ಲಕ್ನೋ: ದನದ ಮಾಂಸ ಸಾಗಿಸುತ್ತಿದ್ದಾನೆ ಎನ್ನುವ ಶಂಕೆಯಿಂದ ವಾಹನ ಚಾಲಕನಿಗೆ ಉತ್ತರ ಪ್ರದೇಶದ ಮಥುರಾ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮೊಹಮ್ಮದ್ ಅಮೀರ್ (35) ಥಳಿತಕ್ಕೊಳಗಾದವರಾಗಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮಥುರಾದ ರಾಲ್ ಗ್ರಾಮದಲ್ಲಿ ನಡೆದಿದೆ. ಪಿಕ್-ಅಪ್ ವ್ಯಾನ್‌ನಲ್ಲಿ ಗೋಮಾಂಸ ಮತ್ತು ದನಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂದು ಶಂಕಿಸಿ ಥಳಿಸಿದ್ದಾರೆ.
Advertisement
ಮೊಹಮ್ಮದ್ ಅಮೀರ್ ವಾಹನ ಚಲಾಯಿಸಿಕೊಂಡು ಮಥುರಾದ ಗೋವರ್ಧನದಿಂದ ಹತ್ರಾಸ್‍ನಲ್ಲಿರುವ ಸಿಕಂದರಾವ್ ಕಡೆಗೆ ಹೋಗುತ್ತಿದ್ದನು. ಕೆಲವು ಸ್ಥಳೀಯರು ಗುಂಪು ವ್ಯಾನ್‍ನನ್ನು ತಡೆದರು. ಗೋ ಮಾಂಸ ಸಾಗಾಟ ಮಾಡುತ್ತಾನೆ ಎಂದು ಅನುಮಾನಿಸಿ ಚಾಲಕನಿಗೆ ಮನಬಂದಂತೆ ಥಳಿಸಿದ್ದಾರೆ.
Advertisement
Advertisement
ಪರವಾನಗಿ ಹೊಂದಿದ್ದ ಕೆಲವು ಪ್ರಾಣಿಗಳ ಶವಗಳನ್ನು ಹೊರತುಪಡಿಸಿ ಯಾವುದೂ ವ್ಯಾನ್‍ನಲ್ಲಿ ಕಂಡುಬಂದಿಲ್ಲ. ವ್ಯಾನ್ ಚಾಲಕನೊಂದಿಗೆ ಸಂಪರ್ಕವಿದೆ ಎಂದು ಶಂಕಿಸಿ ಇತರ ಇಬ್ಬರು ವ್ಯಕ್ತಿಗಳನ್ನು ಸಾರ್ವಜನಿಕರು ಥಳಿಸಿದ್ದಾರೆ. ಆ ಮೂವರನ್ನು ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಲಾಗಿದೆ. ಜೈತ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್‍ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಚುನಾವಣೆವರೆಗೆ ಸುಮ್ಮನಿದ್ದು, ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ: ಡಿಕೆಶಿ
Advertisement
ವಿಎಚ್‍ಪಿಯ ವಿಕಾಶ್ ಶರ್ಮಾ ಮತ್ತು ಬಲರಾಮ್ ಠಾಕೂರ್ ಸೇರಿದಂತೆ 16 ಜನರು ಮತ್ತು ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ, ಅಮೀರ್ ನೀಡಿದ ದೂರಿನ ಮೇರೆಗೆ 307 (ಕೊಲೆ ಯತ್ನ) ಸೇರಿದಂತೆ ಸಂಬಂಧಿತ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಇದೆ ಮೊದಲ ಬಾರಿ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ
A 35-year-old driver of a pick up van was mercilessly beaten up by cow vigilantes in #Mathura’s Raal village, on Sunday night, over suspicion of “ferrying #beef and smuggling #cattle” in his vehicle. @mathurapolice pic.twitter.com/P5wi2Ae7Hs
— Anuja Jaiswal (@AnujaJaiswalTOI) March 21, 2022
ಶರ್ಮಾ ಮತ್ತು ಠಾಕೂರ್ ರಾಲ್ ಗ್ರಾಮದಲ್ಲಿ ತನ್ನ ವಾಹನವನ್ನು ಅಡ್ಡಗಟ್ಟಿದರು. ಪ್ರಾಣಿಗಳ ಶವಗಳನ್ನು ಹತ್ರಾಸ್‍ಗೆ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿದ ನಂತರ ಥಳಿಸಲು ಪ್ರಾರಂಭಿಸಿದರು ಎಂದು ಅಮೀರ್ ಹೇಳಿದ್ದಾರೆ.
ಅಮೀರ್‌ಗೆ ಹೆಚ್ಚಿನ ಗಾಯಗಳಾಗಿಲ್ಲ, ಅವರ ಮುಖ ಮತ್ತು ಭುಜದ ಮೇಲೆ ಗಾಯಗಳಾಗಿವೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.