ಲಕ್ನೋ: ಶಿಕ್ಷಕನೊಬ್ಬ ಸುಮಾರು 25 ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ ಅವರನ್ನು ಬ್ಯ್ಲಾಕ್ ಮೇಲ್ ಮಾಡಿರುವಂತಹ ಘಟನೆ ಉತ್ತರ ಪ್ರದೇಶದ ಅಜಮ್ಗಡ ಜಿಲ್ಲೆಯಲ್ಲಿ ನಡೆದಿದೆ.
ಚಂದ್ರಶೇಖರ್ ಯಾದವ್ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಶಿಕ್ಷಕ. ಈತ ತನ್ನ ಕೋಚಿಂಗ್ ಸೆಂಟರ್ ಗೆ ಬರುತ್ತಿದ್ದ ವಿದ್ಯಾರ್ಥಿನಿಯರಲ್ಲಿ ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿ, ನಂತರ ಅವರ ಅಶ್ಲೀಲ ವಿಡಿಯೋ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಆರೋಪಿ ಚಂದ್ರಶೇಖರ್ ಯಾದವ್ ಸಾರೈ ಪಟ್ಟಣದಲ್ಲಿರುವ ರಾಣಿ ನಿವಾಸಿಯಾಗಿದ್ದು, ಈಗ ರಹಮತ್ ಇಂಟರ್ ಕಾಲೇಜಿನಲ್ಲಿ ಗಣಿತಶಾಸ್ತ್ರ ಶಿಕ್ಷಕನಾಗಿದ್ದಾನೆ. ಕಾಲೇಜಿನ ಹೊರಗೆ ಒಂದು ರೂಮನ್ನು ಬಾಡಿಗೆಗೆ ಪಡೆದುಕೊಂಡು, ಅಲ್ಲಿ ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಕೋಚಿಂಗ್ ಕೊಡುತ್ತಿದ್ದನು.
ಆರೋಪಿ ಸಂಜೆ ಐದು ಗಂಟೆಗೆ ಕೋಚಿಂಗ್ ಸೆಂಟರ್ ಬಾಗಿಲು ಮುಚ್ಚುತ್ತಿದ್ದನು. ನಂತರ ಎರಡು-ಮೂರು ವಿದ್ಯಾರ್ಥಿನಿಯರನ್ನು ಸ್ಪೇಷಲ್ ಕ್ಲಾಸ್ ಹೆಸರಿನಲ್ಲಿ ಒಳಗಿಟ್ಟುಕೊಂಡು, ಮೊದಲು ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿ ಅವರಿಗೆ ಲೈಂಗಿಕ ಕಿರುಕುಳ, ನೀಡುತ್ತಿದ್ದನು. ಅಷ್ಟೇ ಅಲ್ಲದೇ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಬಳಿಕ ವಿದ್ಯಾರ್ಥಿನಿಯರಿಗೆ ಆ ವಿಡಿಯೋ ತೋರಿಸಿ ಬ್ಯ್ಲಾಕ್ ಮೇಲ್ ಮಾಡುತ್ತಿದ್ದನು.
ಆರೋಪಿ ಶಿಕ್ಷಕ ಚಂದ್ರಶೇಖರ್ ಯಾದವ್ ವಿದ್ಯಾರ್ಥಿನಿಯರ ವಿಡಿಯೋ ಇಟ್ಟುಕೊಂಡು ಬ್ಯ್ಲಾಕ್ ಮಾಡುತ್ತಿರುವ ಬಗ್ಗೆ ಕೆಲ ವಿದ್ಯಾರ್ಥಿಗಳಿಗೆ ತಿಳಿದಿದೆ. ನಂತರ ವಿದ್ಯಾರ್ಥಿಗಳು ಶಿಕ್ಷಕನ ವಿಡಿಯೋ ಮಾಡಿ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಗಮನಿಸಿದ ಸಾರಾಯಿ ರಾಣಿ ಪೊಲೀಸರು ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆಯನ್ನು ಮುಂದುವರಿಸಿದ್ದಾರೆ. ಆದರೆ ಶಿಕ್ಷಕ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ಈಗ ತಪ್ಪಿಸಿಕೊಂಡಿರುವ ಆರೋಪಿ ಶಿಕ್ಷಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv