ಕೊಪ್ಪಳ: ನಗರದ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ರೇಣುಕಾ ಸಾವು ಪ್ರಕರಣದ ಹಿನ್ನೆಲೆ ಬಿಜೆಪಿ (BJP) ಸತ್ಯ ಶೋಧನಾ ಸಮಿತಿ ತಂಡ, ಮೃತಳ ಮನೆ ಮತ್ತು ಆಸ್ಪತ್ರೆಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೀದರ್ (Bidar) ದಕ್ಷಿಣ ಶಾಸಕ ಶೈಲೇಂದ್ರ ಬೆಲ್ದಾಳೆ ನೇತೃತ್ವದ ತಂಡ, ಕುಕನೂರು ತಾಲೂಕಿನ ಆಡೂರು ಗ್ರಾಮದ ಮೃತ ರೇಣುಕಾ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು. ಬಳಿಕ ಮಾಹಿತಿ ಪಡೆದು ನಂತರ ರೇಣುಕಾ ಮೃತಪಟ್ಟಿದ್ದ ಕೊಪ್ಪಳ (Koppal) ಕಿಮ್ಸ್‌ನ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರಿಂದ ಮಾಹಿತಿ ಪಡೆದರು.ಇದನ್ನೂ ಓದಿ: 40% ಆರೋಪಕ್ಕೆ ಕಾಂಗ್ರೆಸಿಗರು ಏನು ದಾಖಲೆ ಕೊಟ್ಟಿದ್ರು: ಬೊಮ್ಮಾಯಿ ಟಕ್ಕರ್
Advertisement
Advertisement
ಆಸ್ಪತ್ರೆಗೆ ಭೇಟಿ ನೀಡಿದ್ದ ಬಿಜೆಪಿ ತಂಡಕ್ಕೆ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಹೆಚ್‌ಒಡಿ ಡಾ.ಬಿ.ಎಚ್.ನಾರಾಯಣಿ ಅವರು ರೇಣುಕಾ ಸಾವಿನ ಬಗ್ಗೆ ಮಾಹಿತಿ ನೀಡಿದರು. ಮೃತ ರೇಣುಕಾ ಕುಷ್ಟಗಿಯಿಂದ ರೆಫರ್ ಆಗಿ, ಡಿ.30ರ ರಾತ್ರಿ 11 ಗಂಟೆಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಅವರು ಮಗು ಹೊಟ್ಟೆಯಲ್ಲೇ ಮೃತಪಟ್ಟು, ಚಿಂತಾಜನಕ ಸ್ಥಿತಿಯಲ್ಲೇ ಇಲ್ಲಿಗೆ ರೆಫರ್ ಆಗಿದ್ದರು. ಕೂಡಲೇ ನಮ್ಮ ವೈದ್ಯರು ಸಿಸೇರಿಯನ್ ಮೂಲಕ ಡೆಲಿವರಿ ಮಾಡಿದ್ದಾರೆ. ರಾತ್ರಿ ಒಂದು ಗಂಟೆ ಒಳಗೆ ಅವರನ್ನು ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ಈ ನಡುವೆ ಎರಡು ಬಾರಿ ಕಾರ್ಡಿಯಾಕ್ ಅರೆಸ್ಟ್ ಆಗಿ, ಡಿ.31ರ ಬೆಳಗ್ಗೆ ಮೃತಪಟ್ಟಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿಯ ಯಾವುದೇ ನಿರ್ಲಕ್ಷ ಇಲ್ಲ ಎಂದು ಮಾಹಿತಿ ನೀಡಿದರು.
Advertisement
ಮೃತಳ ಕುಟುಂಬಸ್ಥರು ಮಾಡಿದ ಕೆಲ ಆರೋಪಗಳ ಬಗ್ಗೆ ಪ್ರಶ್ನಿಸಿ ಉತ್ತರ ಪಡೆದರು. ಬಿಜೆಪಿ ತಂಡದಲ್ಲಿದ್ದ ಡಾ.ಅರುಣಾ, ಡಾ.ನಾರಾಯಣ ಮತ್ತು ಡಾ.ಬಸವರಾಜ ಕ್ಯಾವಟರ್ ಅವರು, ಮೃತ ರೇಣುಕಾ ಆಸ್ಪತ್ರೆಗೆ ಬಂದಾಗ ಇದ್ದ ಸ್ಥಿತಿ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಮರಣೋತ್ತರ ಪರೀಕ್ಷೆ ಮಾಡದೇ ಶವ ಹಸ್ತಾಂತರ ಮಾಡಿರುವುದು ಸರಿಯಲ್ಲ ಎಂದು ಬಿಜೆಪಿ ತಂಡದ ಸದಸ್ಯರು ತಾಕೀತು ಮಾಡಿದರು.
Advertisement
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ತಂಡದ ಶಾಸಕ ಶೈಲೇಂದ್ರ ಬೆಲ್ದಾಳೆ ಪ್ರಕರಣದಲ್ಲಿ ಪ್ರೋಸಿಜರ್ ಲ್ಯಾಪ್ಸ್ ಆಗಿದೆ. ಚಿಕಿತ್ಸೆ ನೀಡಲು ಕಾಲಹರಣ ಮಾಡಿದ್ದಾರೆ. ಉತ್ತಮ ಚಿಕಿತ್ಸೆ ನೀಡಿದ್ದರೆ ಉಳಿಸಿಕೊಳ್ಳಬಹುದಿತ್ತು. ಇಷ್ಟೆಲ್ಲ ನಡೆದರೂ ಜಿಲ್ಲಾ ಉಸ್ತುವಾರಿ ಸಚಿವ ಅಥವಾ ಕ್ಷೇತ್ರದ ಶಾಸಕರು ತಿರುಗಿ ನೋಡಿಲ್ಲ. ಮರಣೋತ್ತರ ಪರೀಕ್ಷೆ ಮಾಡಿದರೆ ಸತ್ಯ ಗೊತ್ತಾಗುತ್ತದೆ ಎಂದರು.
ಬಾಣಂತಿಯರ ಸಾವಿಗೆ ಆರೋಗ್ಯ ಸಚಿವರೆ ನೇರ ಹೊಣೆ. ಔಷಧಿ ಖರೀದಿಯಲ್ಲಿ ಶೇ.30 ರಿಂದ ಶೇ.40ರಷ್ಟು ಲಂಚಾವತಾರ ನಡೆಯುತ್ತಿದೆ. ಅದಕ್ಕೆ ಈ ರೀತಿ ಸಾವು ಆಗುತ್ತಿವೆ. ಆರೋಗ್ಯ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇಷ್ಟು ಜನ ಮೃತಪಟ್ಟರು ಸರ್ಕಾರ ತಿರುಗಿ ನೋಡುತ್ತಿಲ್ಲ. ನಮ್ಮ ವರದಿ ರಾಜ್ಯಾಧ್ಯಕ್ಷರಿಗೆ, ರಾಜ್ಯಪಾಲರಿಗೆ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ಕೊಡುತ್ತೇವೆ ಎಂದರು.ಇದನ್ನೂ ಓದಿ: `ಕೈ’ಗೆ 60% ಕಮೀಷನ್ ಆರೋಪ: ಹೆಚ್‌ಡಿಕೆಗೆ ಬಿಜೆಪಿ ಸಾತ್ – ಸಿಎಂ ಸಚಿವರು ಟಕ್ಕರ್