– ಗುಜರಾತ್ನಲ್ಲಿ ನೆಗೆಟಿವ್, ಕರ್ನಾಟಕದಲ್ಲಿ ಪಾಸಿಟಿನ್
– ಬೆಂಗ್ಳೂರಿನಲ್ಲಿ 12 ಮಂದಿಗೆ ಕೊರೊನಾ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದು ಒಂದೇ ದಿನದಲ್ಲಿ 41 ಮಂದಿಗೆ ಕೊರೊನಾ ಬಂದಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆಯಾಗಿದೆ.
ರಾಜ್ಯ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿದ ಬುಲೆಟಿನ್ನಲ್ಲಿ, ಬೆಂಗಳೂರಿನಲ್ಲಿ 12, ಚಿತ್ರದುರ್ಗ 3, ದಕ್ಷಿಣ ಕನ್ನಡ 3, ಉತ್ತರ ಕನ್ನಡ 8, ತುಮಕೂರು 4, ಬೀದರ್ 3, ಚಿಕ್ಕಬಳ್ಳಾಪುರ 1, ಬೀದರ್ ಹಾಗೂ ದಾವಣಗೆರೆಯಲ್ಲಿ 6 ಮಂದಿಗೆ ಸೋಂಕು ದೃಢಪಟ್ಟಿದೆ.
Advertisement
Advertisement
ಗುಜರಾತ್ನ ಅಹಮದಾಬಾದ್ನಿಂದ ಮೇ5ರಂದು ಚಿತ್ರದುರ್ಗ ಹಾಗೂ ದಾವಣಗೆರೆಗೆ ಬಂದಿದ್ದವರ ಪೈಕಿ 6 ಜನರಿಗೆ ಇಂದು ಕೊರೊನಾ ದೃಢಪಟ್ಟಿದೆ. ಇವರೆಲ್ಲರಿಗೂ ಗುಜರಾತ್ನಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದಾಗ ರಿಪೋರ್ಟ್ ನೆಗೆಟಿವ್ ಬಂದಿತ್ತು. ಆದರೆ ಇಂದು ಚಿತ್ರದುರ್ಗ ಹಾಗೂ ತುಮಕೂರಿನ ತಲಾ ಮೂವರಿಗೆ ಸೋಂಕು ದೃಢಪಟ್ಟಿದೆ.
Advertisement
ಸೋಂಕಿತರ ವಿವರ:
1. ರೋಗಿ-754: ದಾವಣಗೆರೆಯ 20 ವರ್ಷದ ಯುವತಿ. ರೋಗಿ 651ರ ಸಂಪರ್ಕ
2. ರೋಗಿ-755: ದಾವಣಗೆರೆಯ 45 ವರ್ಷದ ಪುರುಷ. ರೋಗಿ 651ರ ಸಂಪರ್ಕ
3. ರೋಗಿ-756: ದಾವಣಗೆರೆಯ 24 ವರ್ಷದ ಯುವಕ. ರೋಗಿ 651ರ ಸಂಪರ್ಕ
4. ರೋಗಿ-757: ದಾವಣಗೆರೆಯ 24 ವರ್ಷದ ಯುವಕ. ರೋಗಿ 651ರ ಸಂಪರ್ಕ
5. ರೋಗಿ-758: ದಾವಣಗೆರೆಯ 26 ವರ್ಷದ ಯುವಕ. ರೋಗಿ 651ರ ಸಂಪರ್ಕ
Advertisement
6. ರೋಗಿ-759: ಬೆಂಗಳೂರಿನ 36 ವರ್ಷದ ಪುರುಷ. ರೋಗಿ 419ರ ಸಂಪರ್ಕ
7. ರೋಗಿ-760: ಬೆಂಗಳೂರಿನ ನಿವಾಸಿ 60 ವರ್ಷದ ವೃದ್ಧ. ರೋಗಿ 419ರ ಸಂಪರ್ಕ
8. ರೋಗಿ-761: ಬೆಂಗಳೂರಿನ 55 ವರ್ಷದ ಮಹಿಳೆ – ರೋಗಿ 449ರ ಸಂಪರ್ಕ
