– ಬಾಗಕೋಟೆಯ ರೋಗಿ-607ರಿಂದ ಮೂವರಿಗೆ ಕೊರೊನಾ
– ದಾವಣಗೆರೆಯಲ್ಲಿ ಕೊರೊನಾಗೆ ಮತ್ತೊಂದು ಸಾವು
– ಬೆಳಗಾವಿಯ 13ರ ಬಾಲಕಿಗೆ ಸೋಂಕು
ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಇಂದು 12 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ.
ದಾವಣಗೆರೆಯ 55 ವರ್ಷದ ಮಹಿಳೆ (ರೋಗಿ-694) ಕೊರೊನಾಗೆ ಇಂದು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ದಾವಣಗೆರೆಯಲ್ಲಿ ಈವರೆಗೂ ಕೊರೊನಾದಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಬಾಗಕೋಟೆಯಲ್ಲಿ ರೋಗಿ-607ರಿಂದ ಮೂವರಿಗೆ ಕೊರೊನಾ ತಗುಲಿದೆ.
Advertisement
Advertisement
ರಾಜ್ಯ ಆರೋಗ್ಯ ಇಲಾಖೆ ಇಂದು ಮಧ್ಯಾಹ್ನ ಬಿಡುಗಡೆಯಾದ ಬುಲೆಟಿನ್ನಲ್ಲಿ, ದಾವಣಗೆರೆ, ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ತಲಾ ಮೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಬೆಳಗಾವಿಯ 13 ವರ್ಷದ ಬಾಲಕಿಯಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
Advertisement
ಸೋಂಕಿತರ ವಿವರ:
1. ರೋಗಿ-694: ದಾವಣಗೆರೆಯ 55 ವರ್ಷದ ಮಹಿಳೆ. ತೀವ್ರ ಉಸಿರಾಟದ ತೊಂದರೆ
2. ರೋಗಿ-695: ದಾವಣಗೆರೆಯ 53 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
3. ರೋಗಿ-696: ದಾವಣಗೆರೆಯ 40 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
4. ರೋಗಿ-697: ಕಲಬುರಗಿ 35 ವರ್ಷದ ಪುರುಷ. ರೋಗಿ-642ರ ಜೊತೆ ಸಂಪರ್ಕದಲ್ಲಿದ್ದರು
5. ರೋಗಿ-698: ಕಲಬುರಗಿಯ 36 ವರ್ಷದ ಪುರುಷ. ರೋಗಿ-641ರ ಸಂಪರ್ಕದಲ್ಲಿದ್ದರು.
Advertisement
6. ರೋಗಿ-699: ಕಲಬುರಗಿಯ 41 ವರ್ಷದ ಪುರುಷ. ರೋಗಿ-641ರ ಸಂಪರ್ಕದಲ್ಲಿದ್ದರು.
7. ರೋಗಿ-700: ಬೆಳಗಾವಿ ಜಿಲ್ಲೆ ಹೀರೆಬಾಗೇವಾಡಿಯ 13 ವರ್ಷದ ಬಾಲಕಿ. ರೋಗಿ-364ರ ಸಂಪರ್ಕ ಸಂಪರ್ಕದಲ್ಲಿದ್ದರು.
8. ರೋಗಿ-701: ಬೆಂಗಳೂರಿನ 49 ವರ್ಷದ ಮಹಿಳೆ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
9. ರೋಗಿ-702: ಬಾಗಲಕೋಟೆ ಜಿಲ್ಲೆ ಬಾದಾಮಿಯ 55 ವರ್ಷದ ಮಹಿಳೆ. ರೋಗಿ-607ರ ಸಂಪರ್ಕದಲ್ಲಿದ್ದರು.
10. ರೋಗಿ-703: ಬಾಗಲಕೋಟೆ ಜಿಲ್ಲೆ ಬಾದಾಮಿಯ 80 ವರ್ಷದ ವೃದ್ಧೆ. ರೋಗಿ-607ರ ಸಂಪರ್ಕದಲ್ಲಿದ್ದರು.
11. ರೋಗಿ-704: ಬಾಗಲಕೋಟೆ ಜಿಲ್ಲೆ ಬಾದಾಮಿಯ 19 ವರ್ಷದ ಯುವತಿ. ರೋಗಿ-607ರ ಸಂಪರ್ಕದಲ್ಲಿದ್ದರು.
