ಮತ್ಸ್ಯ 6000 – ಆಳ ಸಮುದ್ರದ ರಹಸ್ಯಗಳನ್ನು ಭೇದಿಸಲು ಭಾರತ ಸಜ್ಜು

Public TV
1 Min Read
Mission Samudrayaan Matsya 6000

– 2026ರ ವೇಳೆಗೆ ಮಾನ ಸಹಿತ ಮಿಷನ್‌ಗೆ ಸಿದ್ಧತೆ

ನವದೆಹಲಿ: ಬಾಹ್ಯಾಕಾಶ ಸಂಶೋಧನೆಯಲ್ಲಿ ಯಶಸ್ಸು ಕಂಡ ಭಾರತ (India) ಈಗ ಸಮುದ್ರಯಾನ ಮಿಷನ್‌ನೊಂದಿಗೆ (Samudrayaan Mission) ಆಳ ಸಮುದ್ರದ ರಹಸ್ಯಗಳನ್ನು ಭೇದಿಸಲು ಸಜ್ಜಾಗಿದೆ.

Samudrayaan Mission Matsya 6000 1

ಮತ್ಸ್ಯ 6000  (Matsya 6000) ಮಿಷನ್ ಮೂಲಕ ಆಳ ಸಮುದ್ರ ಅಧ್ಯಯನ ನಡೆಸಲು ಭಾರತ ಮುಂದಾಗಿದೆ. ಮಾನವ-ನಿರ್ವಹಿತ ಸಬ್‌ಮರ್ಸಿಬಲ್ ಮೂಲಕ ಸಂಶೋಧನೆ ನಡೆಸಲಾಗುತ್ತದೆ. 6,000 ಮೀಟರ್ ಆಳದವರೆಗೆ ಸಮುದ್ರದಲ್ಲಿ ಧುಮುಕಲು ಸಹಾಯವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಚೆನ್ನೈನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (National Institute Of Ocean Technology) ಇದನ್ನು ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: ಏನಿದು ಭಾರತದ ಸಮುದ್ರಯಾನ್‌ ಯೋಜನೆ? ಏನು ಸಂಶೋಧನೆ ಮಾಡಲಿದೆ?

Samudrayaan Mission Matsya 6000

ಈ ವಾಹನವು ಮೂರು ವಿಜ್ಞಾನಿಗಳನ್ನು ಕೊಂಡೊಯ್ಯಬಲ್ಲದು. 12 ಗಂಟೆಗಳ ಕಾಲ ಆಳ ಸಮುದ್ರದಲ್ಲಿ ಸಂಶೋಧನೆ ನಡೆಸಬಲ್ಲ ಸಾಮರ್ಥ್ಯವನ್ನು ಇದು ಹೊಂದಿದೆ. ಸಮುದ್ರ ತಳದಲ್ಲಿ ಕೋಬಾಲ್ಟ್, ನಿಕಲ್ ಮತ್ತು ಅಪರೂಪದ ಖನಿಜಗಳಂತಹ ಸಂಪನ್ಮೂಲಗಳನ್ನು ಗುರುತಿಸುವುದು, ಆಳ ಸಮುದ್ರದ ಅನನ್ಯ ಜೀವಿಗಳನ್ನು ಅಧ್ಯಯನ ಮಾಡುವುದು, ಸಮುದ್ರದ ಆವಾಸವ್ಯವಸ್ಥೆಯ ಸಂರಕ್ಷಣೆಗೆ ಡೇಟಾವನ್ನು ಸಂಗ್ರಹಿಸುವುದು, ಆಳ ಸಮುದ್ರ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರದ ಬಗ್ಗೆ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

Samudrayaan Mission Matsya 6000 2

 

2023ರಿಂದ ಮತ್ಸ್ಯ 6000 ಪರೀಕ್ಷಾ ಹಂತದಲ್ಲಿದೆ. 2026ರ ವೇಳೆಗೆ ಮೊದಲ ಮಾನವ ಸಹಿತ ಧುಮುಕುವಿಕೆಯನ್ನು ಕೈಗೊಳ್ಳಲು ಯೋಜಿಸಲಾಗಿದೆ. ಈ ಮಿಷನ್‌ನೊಂದಿಗೆ ಆಸ್ಟ್ರೇಲಿಯಾ, ಚೀನಾ ಮತ್ತು ಫ್ರಾನ್ಸ್‌ನಂತಹ ದೇಶಗಳ ಜೊತೆಗೆ ಭಾರತ ಸ್ಪರ್ಧಿಸಲಿದೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರದ ಬಗ್ಗೆ ಪಾಕ್‌ಗೆ ಮಾಹಿತಿ ನೀಡುತ್ತಿದ್ದ ಹರಿಯಾಣದ ಯುವಕ ಅರೆಸ್ಟ್

 

 

Share This Article