ಮುಂಬೈ: ಆಸ್ಟ್ರೇಲಿಯಾದ (Australian) ವಿಕೆಟ್‌ಕೀಪರ್-ಬ್ಯಾಟರ್ ಮ್ಯಾಥ್ಯೂ ವೇಡ್ (Matthew Wade) ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು, ರಾಷ್ಟ್ರೀಯ ಪುರುಷರ ತಂಡದ ಕೋಚಿಂಗ್‌ಗೆ ಇಳಿಯಲಿದ್ದಾರೆ.
2011ರ ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವೇಡ್, 36 ಟೆಸ್ಟ್, 97 ODIಗಳು ಮತ್ತು 92 T20I ಗಳಲ್ಲಿ ಆಡಿದ್ದಾರೆ. 2024ರ ಜೂನ್‌ನಲ್ಲಿ T20 ವಿಶ್ವಕಪ್‌ನಲ್ಲಿ ಆಡಿದ್ದು ಅವರ ಕೊನೆ ಆಟವಾಗಿತ್ತು. ಇದನ್ನೂ ಓದಿ: ಲಕ್ನೋ ತಂಡದಿಂದ ಕೆ.ಎಲ್ ರಾಹುಲ್ ರಿಲೀಸ್ – ನಿಕೋಲಸ್ ಪೂರನ್ ಮುಂದಿನ ಕ್ಯಾಪ್ಟನ್?
ತಮ್ಮ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿರು ವೇಡ್, ಕಳೆದ T20 ವಿಶ್ವಕಪ್‌ನ ಕೊನೆಯಲ್ಲಿ ನನ್ನ ಅಂತಾರಾಷ್ಟ್ರೀಯ ದಿನಗಳು ಬಹುತೇಕ ಮುಗಿದಿವೆ ಎಂದು ನನಗೆ ಸಂಪೂರ್ಣವಾಗಿ ತಿಳಿದಿತ್ತು. ಕಳೆದ ಕೆಲವು ವರ್ಷಗಳಿಂದ ಕೋಚಿಂಗ್‌ನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೇನೆ. ಅದೃಷ್ಟವಶಾತ್ ಕೆಲವು ಉತ್ತಮ ಅವಕಾಶಗಳು ನನಗೆ ಬಂದಿವೆ. ಇದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ ಮತ್ತು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಬೇಸಿಗೆಯ ತಿಂಗಳುಗಳಲ್ಲಿ ನಾನು BBL ಮತ್ತು ಬೆಸ ಫ್ರಾಂಚೈಸ್ ಲೀಗ್ ಅನ್ನು ಆಡುವುದನ್ನು ಮುಂದುವರಿಸುತ್ತೇನೆ. ಆದರೆ, ಆಟಗಾರನಾಗಿ ಆ ಬದ್ಧತೆಗಳ ಜೊತೆಗೆ ನಾನು ನನ್ನ ಕೋಚಿಂಗ್‌ಗೂ ಹೆಚ್ಚು ಗಮನ ಕೊಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಾಲ್ಕೇ ತಿಂಗಳಿಗೆ ಪಾಕ್ ತಂಡದ ಮುಖ್ಯ ಕೋಚ್ ಹುದ್ದೆಗೆ ಗ್ಯಾರಿ ಗುಡ್‌ಬೈ