12. ರೋಗಿ-705: ಧಾರವಾಡದ 35 ವರ್ಷದ ಪುರುಷ. ಸೋಂಕು ತಗುಲಿದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಇಂದು ಡಿಸ್ಚಾರ್ಜ್:
ಮಾಹಾಮಾರಿ ಕೊರೊನಾ ವಿರುದ್ಧ ಹೋರಾಡಿ ಗುಣಮುಖರಾದ 12 ಮಂದಿಯನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಬೀದರ್ ನಲ್ಲಿ ಮೂವರು (ರೋಗಿ-241, 242, 328) ಬಾಗಲಕೋಟೆಯಲ್ಲಿ ಒಬ್ಬರು (ರೋಗಿ-240), ವಿಜಯಪುರದಲ್ಲಿ ಇಬ್ಬರು (ರೋಗಿ-406, 429) ಕಲಬುರಗಿಯಲ್ಲಿ ಇಬ್ಬರು (ರೋಗಿ-413, 412), ಬಳ್ಳಾರಿಯಲ್ಲಿ ಒಬ್ಬರು (ರೋಗಿ-332) ಹಾಗೂ ಬೆಂಗಳೂರಿನಲ್ಲಿ ಇಬ್ಬರು (ರೋಗಿ-420, 446) ಇಂದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಸೋಂಕಿತ 49 ವರ್ಷದ ಮಹಿಳೆ (ರೋಗಿ-701) ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಯಶವಂತಪುರದ ಸುಬೇದಾರ್ ಪಾಳ್ಯದಲ್ಲಿರುವ ಮಗನ ಮನೆಗೆ ಮಾರ್ಚ್ 12ರಂದು ಬಂದಿದ್ದರು. ಅವರಿಗೆ ಏಪ್ರಿಲ್ 30ರಂದು ಜ್ಚರ ಕಾಣಿಸಿಕೊಂಡಿತ್ತು. ಹೀಗಾಗಿ ಚಿಕನ್ ಗುನ್ಯಾ ಅಂತ ಭಾವಿಸಿ ಯಶವಂತಪುರದ ಖಾಸಗಿ ಆಸ್ಪತ್ರೆಗೆ ಮೇ 1ರಂದು ದಾಖಲಾಗಿದ್ದರು. ಆದರೆ ಅವರಿಗೆ ಕೊರೊನಾ ಲಕ್ಷಣಗಳಿರುವ ಶಂಕೆ ವ್ಯಕ್ತಪಡಿಸಿದ ವೈದ್ಯರು ಚಿಕನ್ ಗುನ್ಯಾ ಟೆಸ್ಟ್ ಜೊತೆಗೆ ಕೋವಿಡ್-19 ಪರೀಕ್ಷೆ ಕೂಡ ಮಾಡಿಸಿದ್ದರು. ಈ ವೇಳೆ ಪಾಸಿಟಿವ್ ಬಂದಿದೆ. ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ವ್ಯಕ್ತಿ ಶಿಫ್ಟ್ ಮಾಡಲಾಗಿದೆ. ಮಹಿಳೆಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಜೊತೆಗೆ ಆಸ್ಪತ್ರೆಯಿಂದ ಇತರೆ ರೋಗಿಗಳ ಸ್ಥಳಾಂತರಗೊಳಿಸಲಾಗಿದೆ.
ಮಂಗಮ್ಮನಪಾಳ್ಯದ ಕೂಲಿ ಕಾರ್ಮಿಕನ ಪುತ್ರಿ ಹಾಗೂ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಗರ್ಭಿಣಿಯ ಕುಟುಂಬದ 9 ಜನರ ವರದಿ ನೆಗೆಟಿವ್ ಬಂದಿದೆ. ಬೆಂಗಳೂರಿನ ಸುಬೇದಾರ ಪಾಳ್ಯವನ್ನು ಸೀಲ್ಡೌನ್ ಮಾಡಲಾಗಿದೆ. ಇತ್ತ 24 ದಿನಗಳ ಬಳಿಕ ಬಾಪೂಜಿನಗರವನ್ನು ಸೀಲ್ಡೌನ್ ನಿಂದ ಮುಕ್ತವಾಗಿದೆ.