ಈ ಹಿಂದೆ ಬಾಲಿವುಡ್, ಟಾಲಿವುಡ್‍ಗಳಲ್ಲಿ ಒಂದು ಸಿನಿಮಾ ಬಂದರೆ ಅದರ ಮುಂದುವರಿದ ಭಾಗವಾಗಿ ಮತ್ತದೇ ಹೆಸರಲ್ಲಿ ಸಿನಿಮಾ ಬರ್ತಾ ಇತ್ತು. ಇದೀಗ ಸ್ಯಾಂಡಲ್‍ವುಡ್‍ನ ಭಾಗ-2ರ ಅಬ್ಬರ ಜೋರಾಗಿದೆ. 1990ರಲ್ಲಿ ತೆರೆಕಂಡು ಯಶಸ್ಸು ಗಳಿಸಿದ ಸಿನಿಮಾವೊಂದು ಈ ಸಾಲಿಗೆ ಸೇರಿದೆ. ಬಿ.ವಿ.ವೈಕುಂಠರಾಜು ಅವರ ಕಾದಂಬರಿ ಆಧರಿಸಿ ಕೂಡ್ಲು ರಾಮಕೃಷ್ಣ ಅವರ ನಿರ್ದೇಶನದಲ್ಲಿ ಅನಂತ್ ನಾಗ್ ಅಭಿನಯದಲ್ಲಿ ಮೂಡಿಬಂದ ಚಿತ್ರ ‘ಉದ್ಭವ’. 29 ವರ್ಷಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ಭಾಗ್ಯ ಸಿಕ್ಕಿದ್ದು ‘ಮತ್ತೆ ಉದ್ಭವ’ ಆರಂಭವಾಗುತ್ತಿದೆ.
‘ಉದ್ಭವ’ ನಿರ್ದೇಶಿಸಿದ್ದ ಕೂಡ್ಲು ರಾಮಕೃಷ್ಣ ಅವರೇ ‘ಮತ್ತೆ ಉದ್ಭವ’ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಅಂದಿನ ಸಿನಿಮಾಗಳಲ್ಲಿ ಇದ್ದಂತ ಕುತೂಹಲ ಈ ಸಿನಿಮಾದಲ್ಲೂ ಕ್ಯಾರಿ ಆಗಲಿವೆ. ‘ಉದ್ಭವ’ದಲ್ಲಿ ಅನಂತ್‍ನಾಗ್‍ಗೆ ಇಬ್ಬರು ಮಕ್ಕಳಿದ್ದರು 29 ವರ್ಷಗಳಲ್ಲಿ ಆ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಇಂದಿನ ‘ಮತ್ತೆ ಉದ್ಭವ’ದಲ್ಲಿ ಮಕ್ಕಳ ಜೊತೆ ಜೊತೆ ಕಥೆ ಸಾಗುತ್ತದೆ.
Advertisement
Advertisement
‘ಉದ್ಭವ’ದಲ್ಲಿ ಅನಂತ್ ನಾಗ್ ಕಾರ್ಪೊರೇಟರ್ ಲೆವೆಲ್‍ನಲ್ಲಿ ತನ್ನ ಆಟವನ್ನ ತೋರಿಸಿದ್ರು. ಮಗ ‘ಮತ್ತೆ ಉದ್ಭವ’ದಲ್ಲಿ ಬೆಳೆದು ದೊಡ್ಡವನಾಗಿದ್ದಾನೆ. ಇಲ್ಲಿ ಯಾವ ರೀತಿಯ ಆಟವನ್ನ ತೋರಿಸುತ್ತಾನೆ ಅನ್ನೋ ಕುತೂಹಲ ನಮ್ಮದು. ಉದ್ಭವ ನೋಡಿದವರಿಗೆ ಅನಂತ್ ನಾಗ್ ನಟನೆ ಕಣ್ಣ ಮುಂದೆ ಇದ್ದೆ ಇರುತ್ತೆ. ಈ ಸಿನಿಮಾ ಮುಂದುವರಿದ ಭಾಗವಾಗಿರುವ ಕಾರಣ ಅಪ್ಪನಿಗೆ ಹೋಲಿಕೆಯಾಗುವಂತ ಪಾತ್ರ ಮುಂದುವರೆಯಲೇ ಬೇಕಾಗುತ್ತದೆ. ಒಂದು ಟೆಂಪಲ್ ಮಾಲ್ ಮೇಲೆ ಸಿನಿಮಾದ ಕಥೆ ಓಡುತ್ತದೆಯಂತೆ. ಈಗಾಗಲೇ ‘ಪ್ರೀಮಿಯರ್ ಪದ್ಮಿನಿ’ ಎಂಬ ಚಿತ್ರದಲ್ಲಿ ಸಕ್ಸಸ್ ಕಂಡಿರುವ ನಟ ಪ್ರಮೋದ್ ಮತ್ತೊಂದು ಹಿಟ್ ಚಿತ್ರ ಇದಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ಇನ್ನು ‘ಬೃಂದಾವನ’ ದಲ್ಲಿ ಎಂಟ್ರಿ ಕೊಟ್ಟ ನಟಿ ಮಿಲನಾ ನಾಗರಾಜ್ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸ್ತಾ ಇದ್ದಾರೆ. ಅವ್ರ ಪಾತ್ರ ಎರಡು ಶೇಡ್‍ಗಳಲ್ಲಿ ಮುಂದುವರಿಯಲಿದ್ದು, ಮಿಲನಾ ನಾಗರಾಜ್ ಸಿನಿಮಾಗೆ ಮಾತ್ರ ನಾಯಕಿ ಅಲ್ಲ ಸಿನಿಮಾದ ಒಳಗೂ ನಾಯಕಿಯ ಪಾತ್ರ ಮಾಡಿದ್ದಾರೆ. ಮತ್ತೊಂದು ಶೇಡ್‍ನಲ್ಲಿ ರಾಜಕಾರಣಿ ಪಾತ್ರದಲ್ಲಿ ಮಿಂಚಿದ್ದಾರೆ.
Advertisement
ಚಿತ್ರವನ್ನು ನಿತ್ಯಾನಂದ ಭಟ್, ಸತ್ಯ, ಮಹೇಶ್ ಮುದ್ಗಲ್ ಮತ್ತು ರಾಜೇಶ್ ನಿರ್ಮಾಣ ಮಾಡಿದ್ದಾರೆ. ಅಂದು ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದ್ದ ‘ಉದ್ಭವ’ದಲ್ಲಿ ಅನಂತ್ ನಾಗ್, ಬಾಲಕೃಷ್ಣ, ಕೆ.ಎಸ್.ಅಶ್ವತ್ಥ್, ಸುಂದರ್ ರಾಜ್ ಕಾಣಿಸಿಕೊಂಡಿದ್ದರು. ‘ಮತ್ತೆ ಉದ್ಭವ’ದಲ್ಲಿ ಅನಂತ್ ನಾಗ್ ನಟಿಸುತ್ತಿಲ್ಲ ಅವರ ಪಾತ್ರವನ್ನು ರಂಗಾಯಣ ರಘು ನಿರ್ವಹಿಸುತ್ತಿದ್ದು, ಉಳಿದಂತೆ ಪ್ರಮೋದ್ ಪಂಜು, ಮಿಲನಾ ನಾಗರಾಜ್ ಮತ್ತಿತರರು ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಾಮಿಡಿ, ಥ್ರಿಲ್ಲರ್ ಸೇರಿದಂತೆ ಮಿಕ್ಸ್ ಮಸಾಲೆ ಕೊಡೋಕೆ ಚಿತ್ರತಂಡ ರೆಡಿ ಆಗಿದೆ. ಜಯಂತ್ ಕಾಯ್ಕಣಿ, ಪ್ರಹ್ಲಾದ್ ಸಾಹಿತ್ಯದ ಮೂರು ಗೀತೆಗಳಿಗೆ ವಿ. ಮನೋಹರ್ ಸಂಗೀತ ನೀಡಿದ್ದಾರೆ. ಮೋಹನ್ ಛಾಯಾಗ್ರಹಣ ಮಾಡಿದ್ದಾರೆ.