– ಮೈಸೂರಿನಲ್ಲೇ ಸ್ಮಾರಕ ಮಾಡುವಂತೆ ಸರ್ಕಾರಕ್ಕೆ ಒತ್ತಾಯ
ಹಾಸನ: ಅರ್ಜುನನನ್ನು (Arjuna) ಕಳೆದುಕೊಂಡಿದ್ದು ನನ್ನ ಮಗನನ್ನೇ ಕಳೆದುಕೊಂಡಂತಾಗಿದೆ ಎಂದು ತನ್ನ ಪ್ರೀತಿಯ ಆನೆಯನ್ನು ನೆನೆದು ಮಾವುತ ವಿನು ಕಣ್ಣೀರಿಟ್ಟಿದ್ದಾರೆ. ಅರ್ಜುನನ ಅಗಲಿಕೆಯ ನೋವಿನಿಂದ ಹೊರಬಾರದ ಅವರು ತಮ್ಮ ಸಂಕಟವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
Advertisement
ಕಳೆದ ಎಂಟು ವರ್ಷಗಳಿಂದ ಅರ್ಜುನನ ಜೊತೆ ನನಗೆ ಒಡನಾಟವಿತ್ತು. ಮೂರು ಬಾರಿ ಅಂಬಾರಿ ಹೊರುವಾಗ ನಾನು ಮಾವುತನಾಗಿದ್ದೆ. ಬೇರೆ ಬೇರೆ ಜಿಲ್ಲೆ ರಾಜ್ಯಗಳಲ್ಲಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅರ್ಜುನನನ್ನು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕಳೆದುಕೊಂಡಿದ್ದು, ನನ್ನ ಮಗನನ್ನೇ ಕಳೆದುಕೊಂಡಂತಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ಕೋಟೆ, ಪ್ರಾಣ ಕಳೆದುಕೊಂಡ ಜಾಗದಲ್ಲಿ ಅರ್ಜುನನ ಸ್ಮಾರಕ ನಿರ್ಮಾಣ: ಸಿಎಂ
Advertisement
Advertisement
ಕಾದಾಟದ ವೇಳೆ ಕಾಲಿಗೆ ಗಾಯವಾಗಿ ರಕ್ತ ಬಂತು, ಆದರೂ ಮದಗಜದ ಜೊತೆ ಅರ್ಜುನ ಹೋರಾಡಿದ. ನಂತರ ಮಿಸ್ ಫೈರ್ ಆಗಿ ಕಾಲಿಗೆ ಗುಂಡು ತಗುಲಿತು. ಪ್ರಶಾಂತ ಆನೆ ಇಲ್ಲದಿದ್ದರೂ ಅರ್ಜುನ ಹೋರಾಡಿ ಗೆಲ್ಲುತ್ತಿದ್ದ. ಆದರೆ ಕಾಲಿಗೆ ಆದ ಗಾಯದಿಂದ ಆತನಿಗೆ ಹೋರಾಡಲು ಆಗಲಿಲ್ಲ. ಈ ವೇಳೆ ಕಾಡಾನೆ ತಿವಿದು ಸಾಯಿಸಿತ್ತು. ಅರ್ಜುನ ಹತ್ತು ಜನರ ಪ್ರಾಣ ಉಳಿಸಿ ತಾನು ಸಾವನ್ನಪ್ಪಿದ್ದಾನೆ ಎಂದು ಅವರು ಭಾವುಕರಾದರು.
Advertisement
ಅರ್ಜುನನ ಸ್ಮಾರಕವನ್ನು ಮೈಸೂರಿನಲ್ಲೇ (Mysuru) ಮಾಡಬೇಕು ಎಂದು ಇದೇ ವೇಳೆ ಅವರು ಕಣ್ಣೀರಿಡುತ್ತಾ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅರ್ಜುನನ ದುರಂತ ಅಂತ್ಯ – ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