ಚಪಾತಿ, ರೋಟಿ ಜೊತೆ ಸವಿಯಿರಿ ಪಂಜಾಬಿ ಸ್ಟೈಲ್ ಮಟರ್ ಪನೀರ್

Public TV
2 Min Read
MATAR PANEER 2

ಹೋಟೆಲ್‌ನಲ್ಲಿ ರೋಟಿ, ಚಪಾತಿ ಜೊತೆ ಸವಿಯಲು ಸೈಡ್ ಡಿಶ್ ಆಗಿ ನಾರ್ತ್ ಇಂಡಿಯನ್ ಗ್ರೇವಿಗಳನ್ನು ಕೊಡುತ್ತಾರೆ. ಇದು ಅತ್ಯಂತ ರುಚಿಕರವಾಗಿದ್ದು, ಮತ್ತೆ ಮತ್ತೆ ತಿನ್ನಬೇಕು ಎಂದೆನಿಸುತ್ತದೆ. ಆದರೆ ಈ ಗ್ರೇವಿಗಳು ತುಂಬಾ ದುಬಾರಿಯಾಗಿದ್ದು, ಪ್ರತಿಸಲ ಹೋಟೆಲ್ ಅಲ್ಲಿ ತಿನ್ನಲು ಅಸಾಧ್ಯ. ಆದ್ದರಿಂದ ಇದನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಿಕೊಂಡು ತಿನ್ನಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಪಂಜಾಬಿ ಸ್ಟೈಲ್ ಮಟರ್ ಪನೀರ್ ಅನ್ನು ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಈ ರೀತಿ ಮಾಡಿ ಕ್ರಿಸ್ಪಿ ಮೆಂತ್ಯ ವಡಾ‌

MATAR PANEER 1

ಬೇಕಾಗುವ ಸಾಮಗ್ರಿಗಳು:
ಪನೀರ್ ಕ್ಯೂಬ್ಸ್ – 250 ಗ್ರಾಂ
ಬಟಾಣಿ – 1 ಕಪ್
ರುಬ್ಬಿದ ಈರುಳ್ಳಿ ಪೇಸ್ಟ್ – 2 ಈರುಳ್ಳಿ
ಟೊಮೆಟೊ ಪ್ಯೂರಿ – 3 ಟೊಮೆಟೊ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಜೀರಾ ಪೌಡರ್ – 1 ಚಮಚ
ಕೊತ್ತಂಬರಿ ಪುಡಿ – 1 ಚಮಚ
ಅಚ್ಚ ಖಾರದ ಪುಡಿ – ಅರ್ಧ ಚಮಚ
ಅರಶಿಣ ಪುಡಿ – ಅರ್ಧ ಚಮಚ
ಜೀರಿಗೆ – ಅರ್ಧ ಚಮಚ
ಕಿಸಾನ್ ಟೊಮೆಟೊ ಪ್ಯೂರಿ – 1 ಚಮಚ
ಕೊತ್ತಂಬರಿ – 1 ಚಮಚ
ಇಂಗು – 1 ಚಿಟಿಕೆ
ಎಣ್ಣೆ – 2 ಚಮಚ
ನೀರು – 1 ಕಪ್

MATAR PANEER

ಮಾಡುವ ವಿಧಾನ:

  • ಮೊದಲಿಗೆ ಒಂದು ಕುಕ್ಕರ್‌ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಇಂಗು, ಜೀರಿಗೆ ಮತ್ತು ರುಬ್ಬಿದ ಈರುಳ್ಳಿ ಪೇಸ್ಟ್ ಅನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಬಳಿಕ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಪುನಃ 2ರಿಂದ 3 ನಿಮಿಷಗಳವರೆಗೆ ಚನ್ನಾಗಿ ತಿರುವಿಕೊಳ್ಳಿ.
  • ಬಳಿಕ ಇದಕ್ಕೆ ತಯಾರಿಸಿದ ಟೊಮೆಟೊ ಪ್ಯೂರಿ ಮತ್ತು ಕಿಸಾನ್ ಟೊಮೆಟೊ ಪ್ಯೂರಿಯನ್ನು ಹಾಕಿಕೊಂಡು ಚನ್ನಾಗಿ ತಿರುವಿಕೊಂಡ ಬಳಿಕ ಉಳಿದ ಮಸಾಲೆಗಳನ್ನು ಹಾಕಿಕೊಂಡು ಎಣ್ಣೆ ಬಿಡುವವರೆಗೂ ಫ್ರೈ ಮಾಡಿಕೊಳ್ಳಬೇಕು.
  • ಈಗ ಇದಕ್ಕೆ ಬಟಾಣಿ ಮತ್ತು ಪನೀರ್ ಕ್ಯೂಬ್ಸ್‌ಗಳನ್ನು ಹಾಕಿಕೊಂಡು ಮಸಾಲೆ ಹಿಡಿಯುವಂತೆ ತಿರುವಿಕೊಳ್ಳಿ. ನಂತರ ನೀರನ್ನು ಹಾಕಿಕೊಂಡು ಉಪ್ಪು, ಖಾರ ಕಡಿಮೆ ಇದ್ದಲ್ಲಿ ಸೇರಿಸಿಕೊಳ್ಳಿ.
  • ನಂತರ ಕುಕ್ಕರ್‌ನ ಮುಚ್ಚಳ ಮುಚ್ಚಿ 2 ವಿಶಲ್ ಕೂಗಿಸಿಕೊಳ್ಳಿ. ನಂತರ ಇದನ್ನು ಕುಕ್ಕರ್‌ನಿಂದ ಸರ್ವಿಂಗ್ ಬೌಲ್‌ಗೆ ಹಾಕಿಕೊಂಡು ಬಿಸಿ ಬಿಸಿ ಅನ್ನ, ಚಪಾತಿ ಹಾಗೂ ರೋಟಿ ಜೊತೆ ಸವಿಯಲು ಕೊಡಿ. ಇದನ್ನೂ ಓದಿ: ಸಿಂಪಲ್ಲಾಗಿ ಮಾಡಿ ಮಶ್ರೂಮ್ 65..

Share This Article