ಆಸ್ತಿ ವಿಚಾರಕ್ಕೆ ತಂದೆಯ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿದ ಪಾಪಿ ಮಗ

Public TV
1 Min Read
crim

ಲಕ್ನೋ: ಆಸ್ತಿ ವಿಚಾರಕ್ಕೆ ವೃದ್ಧ ತಂದೆಯ ಕತ್ತು ಹಿಸುಕಿ ಮಗನೇ ಹತ್ಯೆಗೈದು, ಶವವನ್ನು ಕಂಬಳಿಯಲ್ಲಿ ಸುತ್ತಿ ನಂತರ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಮಥುರಾದ ನರ್ಹೌಲಿಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಅಮೃತ್ ಲಾಲ್ (55) ಮಾಸ್ಟರ್ ಮೇಸ್ತ್ರಿ ಎಂದು ಗುರುತಿಸಲಾಗಿದೆ. ಸುಮಾರು 10-12 ದಿನಗಳ ಹಿಂದೆ ಅಮೃತ್ ಲಾಲ್ ಅವರ ಪತ್ನಿ ಆಶಾದೇವಿ ಅವರು ತಂದೆ-ಮಗ ಇಬ್ಬರನ್ನು ಮನೆಯಲ್ಲಿ ಬಿಟ್ಟು ತಂದೆಯ ಮನೆಗೆ ಹೋಗಿದ್ದರು. ತಂದೆಯೊಂದಿಗೆ ಏಕಾಂಗಿಯಾಗಿದ್ದ ವಿನೀತ್ ಅಮೃತ್ ಲಾಲ್‍ಗೆ ಮನೆ ಮಾರಾಟ ಮಾಡುವಂತೆ ಒತ್ತಡ ಹೇರಲು ಆರಂಭಿಸಿದ್ದಾರೆ. ಇದಕ್ಕೆ ಅಮೃತ್ ಲಾಲ್ ಅವರು ನಿರಾಕರಿಸಿ ವಿನೀತ್‍ಗೆ ನಿಂದಿಸಿದ್ದಾರೆ. ಇದರಿಂದ ಕೋಪಗೊಂಡ ವಿನೀತ್ ತಂದೆಯ ಕತ್ತನ್ನು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಕಂಬಳಿಯಲ್ಲಿ ಸುತ್ತಿ ಸುಟ್ಟು ಹಾಕಿದ್ದಾನೆ. ಇದನ್ನೂ ಓದಿ: ಉಕ್ರೇನ್‍ನಿಂದ ಮರಳಿದ ವಿದ್ಯಾರ್ಥಿಗಳಿಗೆ ಸೀಟ್ ನೀಡಿ ಶುಲ್ಕವನ್ನು ಸರ್ಕಾರವೇ ಭರಿಸಲಿ: ದಿಗ್ವಿಜಯ್ ಸಿಂಗ್

crime scene e1602054934159

ಈ ಘಟನೆ ಕುರಿತಂತೆ ತನಿಖೆ ವೇಳೆ ಆಶಾದೇವಿ ಅವರು, ವಾಸಿಸುತ್ತಿದ್ದ ಮನೆಯನ್ನು ಮಾರಾಟ ಮಾಡಲು ವಿನೀತ್ ಬಯಸಿದ್ದ. ವಿನೀತ್ ಈಗಾಗಲೇ ತಮ್ಮ 100 ಚದರ ಮೀಟರ್‍ನಷ್ಟು ನಿವೇಶನವನ್ನು ಮಾರಾಟ ಮಾಡಿದ್ದಾನೆ. ಇದು ಕುಟುಂಬದಲ್ಲಿ ವಿವಾದಕ್ಕೆ ಕಾರಣವಾಗಿತ್ತು ಮತ್ತು ವಿನೀತ್ ಆಗಾಗ್ಗೆ ಮನೆಯನ್ನು ಮಾರಾಟ ಮಾಡಿ ತನಗೆ ಪಾಲು ನೀಡುವಂತೆ ಒತ್ತಾಯಿಸುತ್ತಿದ್ದ. ಅಲ್ಲದೇ ನಾಲ್ಕು ವರ್ಷಗಳ ಹಿಂದೆ ಕಿರಿಯ ಮಗ ನೆಹನಾ ಆತ್ಮಹತ್ಯೆ ಮಾಡಿಕೊಂಡಿದ್ದು ಸಹ ಕುಟುಂಬದಲ್ಲಿ ಕಲಹ ಉಂಟಾಗಲು ಕಾರಣವಾಗಿತ್ತು ಎಂದು ಪೊಲೀರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್

Share This Article
Leave a Comment

Leave a Reply

Your email address will not be published. Required fields are marked *