ಉಡುಪಿ: ಶಬರಿಮಲೆ ಮಹಿಳೆಯರ ಪ್ರವೇಶದ ವಿಚಾರವನ್ನು ದೇವರೇ ನೋಡಿಕೊಳ್ಳಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ಸಚಿವೆ ಜಯಮಾಲಾ ಹೇಳಿದ್ದಾರೆ.
ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಆತ್ಮಮುಟ್ಟಿಕೊಮಡು ವಿಚಾರ ಮಾಡಲಿ. ಈ ದೇಶ ಎಲ್ಲವನ್ನೂ ಗಮನಿಸುತ್ತಿದೆ. ಅರ್ಧ ಆಕಾಶ, ಅರ್ಧ ಭೂಮಿ ಇದ್ದಂತೆ. ದೇಶದಲ್ಲಿ ಅರ್ಧದಷ್ಟು ಹೆಣ್ಣುಮಕ್ಕಳಿದ್ದಾರೆ. ದೇವರು ನನಗೆ ನಂಬಿಕೆ ಮತ್ತು ನನ್ನ ಬದುಕು. ದೇವರನ್ನೇ ಟಾರ್ಗೆಟ್ ಮಾಡುವವರ ಬಗ್ಗೆ ನಾನೂ ಏನೂ ಹೇಳಲ್ಲ. ನಮಗೆ ಜೀವನದ ಗೆರೆ ಹಾಕಿಕೊಟ್ಟದ್ದು ದೇವರ ನಂಬಿಕೆ. ಹೀಗಾಗಿ ದೇವಸ್ಥಾನವೇ ನನ್ನ ಉಸಿರು. ಅಲ್ಲದೇ ಶಬರಿಮಲೆ ವಿಚಾರದ ಪರ ಹಾಗೂ ವಿರೋಧದ ಬಗ್ಗೆ ಏನನ್ನೂ ಹೇಳಲ್ಲ. ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ. ಕೊನೆಗೆ ದೇವರೆ ಒಂದು ತೀರ್ಮಾನಕ್ಕೆ ಬರುತ್ತಾನೆಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸಿಎಂ ಕುಮಾರಸ್ವಾಮಿ ಹೇಳಿಕೆಯ ಪರ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮಾತನಾಡಿರುವುದನ್ನು ನಾನು ಕೇಳಿದ್ದೇನೆ. ಅವರ ಮಾತಿನ ಅರ್ಥ, ಭಾವನೆ ಮಹಿಳೆಯ ವಿರುದ್ಧ ಇರಲಿಲ್ಲ. ಅವರು ಹೋರಾಟ ಮಾಡಿದ ರೈರ ಮಹಿಳೆಗೆ ಅವಮಾನ ಮಾಡಿಲ್ಲ. ಆದರೆ ಎಲ್ಲರೂ ಅವರವರ ಭಾವಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಗೂಡಾರ್ಥ ಇಟ್ಟುಕೊಂಡು ಮಾತನಾಡಿಲ್ಲ. ಹೆಣ್ಣುಮಕ್ಕಳನ್ನು ತಾಯಿ ಎಂದೇ ಗೌರವದಿಂದ ಕರೆದಿದ್ದಾರೆಂದು ಹೇಳಿದರು.
ಶಬರಿಮಲೆ ಜಯಾಮಲಾ ವಿವಾದ:
ಹೆಸರಾಂತ ಜ್ಯೋತಿಷಿ ಪಿ. ಉಣ್ಣಿಕೃಷ್ಣನ್ ಪಣಿಕ್ಕರ್ ತಂಡವು ಶಬರಿಮಲೆ ದೇವಸ್ಥಾನದಲ್ಲಿ 2006ರ ಜೂನ್‍ನಲ್ಲಿ ನಾಲ್ಕು ದಿನಗಳ ವರೆಗೆ `ದೇವಪ್ರಶ್ನೆ’ ಕೇಳಿ, ದೇವಸ್ಥಾನದ ಗರ್ಭಗುಡಿಯೊಳಗೆ ಮಹಿಳೆಯೊಬ್ಬರು ಪ್ರವೇಶಿಸಿದ್ದರು ಎಂದು ಹೇಳಿತ್ತು. `ದೇವಪ್ರಶ್ನೆ’ ಬಳಿಕ ನಟಿ ಜಯಮಾಲಾ 1987ರಲ್ಲಿ ತಾವು ಈ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಿಸಿದ್ದಾಗಿ ಹೇಳಿಕೊಂಡಿದ್ದರು. ಪಣಿಕ್ಕರ್ ಅವರಿಗೆ ಪ್ರಚಾರಗೊಳಿಸುವುದಕ್ಕಾಗಿ ಜಯಮಾಲಾ ದೇವಸ್ಥಾನ ಪ್ರವೇಶಿಸಿದ್ದಾರೆ ಎಂಬ ಆರೋಪಗಳು ಅಂದು ಕೇಳಿ ಬಂದಿದ್ದವು.
ಜಯಮಾಲಾ ದೇವಸ್ಥಾನ ಪ್ರವೇಸಿಸುವ ಮೂಲಕ ರಾಜ್ಯದ ಜನರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ ಆರೋಪದ ಮೇಲೆ ಪೊಲೀಸರು ಪಣಿಕ್ಕರ್, ಅವರ ಸಹಾಯಕ ರಘುಪತಿ ಹಾಗೂ ನಟಿ ಜಯಮಾಲಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ವಜಾಗೊಳಿಸುವಂತೆ ಈ ಮೂವರು ಕೇರಳ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇದು ಮುಗಿದ ಅಧ್ಯಾಯವಾಗಿದ್ದು, ಆರೋಪಿಗಳ ವಿರುದ್ಧ ಹೊರಿಸಲಾಗಿರುವ ಆರೋಪ ಕಾನೂನು ಬದ್ಧ ಎಲ್ಲ ಅರ್ಜಿಯನ್ನು ವಜಾಗೊಳಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv