ಸ್ಯಾಂಡಲ್‌ವುಡ್ ನಟ ಸುದೀಪ್ (Sudeep) ಕುಟುಂಬದಿಂದ ಪ್ರತಿಭಾನ್ವಿತ ಕಲಾವಿದ ಸಂಚಿತ್ (Sanchith Sanjeev) ಹೀರೋ ಆಗಿ ಎಂಟ್ರಿ ಕೊಡುತ್ತಿರೋದು ಹಳೆಯ ವಿಚಾರ. ಈಗ ಲೇಟೆಸ್ಟ್ ವಿಚಾರ ಏನೆಂದರೆ ಸುದೀಪ್ ಅಳಿಯ ಸಂಚಿತ್ ಸಂಜೀವ್ ನಟನೆಯ ಚೊಚ್ಚಲ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ನಟನ ಫಸ್ಟ್ ಲುಕ್ ನೋಡುಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಕಮಿಟ್‌ಮೆಂಟ್‌ಗೆ ನೋ ಎಂದಿದಕ್ಕೆ ಸಿನಿಮಾ ಆಫರ್ಸ್ ಕಡಿಮೆಯಾಗಿದೆ: ‘ಪುಷ್ಪ 2’ ನಟಿ
Advertisement
ಸಂಚಿತ್‌ಗೆ ಇಂದು (ಫೆ.5) ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಅವರ ನಟನೆಯ ಮೊದಲ ಸಿನಿಮಾದ ಟೈಟಲ್ ರಿವೀಲ್ ಮಾಡಲಾಗಿದೆ. ‘ಮ್ಯಾಂಗೋ ಪಚ್ಚ’ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಮೈಸೂರಿನ ಕಥೆ ಇರುವ ಈ ಸಿನಿಮಾದಲ್ಲಿ ಸಂಚಿತ್ ರೆಟ್ರೋ ಗೆಟಪ್‌ನಲ್ಲಿ ಮಿಂಚಿದ್ದಾರೆ. ಮೊದಲ ಸಿನಿಮಾದಲ್ಲೇ ಅವರು ಪ್ರಾಮಿಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೈಟಲ್ ಕೂಡ ವಿಭಿನ್ನವಾಗಿದೆ.
Advertisement
View this post on Instagram
Advertisement
ರಿಲೀಸ್ ಆಗರುವ ಪ್ರೋಮೋದಲ್ಲಿ ಸಂಚಿತ್ ಸಿಗರೇಟ್ ಸೇದುವ ಶೈಲಿಯಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಮ್ಯಾಂಗೋ ಪಚ್ಚ ಅನ್ನೋ ಪಾತ್ರಕ್ಕೆ ನಟ ಜೀವ ತುಂಬುತ್ತಿದ್ದಾರೆ. ಈ ಚಿತ್ರಕ್ಕೆ ವಿವೇಕ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ನಿರ್ಮಾಣಕ್ಕೆ ಕೆಆರ್‌ಜಿ ಸಂಸ್ಥೆ ಜೊತೆ ಪ್ರಿಯಾ ಸುದೀಪ್ ಕೈಜೋಡಿಸಿದ್ದಾರೆ.
Advertisement