9. ರೋಗಿ-762: ಬೆಂಗಳೂರಿನ 20 ವರ್ಷದ ಯುವತಿ – ರೋಗಿ 454ರ ಸಂಪರ್ಕ
10. ರೋಗಿ-763: ಬೆಂಗಳೂರಿನ 40 ವರ್ಷದ ಮಹಿಳೆ – ರೋಗಿ 454ರ ಸಂಪರ್ಕ
11. ರೋಗಿ-764: ತುಮಕೂರಿನ 45 ವರ್ಷದ ಪುರುಷ – ಬಿಬಿಎಂಪಿ ಕಂಟೈನ್ಮೆಂಟ್ ಝೋನ್ ವಾರ್ಡಿನ ರೋಗಿ 135ರ ಸಂಪರ್ಕ
12. ರೋಗಿ-765: ಬೆಂಗಳೂರಿನ 20 ವರ್ಷದ ಯುವತಿ – ಬಿಬಿಎಂಪಿ ಕಂಟೈನ್ಮೆಂಟ್ ಝೋನ್ ವಾರ್ಡಿನ ರೋಗಿ 135ರ ಸಂಪರ್ಕ
13. ರೋಗಿ-766: ಬೆಂಗಳೂರಿನ 40 ವರ್ಷದ ಪುರುಷ – ರೋಗಿ 419ರ ಸಂಪರ್ಕ
14. ರೋಗಿ-767: ಬೆಂಗಳೂರಿನ 24 ವರ್ಷದ ಯುವಕ – ರೋಗಿ 419ರ ಸಂಪರ್ಕ
15. ರೋಗಿ-768: ಬೆಂಗಳೂರಿನ 37 ವರ್ಷದ ಮಹಿಳೆ – ರೋಗಿ 419ರ ಸಂಪರ್ಕ
16. ರೋಗಿ-769: ವಿಜಯಪುರದ 11 ವರ್ಷದ ಬಾಲಕಿ – ರೋಗಿ 510ರ ಸಂಪರ್ಕ
17. ರೋಗಿ-770: ಬೀದರ್ನ 30 ವರ್ಷದ ಪುರುಷ – ರೋಗಿ 647ರ ಸಂಪರ್ಕ
18. ರೋಗಿ-771: ಬೀದರ್ನ 12 ವರ್ಷದ ಬಾಲಕಿ – ರೋಗಿ 648ರ ಸಂಪರ್ಕ
19. ರೋಗಿ-772: ಬೀದರ್ನ 30 ವರ್ಷದ ಮಹಿಳೆ- ರೋಗಿ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
20. ರೋಗಿ-773: ಬೆಂಗಳೂರಿನ 46 ವರ್ಷದ ಪುರುಷ- ರೋಗಿ 454ರ ಸಂಪರ್ಕ
21. ರೋಗಿ-774: ಬೆಂಗಳೂರಿನ 19 ವರ್ಷದ ಯುವತಿ- ರೋಗಿ 454ರ ಸಂಪರ್ಕ
22. ರೋಗಿ-775: ಬೆಂಗಳೂರಿನ 31 ವರ್ಷದ ಮಹಿಳೆ- ರೋಗಿ 449ರ ಸಂಪರ್ಕ
23. ರೋಗಿ-776: ದಾವಣಗೆರೆಯ 48 ವರ್ಷದ ಪುರುಷ- ರೋಗಿ 553ರ ದ್ವಿತೀಯ ಸಂಪರ್ಕ
24. ರೋಗಿ-777: ದಕ್ಷಿಣ ಕನ್ನಡ, ಬಂಟ್ವಾಳದ 30 ವರ್ಷದ ಯುವಕ- ರೋಗಿ 578ರ ಸಂಪರ್ಕ
25. ರೋಗಿ-778: ಬಂಟ್ವಾಳದ 60 ವರ್ಷದ ಮಹಿಳೆ- ರೋಗಿ 578ರ ಸಂಪರ್ಕ
26. ರೋಗಿ-779: ಬಂಟ್ವಾಳದ 70 ವರ್ಷದ ವೃದ್ಧೆ- ರೋಗಿ 578ರ ಸಂಪರ್ಕ
27. ರೋಗಿ-780: ಉತ್ತರ ಕನ್ನಡ ಭಟ್ಕಳದ 2 ವರ್ಷದ ಬಾಲಕಿ- ರೋಗಿ 659ರ ದ್ವಿತೀಯ ಸಂಪರ್ಕ
28. ರೋಗಿ-781: ಭಟ್ಕಳದ 65 ವರ್ಷದ ವೃದ್ಧ- ರೋಗಿ 659ರ ದ್ವಿತೀಯ ಸಂಪರ್ಕ
29. ರೋಗಿ-782: ಭಟ್ಕಳದ 50 ವರ್ಷದ ಮಹಿಳೆ- ರೋಗಿ 659ರ ದ್ವಿತೀಯ ಸಂಪರ್ಕ
30. ರೋಗಿ-783: ಭಟ್ಕಳದ 68 ವರ್ಷದ ಮಹಿಳೆ- ರೋಗಿ 740ರ ಸಂಪರ್ಕ
31. ರೋಗಿ-784: ಭಟ್ಕಳದ 1 ವರ್ಷ 5 ತಿಂಗಳ ಬಾಲಕಿ- ರೋಗಿ 659ರ ದ್ವಿತೀಯ ಸಂಪರ್ಕ
32. ರೋಗಿ-785: ಭಟ್ಕಳದ 17 ವರ್ಷದ ಬಾಲಕಿ- ರೋಗಿ 659ರ ದ್ವಿತೀಯ ಸಂಪರ್ಕ
33. ರೋಗಿ-786: ಭಟ್ಕಳದ 23ವರ್ಷದ ಯುವತಿ- ರೋಗಿ 659ರ ದ್ವಿತೀಯ ಸಂಪರ್ಕ
34. ರೋಗಿ-787: ಚಿತ್ರದುರ್ಗದ 34 ವರ್ಷದ ಯುವಕ- ಅಹಮದಾಬಾದ್, ಗುಜರಾತ್ಗೆ ಪ್ರಯಾಣ ಮಾಡಿರುವ ಹಿನ್ನೆಲೆ
35. ರೋಗಿ-788: ಚಿತ್ರದುರ್ಗದ 26 ವರ್ಷದ ಯುವಕ- ಅಹಮದಾಬಾದ್, ಗುಜರಾತ್ಗೆ ಪ್ರಯಾಣ ಮಾಡಿರುವ ಹಿನ್ನೆಲೆ
36. ರೋಗಿ-789: ಚಿತ್ರದುರ್ಗದ 17 ವರ್ಷದ ಹುಡುಗ- ಅಹಮದಾಬಾದ್, ಗುಜರಾತ್ಗೆ ಪ್ರಯಾಣ ಮಾಡಿರುವ ಹಿನ್ನೆಲೆ
ಮಧ್ಯಾಹ್ನದ ವರದಿ:
37. ರೋಗಿ-790: ಚಿಕ್ಕಬಳ್ಳಾಪುರದ 71 ವರ್ಷದ ಯುವಕ. ಸೋಂಕಿನ ಮೂಲ ಪತ್ತೆಯಾಗಿಲ್ಲ.
38. ರೋಗಿ-791: ಉತ್ತರ ಕನ್ನಡ ಜಿಲ್ಲೆ ಭಟ್ಕಳದ 32 ವರ್ಷದ ಮಹಿಳೆ. ರೋಗಿ-750ರ ಸಂಪರ್ಕ
39. ರೋಗಿ-792: ತುಮಕೂರಿನ 40 ವರ್ಷದ ಪುರುಷ. ಅಹಮದಾಬಾದ್, ಗುಜರಾತ್ಗೆ ಪ್ರಯಾಣ ಮಾಡಿರುವ ಹಿನ್ನೆಲೆ
40. ರೋಗಿ-793: ತುಮಕೂರಿನ 37 ವರ್ಷದ ಪುರುಷ. ಅಹಮದಾಬಾದ್, ಗುಜರಾತ್ಗೆ ಪ್ರಯಾಣ ಮಾಡಿರುವ ಹಿನ್ನೆಲೆ
41. ರೋಗಿ-794: ತುಮಕೂರಿನ 38 ವರ್ಷದ ಪುರುಷ. ಅಹಮದಾಬಾದ್, ಗುಜರಾತ್ಗೆ ಪ್ರಯಾಣ ಮಾಡಿರುವ ಹಿನ್ನೆಲೆ
ಇಂದು ಡಿಸ್ಚಾರ್ಜ್:
ರಾಜ್ಯದ ವಿವಿಧ ಜಿಲ್ಲೆಗಳಿಂದ ಇಂದು ಒಟ್ಟು 10 ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಂಡ್ಯದಲ್ಲಿ ಮೂವರು (ರೋಗಿ-324, 442, 443), ಮೈಸೂರಿನಲ್ಲಿ ಇಬ್ಬರು (ರೋಗಿ-319, 497), ಕಲಬುರಗಿಯಲ್ಲಿ ಇಬ್ಬರು (ರೋಗಿ-423, 445), ಬೆಂಗಳೂರಿನಲ್ಲಿ ಇಬ್ಬರು (ರೋಗಿ-471, 476) ಹಾಗೂ ತುಮಕೂರಿನಲ್ಲಿ ಒಬ್ಬರು (ರೋಗಿ-447) ಗುಣಮುಖರಾಗಿ ಮನೆಗೆ ತೆರಳಿದ್ದಾರೆ.