ನವದೆಹಲಿ: ವಿಶ್ವಕಪ್ ಕ್ರಿಕೆಟ್ (World Cup Cricket) ಪಂದ್ಯದ ವೇಳೆ ಆಯೋಜನೆಗೊಂಡಿರುವ ಲೈಟ್ ಶೋಗೆ ಆಸ್ಟ್ರೇಲಿಯಾದ (Australia) ಸ್ಫೋಟಕ ಬ್ಯಾಟರ್ ಗ್ಲೇನ್ ಮ್ಯಾಕ್ಸ್‌ವೆಲ್ (Glenn Maxwell) ಅಸಮಾಧಾನ ಹೊರ ಹಾಕಿದ್ದಾರೆ.
Advertisement
ನೆದರ್ಲೆಂಡ್ಸ್ (Netherlands) ವಿರುದ್ಧ ವೇಗದ ಶತಕ ಸಿಡಿಸಿದ ನಂತರ ಪ್ರತಿಕ್ರಿಯಿಸಿದ ಅವರು, ಲೈಟ್ ಶೋ (Light Show) ನನಗೆ ತಲೆನೋವು ತಂದಿತ್ತು. ನನ್ನ ಕಣ್ಣುಗಳು ಮರುಹೊಂದಿಸಲು ನನಗೆ ಸ್ವಲ್ಪ ಸಮಯ ಬೇಕಾಗಿತ್ತು ಎಂದು ಹೇಳಿದರು.
Advertisement
ಬಿಗ್ ಬ್ಯಾಷ್ ಪಂದ್ಯದ ವೇಳೆ ಪರ್ತ್ ಸ್ಟೇಡಿಯಂನಲ್ಲಿ ನಾನು ಅಂತಹ ಬೆಳಕಿನ ಪ್ರದರ್ಶನವನ್ನು ನೋಡಿದ್ದೆ. ಈ ಬೆಳಕಿನ ಪ್ರದರ್ಶನ ಭಯಾನಕ ಕಲ್ಪನೆ. ಅಭಿಮಾನಿಗಳಿಗೆ ಅದ್ಭುತವಾಗಿದೆ. ಆದರೆ ಆಟಗಾರರಿಗೆ ಭಯಾನಕವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಒಂದು ಪಂದ್ಯ, ಎರಡು ದಾಖಲೆ; ನೆದರ್ಲೆಂಡ್ಸ್ ವಿರುದ್ಧ ಆಸ್ಟ್ರೇಲಿಯಾಗೆ 309 ರನ್‌ಗಳ ಜಯ
Advertisement
ನೆದರ್ಲೆಂಡ್ಸ್ ವಿರುದ್ಧ ಪಂದ್ಯದಲ್ಲಿ ಆಸ್ಟ್ರೇಲಿಯಾ 309 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 399 ರನ್ ಹೊಡೆದರೆ ನೆದರ್ಲೆಂಡ್ಸ್ 309 ರನ್‌ಗಳಿಗೆ ಆಲೌಟ್ ಆಗಿತ್ತು.
Advertisement
ಗ್ಲೇನ್ ಮ್ಯಾಕ್ಸ್‌ವೆಲ್ 27 ಎಸೆತಗಳಲ್ಲಿ 50 ರನ್ ಹೊಡೆದಿದ್ದರೆ ನಂತರ ಕೇವಲ 13 ಎಸೆತಗಳಲ್ಲಿ 50 ರನ್ ಚಚ್ಚಿದ್ದರು. ಅಂತಿಮವಾಗಿ ಮ್ಯಾಕ್ಸ್‌ವೆಲ್ 106 ರನ್ (44 ಎಸೆತ, 9 ಬೌಂಡರಿ, 8 ಸಿಕ್ಸರ್) ಹೊಡೆದು ಔಟಾದರು.
Web Stories