ಉಡುಪಿ: ಕೇಂದ್ರದಲ್ಲಿ ನರೇಂದ್ರ ಮೋದಿ (Narendra Modi) ಮೂರನೇ ಬಾರಿಗೆ ಪ್ರಧಾನಿಯಾಗಬೇಕು (Prime Minister) ಎಂದು ಉಡುಪಿಯಲ್ಲಿ (Udupi) ಹೋಮ, ಹವನಗಳನ್ನು ಕೈಗೊಳ್ಳಲಾಗಿದೆ.
2024ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬರುವಂತೆ ನಡೆಸಿದ ಯಾಗ ಇದಾಗಿದ್ದು, ಕಾಪು ತಾಲೂಕು ಪಾದೆಬೆಟ್ಟು ಸುಬ್ರಮಣ್ಯ ಸನ್ನಿಧಿಯಲ್ಲಿ ಪ್ರಾರ್ಥನೆ, ಪೂಜೆ ಹಾಗೂ ಹೋಮವನ್ನು ಅರ್ಚಕರೇ ನೆರವೇರಿಸಿದ್ದಾರೆ. ಇದನ್ನೂ ಓದಿ: ನ್ಯಾಯಾಲಯದ ಮೇಲೆ ನಂಬಿಕೆ ಇದೆ; ಡಿಕೆಶಿ
ಮುಂದಿನ ಲೋಕಸಭಾ ಚುನಾವಣೆ ಉದ್ದೇಶವಾಗಿಟ್ಟುಕೊಂಡು ಹೋಮ ನಡೆಸಲಾಗಿದೆ. ಬಿಜೆಪಿ ಬಹುಮತದೊಂದಿಗೆ ಜಯಗಳಿಸುವಂತೆ ಪ್ರಾರ್ಥಿಸಿ, ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ಪ್ರಾರ್ಥನೆಯನ್ನು ಪೂರ್ಣಾವಧಿಯ ಸಂದರ್ಭದಲ್ಲಿ ಸಲ್ಲಿಕೆ ಮಾಡಲಾಗಿದೆ. ಕ್ಷೇತ್ರದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀರಾಮ ತಾರಕ ಮಂತ್ರ ಹೋಮ, ಚಂಡಿಕಾ ಹೋಮ ನೆರವೇರಿಸಲಾಯಿತು. ಇದನ್ನೂ ಓದಿ: ಕೆಜೆ ಹಳ್ಳಿ, ಡಿಜಿ ಹಳ್ಳಿ ಪ್ರಕರಣದಲ್ಲೂ ಅಫ್ಸರ್ ಪಾಷಾ ಪಾತ್ರ – ಶೋಭಾ ಕರಂದ್ಲಾಜೆ ಆರೋಪ
ಇದೇ ಸಂದರ್ಭ ಅಥರ್ವಶೀರ್ಷ ಮಹಾಗಣಪತಿ ಹೋಮ, ಋಷಭಸೂಕ್ತ ಹೋಮ, ಮನ್ಯುಸೂಕ್ತ ಹೋಮ ಹಾಗೂ ರುದ್ರ ಯಾಗ ನಡೆಸಲಾಯಿತು. ಒಬ್ಬ ವ್ಯಕ್ತಿಯ ಅಭಿವೃದ್ಧಿಗೆ ಮತ್ತು ಜೀವನದ ಒಳಿತಿಗಾಗಿ ಈ ಹೋಮಗಳನ್ನು ನಡೆಸಲಾಗುತ್ತದೆ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡುಗೆ ಇಲ್ಲ ನಂದಿನಿ ತುಪ್ಪ-ಕಾಂಗ್ರೆಸ್ ತನ್ನ ಅಜೆಂಡಾಕ್ಕಾಗಿ ಸುವರ್ಣ ಕರ್ನಾಟಕವನ್ನು ನಾಶ ಮಾಡಲು ಮುಂದಾಗಿದೆ: ಸಿಟಿ ರವಿ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]