ಅಕ್ಕನ ಮಗಳಿಗೆ ಜ್ಯೂಸಿನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಮಾವನಿಂದಲೇ ರೇಪ್- ಕೃತ್ಯಕ್ಕೆ ಚಿಕ್ಕಮ್ಮ ಸಾಥ್!

Public TV
1 Min Read
CKB RAPE

ಚಿಕ್ಕಬಳ್ಳಾಪುರ: ತಂಪು ಪಾನೀಯದಲ್ಲಿ ಮತ್ತು ಬರುವ ಔಷಧಿ ಹಾಕಿ ಅಪ್ರಾಪ್ತ ಬಾಲಕಿಯ ಮೇಲೆ ಸ್ವತಃ ಸೋದರಮಾವನೇ ಅತ್ಯಾಚಾರ ಎಸಗಿದ್ದಾನೆ ಎನ್ನುವ ಆರೋಪ ಜಿಲ್ಲೆಯ ಚಿಂತಾಮಣಿಯಲ್ಲಿ ಕೇಳಿಬಂದಿದೆ.

ಆರೋಪಿ ಮಂಜುನಾಥ್ ಎಂಬಾತ 13 ವರ್ಷದ ತನ್ಮ ಅಕ್ಕನ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಅತ್ಯಾಚಾರಕ್ಕೆ ಬಾಲಕಿಯ ಚಿಕ್ಕಮ್ಮ ಕೂಡ ಸಹಕರಿಸಿದ್ದಾಳೆ ಎಂದು ದೂರಿನಲ್ಲಿ ಸಂತ್ರಸ್ತೆ ತಾಯಿ ತಿಳಿಸಿದ್ದಾರೆ.

RAPE 4

ದೂರಿನಲ್ಲಿ ಏನಿದೆ?
ಶುಕ್ರವಾರ ರಾತ್ರಿ ಸುಮಾರು 11 ಗಂಟೆಗೆ ನಾನು ಚಿಕ್ಕಮ್ಮನ ಮನೆಗೆಂದು ಹೋಗಿದ್ದೆ. ಅಲ್ಲಿ ಚಿಕ್ಕಮ್ಮ ನನಗೆ ಕುಡಿಯಲು ಜ್ಯೂಸ್ ಕೊಟ್ಟರು. ನಾನು ಜ್ಯೂಸ್ ಕುಡಿದ ನಂತರ ತಲೆ ಸುತ್ತು ಬಂದಿತ್ತು. ಆಗ ನನ್ನ ಮಾವ ಬಂದು ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನು. ನಾನು ಅದಕ್ಕೆ ನಿರಾಕರಿಸಿದೆ. ಆಗ ನನ್ನ ಮಾವ ನನ್ನನ್ನು ಬಲವಂತವಾಗಿ ತಬ್ಬಿಕೊಂಡು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಮಾವ ಅಲ್ಲಿಂದ ಹೊರಟು ಹೋದನು. ಬಳಿಕ ಚಿಕ್ಕಮ್ಮ ಬಂದು ಇಲ್ಲಿ ನಡೆದಿರುವ ವಿಚಾರವನ್ನು ಯಾರಿಗಾದರೂ ಹೇಳಿದರೆ ಜೀವಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾಳೆ.

CKB RAPE 1

ನಾನು ಗಾರೆ ಕೆಲಸ ಮುಗಿಸಿ ಮನೆಗೆ ಬಂದಾಗ ನನ್ನ ಮಗಳು ಹೊಟ್ಟೆ ನೋವು ಎಂದು ಹೇಳುತ್ತಿದ್ದಳು. ಪ್ರಶ್ನೆ ಮಾಡಿದಾಗ ನಡೆದ ವಿಚಾರವನ್ನು ನನಗೆ ತಿಳಿಸಿದ್ದಾಳೆ. ಮಂಜುನಾಥ್ ಗೆ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರು ಪತ್ನಿಯರು ಬಿಟ್ಟಿದ್ದಾರೆ. ಹೀಗಾಗಿ ನನ್ನ ಮಗಳನ್ನ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಈ ಪ್ಲಾನ್ ಮಾಡಿ ಅತ್ಯಾಚಾರ ಎಸಗಿದ್ದಾನೆ. ಆರೋಪಿಗಳಿಬ್ಬರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ.

ಈ ಸಂಬಂಧ ಸಂತ್ರಸ್ತೆ ಹಾಗೂ ಆಕೆಯ ತಾಯಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಆರೋಪಿ ಮಂಜುನಾಥ್‍ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಕೃತ್ಯಕ್ಕೆ ಸಹಕರಿಸಿದ ಸಂತ್ರಸ್ತೆಯ ಚಿಕ್ಕಮ್ಮ ತಲೆಮರೆಸಿಕೊಂಡಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *