– ಭಟ್ಕಳದ 7, ಶಿವಮೊಗ್ಗದ 8 ಮಂದಿಗೆ ಸೋಂಕು ದೃಢ
– ಅಜ್ಮೀರ್‌ನಿಂದ ಬಂದ 22 ಮಂದಿಗೆ ಕೊರೊನಾ
ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದಾರೆ. ಇಂದು 53 ಮಂದಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 848ಕ್ಕೆ ಏರಿಕೆಯಾಗಿದೆ. ರಾಜಸ್ಥಾನದ ಅಜ್ಮೀರ್ ಪ್ರವಾಸದಿಂದ ಹಿಂದಿರುಗಿದ 22 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ರಾಜ್ಯ ಕುಟುಂಬ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ ಮಧ್ಯಾಹ್ನ ಬಿಡುಗಡೆ ಮಾಡಿದ ಬುಲೆಟಿನ್‍ನಲ್ಲಿ, ಬೆಂಗಳೂರು 3, ಉತ್ತರ ಕನ್ನಡ 7, ಕಲಬುರಗಿ 4, ದಾವಣಗೆರೆ 1, ಬೆಳಗಾವಿ 21, ಬಾಗಲಕೋಟೆ 8, ಶಿವಮೊಗ್ಗ 8, ಚಿಕ್ಕಬಳ್ಳಾಪುರ 1 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರಿನ 57 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.
Advertisement
Advertisement
ಸೋಂಕಿತರ ವಿವರ:
1. ರೋಗಿ 795: ಬೆಂಗಳೂರಿನ 29 ವರ್ಷದ ಪುರುಷ. ಬಿಬಿಎಂಪಿ ಕಂಟೈನ್‍ಮೆಂಟ್ ಝೋನ್ ವಾರ್ಡ್ ನಂಬರ್ 135ರ ಸಂಪರ್ಕ
2. ರೋಗಿ 796: ಬೆಂಗಳೂರಿನ 60 ವರ್ಷದ ವೃದ್ಧ. ಅನಾರೋಗ್ಯದಿಂದ ಬಳಲುತ್ತಿದ್ದರು.
3. ರೋಗಿ 797: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 50 ವರ್ಷದ ಮಹಿಳೆ. ರೋಗಿ 659ರ ದ್ವಿತೀಯ ಸಂಪರ್ಕ
4. ರೋಗಿ 798: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 15 ವರ್ಷದ ಬಾಲಕ. ರೋಗಿ 659ರ ದ್ವಿತೀಯ ಸಂಪರ್ಕ
5. ರೋಗಿ 799: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 16 ವರ್ಷದ ಬಾಲಕ. ರೋಗಿ 659ರ ದ್ವಿತೀಯ ಸಂಪರ್ಕ
6. ರೋಗಿ 800: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 42 ವರ್ಷದ ಪುರುಷ. ರೋಗಿ 659ರ ದ್ವಿತೀಯ ಸಂಪರ್ಕ
7. ರೋಗಿ 801: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 21 ವರ್ಷದ ಯುವತಿ. ರೋಗಿ 659ರ ದ್ವಿತೀಯ ಸಂಪರ್ಕ
8. ರೋಗಿ 802: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 31 ವರ್ಷದ ಮಹಿಳೆ. ರೋಗಿ 659ರ ದ್ವಿತೀಯ ಸಂಪರ್ಕ
Advertisement
Advertisement
9. ರೋಗಿ 803: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ 60 ವರ್ಷದ ವೃದ್ಧ. ರೋಗಿ 659ರ ದ್ವಿತೀಯ ಸಂಪರ್ಕ
10. ರೋಗಿ 804: ಚಿಕ್ಕಬಳ್ಳಾಪುರದ ಚಿಂತಾಮಣಿಯ 22 ವರ್ಷದ ಯುವಕ. ರೋಗಿ 790ರ ದ್ವಿತೀಯ ಸಂಪರ್ಕ
11. ರೋಗಿ 805: ಕಲಬುರಗಿಯ ಅಫಜಲ್‍ಪುರದ 35 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆ ಬಳಲುತ್ತಿದ್ದರು.
