ಶಿವಮೊಗ್ಗ: ಹೆರಿಗೆಯಾದ ಕೆಲವೇ ಗಂಟೆಯಲ್ಲಿ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ. ಮೃತಪಟ್ಟ ಬಾಣಂತಿಯನ್ನು ದಾವಣಗೆರೆ ಜಿಲ್ಲೆ ಹರಿಹರ ಮೂಲದ ಕವಿತಾ (24) ಎಂದು ಗುರುತಿಸಲಾಗಿದೆ.
ತೀವ್ರ ರಕ್ತಸ್ರಾವವಾಗಿ ಹೃದಯಾಘಾತ ಸಂಭವಿಸಿ ಬಾಣಂತಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಜನವರಿ 1ರಂದು ಹೆರಿಗೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಕವಿತಾ, ಜನವರಿ 3ರಂದು ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸ್ವಲ್ಪ ಸಮಯದ ಬಳಿಕ ಕವಿತಾಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ಕೆಲವೇ ಕ್ಷಣಕ್ಕೆ ಹೃದಯಾಘಾತ ಸಂಭವಿಸಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ಮರದ ಕೊಂಬೆ ಬಿದ್ದು 15ರ ಬಾಲಕಿ ದುರ್ಮರಣ
ಗರ್ಭ ಚೀಲದಲ್ಲಿ ನೀರಿನ ಅಂಶ ಸೋರಿಕೆಯಾಗಿ ಹೊರ ಬರುತ್ತದೆ. ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಈ ನೀರಿನ ಅಂಶ ರಕ್ತನಾಳಕ್ಕೆ ಸೇರುತ್ತದೆ. ಆಗ ತೀವ್ರ ರಕ್ತಸ್ರಾವ ಉಂಟಾಗುತ್ತದೆ. ಇಂತಹ ಸಂದರ್ಭ ಹೃದಯಾಘಾತ ಸಂಭವಿಸುತ್ತದೆ ಎಂದು ಡಾ. ತಿಮ್ಮಪ್ಪ ಹೇಳಿದರು.