-ಕೇರಳ, ಮಹಾರಾಷ್ಟ್ರ, ತಮಿಳುನಾಡನ್ನು ಹಿಂದಿಕ್ಕಿದ ಉತ್ತರ ಕರ್ನಾಟಕ
-7 ತಿಂಗಳಲ್ಲಿ 200ರ ಗಡಿ ದಾಟಿದ ನವಜಾತ ಶಿಶುಗಳ ಸಾವು
-7 ತಿಂಗಳಲ್ಲಿ 200ರ ಗಡಿ ದಾಟಿದ ನವಜಾತ ಶಿಶುಗಳ ಸಾವು
ಹುಬ್ಬಳ್ಳಿ: ಆರೋಗ್ಯಕರ ಸಮಾಜ ಸೃಷ್ಟಿ ಮಾಡುವ ನಿಟ್ಟಿನಲ್ಲಿ ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯಕ್ಕಾಗಿ ನಮ್ಮ ರಾಜ್ಯ ಸರ್ಕಾರ ನೂರಾರು ಕೋಟಿ ಅನುದಾನವನ್ನು ಖರ್ಚು ಮಾಡುತ್ತಿದೆ. ತಾಯಿ ಮತ್ತು ಶಿಶು ಮರಣ ಪ್ರಮಾಣ ನಿಯಂತ್ರಿಸಲು ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಸಹ ಪ್ರಯೋಜನವಾಗುತ್ತಿಲ್ಲ. ಅದರಲ್ಲೂ ಉತ್ತರ ಕರ್ನಾಟಕ (Uttarkarnataka) ಭಾಗದಲ್ಲಿ ತಾಯಿ ಮತ್ತು ಮಗುವಿನ ಮರಣ ದೇಶದಲ್ಲಿ ಹೆಚ್ಚಾಗುತ್ತಿರುವುದು ದುರಾದೃಷ್ಟಕರ ಸಂಗತಿ. ಈ ಭಾಗದ ಸಂಜೀವಿನಿ ಎಂದು ಕರೆಯಲ್ಪಡುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(ಕಿಮ್ಸ್) (KIMS) ದಾಖಲಾದ ಅಂಕಿ ಅಂಶಗಳು ಬಾಣಂತಿ ಮತ್ತು ಶಿಶುಗಳಿಗೆ ಸುರಕ್ಷತೆಯಿಲ್ಲ ಎಂಬುವುದನ್ನು ಸಾಬೀತು ಪಡಿಸಿದೆ.
ಕಿಮ್ಸ್ ಅಂಕಿ ಅಂಶಗಳ ಪ್ರಕಾರ ಈ ವರ್ಷದ ಏಪ್ರಿಲ್‍ನಿಂದ ಇಲ್ಲಿಯವರೆಗೆ 206 ಶಿಶುಗಳು ಹಾಗೂ 41 ಮೃತಪಟ್ಟಿದ್ದಾರೆ. ಈ ಪೈಕಿ ಧಾರವಾಡ (Dharwad) ಜಿಲ್ಲೆ ಒಂದರಲ್ಲಿಯೇ 17 ತಾಯಂದಿರು ಹಾಗೂ 122 ಶಿಶುಗಳು ಸಾವನ್ನಪ್ಪಿರುವುದು ನಿಜಕ್ಕೂ ಶೋಚನಿಯ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಯ ಅಂದರೆ ಗದಗ, ಹಾವೇರಿ, ಕೊಪ್ಪಳ, ಕಾರವಾರ, ಬಾಗಲಕೋಟೆ, ಬೆಳಗಾವಿ (Belgavi) ಜಿಲ್ಲೆಯಿಂದ ರೇಫರ್ ಆದ ಕೇಸ್‍ಗಳು ಸಹ ಈ ಅಂಕಿ ಅಂಶಗಳಲ್ಲಿ ಸೇರಿದೆ. ಈ ಸಾವಿನ ಪ್ರಮಾಣ ನಮ್ಮ ರಾಜ್ಯದ ಅಕ್ಕ-ಪಕ್ಕದ ಕೇರಳ (Kerala), ಮಹಾರಾಷ್ಟ್ರ (Maharashtra), ತಮಿಳುನಾಡನ್ನು (Tamilnadu) ಸಹ ಹಿಂದೆ ಹಾಕಿದ್ದು, ವೈದ್ಯಕೀಯ ಲೋಕದಲ್ಲಿ ಕಳವಳ ಶುರುವಾಗಿದೆ. ಇದನ್ನೂ ಓದಿ: ಭಾರತವನ್ನ ಸೋಲಿಸಿದ್ರೆ ಜಿಂಬಾಬ್ವೆ ಹುಡುಗನನ್ನ ಮದ್ವೆ ಆಗ್ತೀನಿ – ಪಾಕ್ ನಟಿ ಬಂಪರ್ ಆಫರ್
ಈ ಪ್ರಮಾಣದ ಸಾವಿಗೆ ಗ್ರಾಮೀಣ ಭಾಗದ ಗರ್ಭಿಣಿ ಮಹಿಳೆಯರ ಮತ್ತು ಕುಟುಂಬಸ್ಥರ ನಿರ್ಲಕ್ಷ್ಯ, ಅನಕ್ಷರಸ್ಥೆ ಮತ್ತು ಮೂಢನಂಬಿಕೆ ಮೂಲಕಾರಣ. ಇದರ ಜೊತೆಗೆ ಅಪೌಷ್ಟಿಕತೆ ಆಹಾರ ಪದ್ಧತಿ ಹಿನ್ನೆಲೆ, ಬಿಪಿ, ಮೂರ್ಚೆರೋಗ, ಡೆಂಗ್ಯೂ ಜ್ವರ, ರಕ್ತದ ಕಣಗಳು ಕಡಿಮೆಯಾಗಿ ಇತ್ತೀಚೆಗೆ ಗರ್ಭಿಣಿಯರಲ್ಲಿ ಹೆಚ್ಚು ಕಾಣಿಸುತ್ತಿದ್ದು, ಇದರಿಂದ ಶಿಶು ಮತ್ತು ತಾಯಿಯರ ಸಾವಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಇದಲ್ಲದೇ ಶಿಶುವಿಗೆ ತಾಯಿಯ ಎದೆಯ ಹಾಲು ಅಮೃತವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಎದೆ ಹಾಲು ಬಿಟ್ಟು ಬೇರೆ ಆಹಾರ ನೀಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ಇದು ಸಹ ಸಾವಿನ ಪ್ರಮಾಣ ಜಾಸ್ತಿಯಾಗಲು ಪ್ರಮುಖ ಕಾರಣ. ಇದರ ಜೊತೆಗೆ ಹೆರಿಗೆ ಸಮಯದಲ್ಲಿ ಗಂಭೀರ ಸ್ವರೂಪದ ಸಮಯದಲ್ಲಿ ಬೇರೆ, ಬೇರೆ ಜಿಲ್ಲೆಗಳ ವೈದ್ಯರು ಚಿಕಿತ್ಸೆ ನೀಡಲು ಹೆದರಿ, ಅಂತಹ ಕೇಸ್‍ಗಳನ್ನು ಕಿಮ್ಸ್‌ಗೆ ರೇಫರ್ ಮಾಡುತ್ತಿದ್ದಾರೆ. ಇದರಿಂದಾಗಿ ಮಾರ್ಗಮಧ್ಯದಲ್ಲಿ ಎಷ್ಟೋ ಜನ ಮೃತಪಟ್ಟಿರುವ ಘಟನೆ ಸಹ ನಡೆದಿವೆ. ಇದನ್ನೂ ಓದಿ: ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ – 2.50 ಕೋಟಿ ರೂ. ಸಂಗ್ರಹ
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]