Connect with us

Latest

ವಿದ್ಯಾರ್ಥಿನಿಯರಿಗೆ ಪ್ರೀತಿಯ ಪಾಠ ಮಾಡಿದ ಗಣಿತ ಉಪನ್ಯಾಸಕ ಅಮಾನತು: ವಿಡಿಯೋ

Published

on

ಚಂಡೀಗಢ: ಹರಿಯಾಣದ ಗಣಿತ ಉಪನ್ಯಾಸಕನೊಬ್ಬ ವಿದ್ಯಾರ್ಥಿನಿಯರಿಗೆ ಪ್ರೇಮ ಪಾಠ ಹೇಳಿಕೊಟ್ಟು ಕಾಲೇಜಿನಿಂದ ಅಮಾನತುಗೊಂಡಿದ್ದಾನೆ.

ಕರ್ನಾಲ್‍ನ ಮಹಿಳಾ ಕಾಲೇಜಿನ ಚರಣ್ ಸಿಂಗ್ ಅಮಾನತುಗೊಂಡಿರುವ ಉಪನ್ಯಾಸಕ. ಚರಣ್ ಕ್ಲಾಸಿನಲ್ಲಿ ಪ್ರೀತಿ ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿನಿಯೊಬ್ಬಳು ಅದನ್ನು ವಿಡಿಯೋ ಮಾಡಿ ಪ್ರಿನ್ಸಿಪಾಲ್‍ಗೆ ತೋರಿಸಿದ್ದಾಳೆ. ಈ ವಿಡಿಯೋ ನೋಡಿದ ತಕ್ಷಣ ಪ್ರಿನ್ಸಿಪಾಲ್ ಉಪನ್ಯಾಸಕನನ್ನು ಸಸ್ಪೆಂಡ್ ಮಾಡಿದ್ದಾರೆ. ಉಪನ್ಯಾಸಕನ ಪ್ರೀತಿ ಪಾಠದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಚರಣ್ ಸಿಂಗ್ ವಿದ್ಯಾರ್ಥಿನಿಯರಿಗೆ ಬೋರ್ಡ್ ಮೇಲೆ ಪ್ರೀತಿಯ ಮೂರು ಸೂತ್ರ ಹೇಳಿಕೊಟ್ಟಿದ್ದಾನೆ. ಮೊದಲನೇ ಸೂತ್ರ ಕ್ಲೋಸ್ನೆಸ್- ಅಟ್ರ್ಯಾಕ್ಷನ್ = ಫ್ರೆಂಡ್‍ಶಿಪ್, ಎರಡನೇ ಸೂತ್ರ ಕ್ಲೋಸ್ನೆಸ್ + ಅಟ್ರ್ಯಾಕ್ಷನ್ = ರೊಮ್ಯಾಂಟಿಕ್ ಲವ್ ಹಾಗೂ ಮೂರನೇ ಫಾರ್ಮೂಲಾ ಅಟ್ರ್ಯಾಕ್ಷನ್ – ಕ್ಲೋಸ್ನೆಸ್ = ಕ್ರಶ್ ಎಂದು ಉಪನ್ಯಾಸಕ ಪ್ರೀತಿ ಪಾಠ ಮಾಡಿದ್ದಾನೆ.

ಈ ಮೂರು ಸೂತ್ರಗಳನ್ನು ಉಪನ್ಯಾಸಕ ಹಿಂದಿಯಲ್ಲಿ ಹೇಳಿಕೊಟ್ಟಿದ್ದಾನೆ. ಸೂತ್ರದ ಪ್ರತಿಯೊಂದು ಪದವನ್ನು ವಿದ್ಯಾರ್ಥಿನಿಯರಿಗೆ ವಿವರಿಸಿದ್ದಾರೆ. ಅಲ್ಲದೇ ಮದುವೆಯಾದ ಮೇಲೆ ಪತಿ – ಪತ್ನಿಯ ವೃದ್ಧರಾದ ನಂತರ ಅವರ ನಡುವೆ ಆಕರ್ಷಣೆ ಕಡಿಮೆ ಆಗುತ್ತೆ. ಬಳಿಕ ಅವರು ಕೇವಲ ಸ್ನೇಹಿತರಾಗಿ ಇರುತ್ತಾರೆ ಎಂದು ಕ್ಲಾಸಿನಲ್ಲಿ ವಿವರಿಸಿದ್ದಾನೆ. ಪ್ರೀತಿ ಪಾಠ ಕೇಳಿದ ವಿದ್ಯಾರ್ಥಿನಿಯರು ಜೋರಾಗಿ ನಗುತ್ತಾ ‘ಯೆಸ್’ ಸಾರ್ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.

https://www.youtube.com/watch?time_continue=99&v=L-39a3y8YpA

Click to comment

Leave a Reply

Your email address will not be published. Required fields are marked *

www.publictv.in