-ಬ್ಯೂಟಿ ಮೋಸದಾಟಕ್ಕೆ ಸಾಲಗಾರನಾದ ಹಳ್ಳಿ ಹೈದ
ಚಿಕ್ಕಬಳ್ಳಾಪುರ: ಮ್ಯಾಟ್ರಿಮೋನಿಯಲ್ ನಲ್ಲಿ ವಧು-ವರ ಹುಡುಕಾಟದಲ್ಲಿದ್ದೀರಾ? ಹಾಗಾದ್ರೆ ಈ ಸ್ಟೋರಿ ನೀವು ನೋಡಲೇಬೇಕು. ಇಟಲಿ ಬ್ಯೂಟಿಯ ಮದುವೆ ಆಗಲು ಹೊರಟ ಭಾರತದ ಹಳ್ಳಿ ಹೈದನೋರ್ವ ಲಕ್ಷ ಲಕ್ಷ ಪಂಗನಾಮ ಹಾಕಿಸಿಕೊಂಡು ಸಾಲಗಾರನಾಗಿ ಈಗ ಪೊಲೀಸ್ ಠಾಣೆ ಅಲೆದಾಡುವಂತಾಗಿದೆ.
ವಿಚ್ಚೇಧಿತನಾದ ಚಿಕ್ಕಬಳ್ಳಾಪುರ ನಗರದ ನಿವಾಸಿ ಮುನಿರಾಜು ಮೋಸಕ್ಕೊಳಗಾದ ವ್ಯಕ್ತಿ. ಮುನಿರಾಜು ಮದುವೆ ಆಗಬೇಕು ಎಂದು ಕನ್ನಡ ಮ್ಯಾಟ್ರಿಮೋನಿಯಲ್ ನಲ್ಲಿ ತಮ್ಮ ಫ್ರೊಫೈಲ್ ಕ್ರಿಯೇಟ್ ಮಾಡಿ ವಧುವಿನ ಹುಡಕಾಟದಲ್ಲಿ ತೊಡಗಿದ್ದರು. ಒಂದು ದಿನ ಇಂಟರ್ ನ್ಯಾಷನಲ್ ನಂಬರ್ ನಿಂದ ವಾಟ್ಸಾಪ್ ಮುಖಾಂತರ ಚಾಟ್ ಮಾಡಿದ ಬ್ಯೂಟಿ ನಾನು ಮ್ಯಾಟ್ರಿಮೋನಿಯಲ್‍ನಲ್ಲಿ ನಿಮ್ಮ ಪ್ರೊಫೈಲ್ ನೋಡಿದೆ. ನಿಮ್ಮನ್ನ ಮದುವೆ ಆಗಬೇಕು ಅಂತಿದ್ದೀನಿ ಅಂದಿದ್ದಾಳೆ.
Advertisement
Advertisement
ಬ್ಯೂಟಿಯ ಪೋಟೋ ನೋಡಿ ಆಕಾಶಕ್ಕೆ ಮೂರೇ ಗೇಣು ಅಂತ ಕುಣಿದಾಡಿದ ಮುನಿರಾಜು ಬ್ಯೂಟಿ ಜೊತೆ ಚಾಟಿಂಗ್ ಗೆ ಇಳಿದಿದ್ದಾರೆ. ಅತ್ತ ಕಡೆಯಿಂದ ವಾಟ್ಸಪ್ ಮುಖಾಂತರ ಕರೆ ಮಾಡಿದ ಬ್ಯೂಟಿ, ನಾನು ಭಾರತದವಳು ಸದ್ಯ ಇಟಲಿಯಲ್ಲಿ ಪೆಪ್ಸಿಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಮನೆಯವರಿಗೆಲ್ಲಾ ನಿಮ್ಮ ಪ್ರೊಫೈಲ್ ತೋರಿಸಿದ್ದೇನೆ ಭಾರತಕ್ಕೆ ಬಂದು ನಿಮ್ಮನ್ನ ಮದುವೆಯಾಗ್ತೀನಿ ಅಂದಿದ್ದಾಳೆ. ಮೊದೆಲೆರೆಡು ತಿಂಗಳು ಇದೇ ರೀತಿ ಚಾಟಿಂಗ್, ಇಂಟರ್ನೆಟ್ ಕಾಲ್ ಮಾಡಿದ ಬ್ಯೂಟಿ, ನಾನು ಇಂಡಿಯಾಗೆ ಬರ್ತೀನಿ ಇಟಲಿಯಿಂದ ಟಿಕೆಟ್ ಬುಕ್ ಮಾಡಬೇಕು ಹಣ ಕಳಿಸು ಎಂದು ದುಡ್ಡು ಪಡೆದುಕೊಂಡಿದ್ದಾಳೆ.
