ಕೊಲೆ ಮಾಡುವುದಕ್ಕಿಂತಲೂ ಮ್ಯಾಚ್ ಫಿಕ್ಸಿಂಗ್ ಘೋರ ಅಪರಾಧ: ಧೋನಿ

Public TV
1 Min Read
dhoni csk new

ಬೆಂಗಳೂರು: ಐಪಿಎಲ್ 2019ರ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ತಂಡದ ಮೇಲೆ ವಿಧಿಸಿದ್ದ ಬ್ಯಾನ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಸಾಕ್ಷ್ಯ ಚಿತ್ರವೊಂದರ ಶೂಟಿಂಗ್ ವೇಳೆ ಧೋನಿ ಈ ಬಗ್ಗೆ ಮಾತನಾಡಿದ್ದು, ನನ್ನ ಪಾಲಿಗೆ ಕೊಲೆ ಮಾಡುವುದಕ್ಕಿಂತ ಮ್ಯಾಚ್ ಫಿಕ್ಸಿಂಗ್ ಬಹುದೊಡ್ಡ ಅಪರಾಧ ಎಂದಿದ್ದಾರೆ.

dhoni csk 2

ತಂಡವೇ ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗಿದ್ದ ಪರಿಣಾಮ ನನ್ನ ಹೆಸರು ಕೂಡ ಅದರಲ್ಲಿ ಕೇಳಿ ಬಂದಿತ್ತು. ಆ ಸಂದರ್ಭ ನಮಗೆ ಕಠಿಣವಾಗಿತ್ತು. ಅಭಿಮಾನಿಗಳು ಕೂಡ ತಂಡಕ್ಕೆ ನೀಡಿದ್ದ ಶಿಕ್ಷೆ ಕಠಿಣ ಎಂದೇ ಭಾವಿಸಿದ್ದರು. ಆದರೆ ನಮ್ಮ ಕಮ್ ಬ್ಯಾಕ್ ಸಮಯ ತುಂಬಾ ಭಾವನಾತ್ಮಕವಾಗಿತ್ತು. ನಾನು ಯಾವಾಗಲು ಹೇಳಿದಂತೆ ನಮ್ಮನ್ನು ಯಾವುದು ಕೊಲ್ಲುತ್ತದೋ ಅದರಿಂದ ನಾವು ಮತ್ತಷ್ಟು ಗಟ್ಟಿಯಾಗುತ್ತೇವೆ ಎಂದು ಧೋನಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಧೋನಿ ಅವರ ಸಾಕ್ಷ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದುವರೆಗೂ ಟ್ವಿಟ್ಟರಿನಲ್ಲಿ 54 ಸಾವಿರ ವ್ಯೂ ಕಂಡಿದೆ. ಅಲ್ಲದೇ 1,543 ಮಂದಿ ವಿಡಿಯೋವನ್ನು ರೀ ಟ್ವೀಟ್ ಮಾಡಿದ್ದಾರೆ. ಈ ಸಾಕ್ಷ್ಯ ಚಿತ್ರದ ಟ್ರೈಲರ್ ಧೋನಿ ಅವರದೊಂದಿಗೆ ಸಿಎಸ್‍ಕೆ ತಂಡದ ಸುರೇಶ್ ರೈನಾ, ರವೀಂದ್ರ ಜಡೇಜಾ ಸೇರಿದಂತೆ ಶೇನ್ ವಾಟ್ಸಾನ್ ಕೂಡ ಕಾಣಿಸಿಕೊಂಡಿದ್ದಾರೆ.

ಎರಡು ವರ್ಷಗಳ ಬ್ಯಾನ್ ಬಳಿಕ ಕಳೆದ ಐಪಿಎಲ್‍ಗೆ ಕಮ್ ಬ್ಯಾಕ್ ಮಾಡಿದ್ದ ತಂಡದ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದು, ಪ್ರಸಕ್ತ ವರ್ಷದ ಟೂರ್ನಿಯ ಮೊದಲ ಪಂದ್ಯದಲ್ಲಿ ಸಿಎಸ್‍ಕೆ, ಬೆಂಗಳೂರು ತಂಡವನ್ನು ಎದುರಿಸಲಿದೆ. ಮಾಚ್ 23 ರಿಂದ ಟೂರ್ನಿ ಆರಂಭಗೊಳ್ಳಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *