-ತಪ್ಪಿದ್ರೆ ದಂಡ, ಲೈಸನ್ಸ್ ರದ್ದು
ಬೆಂಗಳೂರು: ಕುರಿ, ಕೋಳಿ ಮಾಂಸ ಮಾರಾಟಕ್ಕೆ ಬಿಬಿಎಂಪಿ ದರ ನಿಗದಿ ಮಾಡಿದೆ.
ಲಾಕ್‍ಡೌನ್ ಲಾಭವನ್ನಾಗಿ ಮಾಡಿಕೊಂಡಿದ್ದ ಮಾಂಸ ಮಾರಾಟಗಾರರು ಸಾರ್ವಜನಿಕರಿಂದ ಡಬಲ್ ಹಣ ಪಡೆಯುತ್ತಿದ್ದರು. ದಿನಾಂಕ 23-03-2020 ರಿಂದ ರಾಜ್ಯ ವ್ಯಾಪಿ ಕೋವಿಡ್ – 19 ಲಾಕ್ ಡೌನ್‍ನ ಹಿನ್ನೆಲೆಯಲ್ಲಿ ಕುರಿ/ಮೇಕೆ/ಕೋಳಿ ಮಾಂಸ ಮಾರಾಟದ ಮಳಿಗೆಗಳಲ್ಲಿ ಮಾಂಸವನ್ನು ದುಬಾರಿ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ರೀತಿಯಾಗಿ ದರವನ್ನು ಏಕಾಏಕಿ ಹೆಚ್ಚಿಸುತ್ತಿರುವುದು ಸಾರ್ವಜನಿಕರಿಗೆ ಅನಗತ್ಯ ಆರ್ಥಿಕ ಹೊರೆಯಾಗಿತ್ತು ಎಂದು ಬಿಬಿಎಂಪಿ ಹೇಳಿದೆ.
Advertisement
ಬಿಬಿಎಂಪಿ ವ್ಯಾಪ್ತಿಯಲ್ಲಿ ಕುರಿ/ಮೇಕೆ/ಕೋಳಿ ಮಾಂಸ ಮಾರಾಟ ಮಳಿಗೆಗಳಲ್ಲಿ ದುಬಾರಿ ದರದಲ್ಲಿ ಮಾಂಸವನ್ನು ಮಾರಾಟ ಮಾಡದಿರಲು ತಿಳಿಸಲಾಗಿದ್ದು, ಪಾಲಿಕೆ ನಿಗದಿಪಡಿಸಿದ ದರದಲ್ಲಿ ಮಾಂಸ ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಒಂದು ವೇಳೆ ಹೆಚ್ಚಿನ ದರದಲ್ಲಿ ಮಾಂಸ ಮಾರಾಟ ಮಾಡುತ್ತಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.#StayHome pic.twitter.com/xUNpFirpWt
— Rakesh Singh IAS (@BBMPAdmn) April 16, 2020
Advertisement
ಹೀಗಾಗಿ ಮಾಂಸ ಮಾರಾಟಕ್ಕೆ ದರ ನಿಗದಿ ಮಾಡಿದ ಬಿಬಿಎಂಪಿ ಕೋಳಿ ಕೆಜಿಗೆ 125 ರಿಂದ 180ಕ್ಕೆ ಮಾರಾಟ ಮಾಡಬೇಕು. ಕುರಿ ಮಾಂಸ ಕೆಜಿಗೆ 700 ರೂಪಾಯಿ ಇದಕ್ಕಿಂತ ಹೆಚ್ಚಿನ ದರಕ್ಕೆ ಮಾರಟ ಮಾಡಿದ್ರೆ ದಂಡ ವಿಧಿಸುವ ಹಾಗೂ ಲೈಸನ್ಸ್ ರದ್ದು ಪಡಿಸುವದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ.
Advertisement
The maximum retail price for chicken and meat has been fixed to protect consumers during the period of lockdown. The details are in the attached order.#BBMPFightsCovid19 #BreakTheChain #StayHome #coronavirus #Bengaluru pic.twitter.com/m6RWoly9Ek
— Tushar Giri Nath IAS (@BBMPCOMM) April 16, 2020
Advertisement
ಅದೇ ರೀತಿ ಮಾಂಸದಂಗಡಿಗಳು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಮೊದಲ ಬಾರಿ ಬಿಸಾಡಿದರೆ 2 ಸಾವಿರ ರೂ. ದಂಡ ಹಾಕಲಾಗುವುದು. ದಂಡ ಹಾಕಿದ್ರೂ ಮತ್ತೆ ಪ್ರಾಣಿ ಮಾಂಸ ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡಿದರೆ ದುಬಾರಿ ದಂಡ ಪಾವತಿಸಬೇಕು.