Advertisement
Advertisement
ಇಟಲಿಯಿಂದ ದೆಹಲಿಗೆ ಬಂದಿದ್ದೀನಿ. ನನ್ನ ಬಳಿ ಇಟಲಿಯ ಒಂದೂವರೆ ಕೋಟಿ ಕರೆನ್ಸಿ ಇದೆ. ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಹಿಡಿದುಕೊಂಡಿದ್ದಾರೆ. ಅವರಿಗೆ ಟ್ಯಾಕ್ಸ್ ಪೇ ಮಾಡಿದರೆ ಎಲ್ಲಾ ಹಣ ವಾಪಾಸ್ ಮಾಡುತ್ತಾರೆ. ಆ ಹಣ ನಿನಗೆ ಕೊಡ್ತೀನಿ ಅಂತ ಹೇಳಿ ಹಣ ಹಾಕಿಸಿಕೊಂಡಿದ್ದಾಳೆ. ಹೀಗೆ ಒಂದಲ್ಲ ಒಂದು ನೆಪ ಹೇಳಿ ಮುನಿರಾಜು ಬಳಿ ಬರೋಬ್ಬರಿ 27 ಲಕ್ಷ ರೂಪಾಯಿ ಹಣ ಪಡೆದ ಬ್ಯೂಟಿ ಕೊನೆಗೆ ಫೋನ್ ಸ್ವಿಚ್ ಆಫ್ ಮಾಡಿ ಸುಮ್ಮನಾಗಿದ್ದಾಳೆ.
ಫೋನ್ ಸ್ವಿಚ್ಛ್ ಅಫ್ ಆದರಿಂದ ಅನುಮಾನಗೊಂಡ ಮುನಿರಾಜು ಮೊದಲು ಬ್ಯಾಂಕಿಗೆ ಹೋಗಿ ಹಣ ಹಾಕಿದ ಖಾತೆಗಳನ್ನು ಪರೀಶೀಲನೆ ಮಾಡಿಸಿದ್ದಾರೆ. ಆಗ ಅವೆಲ್ಲವೂ ಫೇಕ್ ಅಕೌಂಟ್ಸ್ ಅಂತ ಗೊತ್ತಾಗಿದೆ. ಹೀಗಾಗಿ ಸುಂದರಿ ಸಿಗ್ತಾಳೆ ಮದುವೆ ಅಗೋಣ ಅಂತ ಒಂದಲ್ಲ ಎರಡಲ್ಲ ಅಂತ ಸಾಲ ಸೋಲ ಮಾಡಿ ಸರಿಸುಮಾರು 30 ಲಕ್ಷ ಸುರಿದ ಮುನಿರಾಜು ಈಗ ಚಿಕ್ಕಬಳ್ಳಾಪುರ ಜಿಲ್ಲಾ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
ಒಟ್ಟಿನಲ್ಲಿ ಇಟಲಿ ಸುಂದರಿಯ ಸೌಂದರ್ಯಕ್ಕೆ ಮರುಳಾದ ಹಳ್ಳಿ ಹೈದ ಈಗ ಸಾಲದ ಸುಳಿಗೆ ಸಿಲುಕಿದ್ದಾರೆ. ಸ್ವಾಮಿ ನನ್ನ ದುಡ್ಡು ವಾಪಾಸ್ ಕೊಡಿಸಿ ಅಂತ ಪೊಲೀಸರ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ.