ್ದಾರೆ: ಶೋಭಾ ಕರಂದ್ಲಾಜೆ ಆರೋಪ
ಉದ್ಘಾಟನೆ ದಿನಾಂಕ ನಿಗದಿಗಾಗಿ ನಗರಾಭಿವೃದ್ಧಿ ಇಲಾಖೆಯೊಂದಿಗೆ ಬಿಎಂಆರ್ಸಿಎಲ್ ಮಾತುಕತೆ ನಡೆಸುತ್ತಿದೆ. ಈ ತಿಂಗಳ ಕೊನೆಯಲ್ಲಿ ಒಂದು ದಿನ ವಿಸ್ತೃತ ಮಾರ್ಗ ಉದ್ಘಾಟನೆ ಆಗಲಿದೆ.