12. ರೋಗಿ 806: ಕಲಬುರಗಿಯ ಕಮಲಾಪುರದ 30 ವರ್ಷದ ಪುರುಷ. ಮಹಾರಾಷ್ಟ್ರಗೆ ಪ್ರಯಾಣಿಸಿದ ಹಿನ್ನೆಲೆ ಇದೆ.
13. ರೋಗಿ 807: ಕಲಬುರಗಿಯ 72 ವರ್ಷದ ವೃದ್ಧ. ರೋಗಿ 604ರ ಸಂಪರ್ಕ
14. ರೋಗಿ 808: ಶಿವಮೊಗ್ಗದ ಶಿಕಾರಿಪುರದ 65 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣಿಸಿದ್ದರು.
15. ರೋಗಿ 809: ಶಿವಮೊಗ್ಗದ ಶಿಕಾರಿಪುರದ 65 ವರ್ಷದ ವೃದ್ಧ. ಅಹಮದಾಬಾದ್, ಗುಜರಾತ್‍ಗೆ ಪ್ರಯಾಣಿಸಿದ್ದರು.
16. ರೋಗಿ-810: ಶಿವಮೊಗ್ಗ ಶಿಕಾರಿಪುರದ 18 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
17. ರೋಗಿ-811: ಶಿವಮೊಗ್ಗ ಶಿಕಾರಿಪುರದ 56 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
18. ರೋಗಿ-812: ಶಿವಮೊಗ್ಗ ಶಿಕಾರಿಪುರದ 43 ವರ್ಷದ ಪುರುಷ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
19. ರೋಗಿ-813: ಶಿವಮೊಗ್ಗ ಶಿಕಾರಿಪುರದ 25 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
20. ರೋಗಿ-814: ಶಿವಮೊಗ್ಗ ತೀರ್ಥಹಳ್ಳಿಯ 27 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
21. ರೋಗಿ-815: ಶಿವಮೊಗ್ಗ ಶಿಕಾರಿಪುರದ 20 ವರ್ಷದ ಯುವಕ. ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
22. ರೋಗಿ-816: ಬಾಗಲಕೋಟೆಯ 33 ವರ್ಷದ ಪುರುಷ. ರಾಜಸ್ಥಾನದ ಅಜಮೀರ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
23. ರೋಗಿ-817: ಬೆಳಗಾವಿಯ 50 ವರ್ಷದ ಮಹಿಳೆ. ರಾಜಸ್ಥಾನದ ಅಜಮೀರ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
24. ರೋಗಿ-818: ಬಾಗಲಕೋಟೆಯ 29 ವರ್ಷದ ಯುವತಿ. ರಾಜಸ್ಥಾನದ ಅಜಮೀರ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
25. ರೋಗಿ-819: ಬಾಗಲಕೋಟೆಯ 02 ವರ್ಷದ ಹೆಣ್ಣು ಮಗು. ರಾಜಸ್ಥಾನದ ಅಜಮೀರ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
26. ರೋಗಿ-820: ಬೆಳಗಾವಿಯ 38 ವರ್ಷದ ಪುರುಷ. ರಾಜಸ್ಥಾನದ ಅಜಮೀರ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
27. ರೋಗಿ-821: ಬೆಳಗಾವಿಯ 17 ವರ್ಷದ ಯುವತಿ. ರಾಜಸ್ಥಾನದ ಅಜಮೀರ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
28. ರೋಗಿ-822: ಬೆಳಗಾವಿಯ 60 ವರ್ಷದ ವೃದ್ಧೆ. ರಾಜಸ್ಥಾನದ ಅಜಮೀರ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
29. ರೋಗಿ-823: ಬೆಳಗಾವಿಯ 10 ವರ್ಷದ ಬಾಲಕ. ರಾಜಸ್ಥಾನದ ಅಜಮೀರ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ.
30. ರೋಗಿ 824: ಬೆಳಗಾವಿಯ 14 ವರ್ಷದ ಬಾಲಕಿ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
31. ರೋಗಿ 825: ಬೆಳಗಾವಿಯ 40 ವರ್ಷದ ಮಹಿಳೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
32. ರೋಗಿ 826: ಬೆಳಗಾವಿಯ 63 ವರ್ಷದ ವೃದ್ಧ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
33. ರೋಗಿ 827: ಬೆಳಗಾವಿಯ 20 ವರ್ಷದ ಯುವಕ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
34. ರೋಗಿ 828: ಬೆಳಗಾವಿಯ 56 ವರ್ಷದ ವೃದ್ಧೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
35. ರೋಗಿ 829: ಬೆಳಗಾವಿಯ 29 ವರ್ಷದ ಪುರುಷ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
36. ರೋಗಿ 830: ಬೆಳಗಾವಿಯ 60 ವರ್ಷದ ವೃದ್ಧೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
37. ರೋಗಿ 831: ಬೆಳಗಾವಿಯ 25 ವರ್ಷದ ಯುವತಿ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
38. ರೋಗಿ 832: ಬೆಳಗಾವಿಯ 3 ವರ್ಷದ ಹೆಣ್ಣು ಮಗು. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
39. ರೋಗಿ 833: ಬೆಳಗಾವಿಯ 46 ವರ್ಷದ ಮಹಿಳೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
40. ರೋಗಿ 834: ಬೆಳಗಾವಿಯ 50 ವರ್ಷದ ವೃದ್ಧೆ. ಅಜಮೀರ್ ರಾಜಸ್ಥಾನದ ಪ್ರಯಾಣದ ಹಿನ್ನೆಲೆ.
41. ರೋಗಿ 835: ಬಾಗಲಕೋಟೆಯ 30 ವರ್ಷದ ಮಹಿಳೆ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
42. ರೋಗಿ 836: ಬಾಗಲಕೋಟೆಯ 8 ವರ್ಷದ ಬಾಲಕಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
43. ರೋಗಿ 837: ಬಾಗಲಕೋಟೆಯ 12 ವರ್ಷದ ಬಾಲಕಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
44. ರೋಗಿ 838: ಬಾಗಲಕೋಟೆಯ 22 ವರ್ಷದ ಯುವಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
45. ರೋಗಿ 839ಬಾಗಲಕೋಟೆಯ 75 ವಷ್ದ ವೃದ್ಧೆ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
46. ರೋಗಿ 840: ಬೆಳಗಾವಿ 12 ವರ್ಷದ ಬಾಲಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
47. ರೋಗಿ 841. ಬೆಳಗಾವಿಯ 14 ವರ್ಷದ ಬಾಲಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
48. ರೋಗಿ 842: ಬೆಳಗಾವಿಯ 27 ವರ್ಷದ ಮಹಿಳೆ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
49. ರೋಗಿ 843: ಬೆಳಗಾವಿಯ 8 ವರ್ಷದ ಬಾಲಕಿ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
50. ರೋಗಿ 844: ಬೆಳಗಾವಿಯ 3 ವರ್ಷದ ಬಾಲಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.3
51. ರೋಗಿ 845: ಬೆಳಗಾವಿ 6 ವರ್ಷದ ಬಾಲಕ.ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
52. ರೋಗಿ 846: ಬೆಂಗಳೂರಿನ 56 ವರ್ಷದ ಮಹಿಳೆ. ತೀವ್ರ ಉಸಿರಾಟದ ತೊಂದರೆ. ಸಾವು.
53. ರೋಗಿ 847: ದಾವಣಗೆರೆಯ 22 ವರ್ಷದ ಯುವಕ. ರಾಜಸ್ಥಾನದ ಅಜಮೀರ್ ಪ್ರವಾಸದ ಹಿನ್ನೆಲೆ.
53. ರೋಗಿ 848: ಕಲಬುರಗಿಯ 35 ವರ್ಷದ ಪುರುಷ. ಸೋಂಕಿನ ಮೂಲ ಪತ್ತೆಯಾಗಿಲ್ಲ.
ಇಂದು ಡಿಸ್ಚಾರ್ಜ್:
ರಾಜ್ಯದ ವಿವಿಧ ಜಿಲ್ಲೆಗಲ್ಲಿ ಇಂದು 36 ಜನರು ಕೊರೊನಾ ವೈರಸ್‍ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಲಬುರಗಿಯಲ್ಲಿ 13 (ರೋಗಿ-502, 503, 516, 517, 518, 519, 520, 526, 527, 528, 530, 531, 532), ವಿಜಯಪುರದಲ್ಲಿ 8, (ರೋಗಿ-397, 399, 402, 407, 410, 457, 467, 511), ಚಿಕ್ಕಬಳ್ಳಾಪುರಯಲ್ಲಿ 4 (ರೋಗಿ-338, 339, 451, 488), ಗದಗನಲ್ಲಿ 3 (ರೋಗಿ-370, 396, 514) ಮೈಸೂರಿನಲ್ಲಿ 1, (ರೋಗಿ-386), ಇತರೆ ಒಬ್ಬರು (ರೋಗಿ-300), ಬೆಳಗಾವಿಯಲ್ಲಿ 3 (ರೋಗಿ-258, 284, 287) ಹಾಗೂ ಬಾಗಲಕೋಟೆ 3 (ರೋಗಿ-372, 380, 468) ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಪಾದರಾಯನಪುರದಲ್ಲಿ ನಡೆದ ಸಮುದಾಯದ ಪರೀಕ್ಷೆಯಲ್ಲಿ 11ನೇ ಕ್ರಾಸ್ ನಿವಾಸಿಗೆ ಸೋಂಕು ಕಾಣಿಸಿಕೊಂಡಿದೆ. ಈ ವ್ಯಕ್ತಿ ಕೊರೊನಾ ಸೋಂಕಿತರ ಮನೆಯ ಸುತ್ತಮುತ್ತ ಓಡಾಡಿದ್ದನು. ಇನ್ನು ಚಾಮರಾಜಪೇಟೆಯ ಆಂಧ್ರ ಮೂಲದ ವ್ಯಕ್ತಿಗೆ ಸೋಂಕು ತಗುಲಿದೆ. ಸಂಬಂಧಿಕರ ಮನೆಗೆ ಬಂದಿದ್ದ ಈ ವ್ಯಕ್ತಿ ತಪ್ಪು ಮಾಹಿತಿ ನೀಡಿ ನಗರದ ಬುಲ್‍ಟೆಂಪಲ್ ರಸ್ತೆಯ ಖಾಸಗಿ ಆಸ್ಪತ್ರೆಗೆ ಲೋ ಬಿಪಿ ಅಂತ ಹೇಳಿ ದಾಖಲಾಗಿದ್ದಾನೆ. ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಆಂಧ್ರ ಪ್ರದೇಶದಲ್ಲಿ ಸಮುದಾಯದ ಪರೀಕ್ಷೆಗೊಳಗಾಗಿದ್ದ ವ್ಯಕ್ತಿ ಬೆಂಗಳೂರಿನ ಚಾಮರಾಜಪೇಟೆಗೆ ಪತ್ನಿ ಮಗನ ಜೊತೆ ಬಂದಿದ್ದನು. ಸೋಂಕಿತನ ಜೊತೆ ಬಂದಿದ್ದ ವ್ಯಕ್ತಿ ಬೆಂಗಳೂರು ಸುತ್ತಾಡಿದ್ದಾನೆ. ಆದ್ರೆ ಆಸ್ಪತ್ರೆಗೆ ದಾಖಲಾಗುವಾಗ ತನ್ನ ಪ್ರಯಾಣದ ಮಾಹಿತಿಯನ್ನು ಬಚ್ಚಿಟ್ಟಿರುವ ವಿಷಯ ಬೆಳಕಿಗೆ ಬಂದಿದೆ.
ಇಷ್ಟು ದಿನ ಹಸಿರು ವಲಯದಲ್ಲಿದ್ದ ಶಿವಮೊಗ್ಗಕ್ಕೆ ಕೊರೊನಾ ಆಘಾತ ಉಂಟಾಗಿದೆ. ಜಿಲ್ಲೆಗೆ ಬಂದ 9 ತಬ್ಲಿಘಿಗಳ ಪೈಕಿ 8 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.